ಬೆಳಗ್ಗೆ ಡಾಂಬರು ಹಾಕಿದ ಬಿಬಿಎಂಪಿ; ಮಧ್ಯರಾತ್ರಿ ರಸ್ತೆ ಅಗೆದು ಹಾನಿ ಮಾಡಿದ ಬಿಡಬ್ಲ್ಯೂಎಸ್ ಎಸ್ ಬಿ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆಗೆ ಟಾರ್ ಮಾಡಿದ 12 ಗಂಟೆಗಳ ನಂತರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ) ಅದೇ ರಸ್ತೆಯನ್ನು ಅಗೆದು, ಆ ಮೂಲಕ ಟಾರ್ ರಸ್ತೆಯನ್ನು ನಾಶಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆಗೆ ಟಾರ್ ಮಾಡಿದ 12 ಗಂಟೆಗಳ ನಂತರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ) ಅದೇ ರಸ್ತೆಯನ್ನು ಅಗೆದು, ಆ ಮೂಲಕ ಟಾರ್ ರಸ್ತೆಯನ್ನು ನಾಶಪಡಿಸಿದೆ.

ಶುಕ್ರವಾರ ಬೆಳಗ್ಗೆ ಬಿಬಿಎಂಪಿ ಪೂರ್ವ ವಲಯದ ಉಡುಪಿ ಗ್ರ್ಯಾಂಡ್ ಹೋಟೆಲ್ ಎದುರಿನ ಹೆಣ್ಣೂರು ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಬೆಳಗಿನ ವಾಕಿಂಗ್ ಮಾಡುವವರು ಹೊಸದಾಗಿ ಡಾಂಬರು ರಸ್ತೆ ಹಾಳಾಗಿರುವುದನ್ನು ಗಮನಿಸಿದಾಗ ಘಟನೆ ವರದಿಯಾಗಿದೆ.

ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆಯನ್ನು ಅಗೆಯಲು ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಬಿಡಬ್ಲ್ಯೂಎಸ್ಎಸ್‌ಬಿ ಎಂಜಿನಿಯರ್ ಒಬ್ಬರು ಹೇಳಿಕೊಂಡಿದ್ದಾರೆ, ಆದರೆ ಪಾಲಿಕೆ ಅಧಿಕಾರಿಗಳು ಲಿಖಿತವಾಗಿ ಒಪ್ಪಿಗೆ ನೀಡಲಿಲ್ಲ ಎಂದು ತಿಳಿದು ಬಂದಿದೆ.

ವಾಟರ್ ವಾಲ್ವ್ ನ ಸುಗಮ ಕಾರ್ಯಾಚರಣೆಗಾಗಿ ವಾಲ್ವ್ ಮ್ಯಾನ್ ಕೇಶವ ರಸ್ತೆಯನ್ನು ಅಗೆದಿದ್ದರು. ನಾವು ಅನುಮತಿಯನ್ನು ತೆಗೆದುಕೊಂಡಿದ್ದೇವೆ ಮತ್ತು ಸಣ್ಣ ಹಾನಿ ಮಾತ್ರ ಸಂಭವಿಸಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಬಿಡಬ್ಲ್ಯುಎಸ್‌ಎಸ್‌ಬಿ ಯಾವುದೇ ಲಿಖಿತ ಅನುಮತಿ ಪಡೆದಿಲ್ಲ, ಮಧ್ಯರಾತ್ರಿ ಕೆಲಸವನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಯಿತು. ಎಂದು ಬಿಬಿಎಂಪಿಯ ಪ್ರಮುಖ ರಸ್ತೆಗಳ (ಪೂರ್ವ ವಿಭಾಗ) ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಬೆಳಗ್ಗೆ ನಮಗೆ ಈ ರೀತಿಯ ದೂರು ಬಂದಿತು. ರಸ್ತೆಗೆ ಡಾಂಬರ್ ಹಾಕುವಾಗ ಹಾಜರಿರಲು ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ ಅವರು ಬರಲಿಲ್ಲ, ಈಗ ವಾಲ್ವ್‌ಗೆ ಆರು ಇಂಚು ಕಟ್ ಮಾಡುವ ಬದಲು ವಾಲ್ವ್ ಮ್ಯಾನ್ ಮೂರು ಅಡಿ ರಸ್ತೆಯನ್ನು ಕತ್ತರಿಸಿ ಹಾಳು ಮಾಡಿದ್ದಾರೆ ಎಂದು ಶ್ರೀನಿವಾಸ್ ಹೇಳಿದರು.

BWSSB, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಇತರ ಆಪ್ಟಿಕಲ್ ಫೈಬರ್ ಕಂಪನಿಗಳಂತಹ ಏಜೆನ್ಸಿಗಳು ಆಗಾಗ್ಗೆ ರಸ್ತೆಗಳನ್ನು ಅಗೆದು ಅನಾನುಕೂಲತೆಯನ್ನು ಉಂಟುಮಾಡುತ್ತವೆ ಎಂದು ಅವರು ಹೇಳಿದರು.  ನಾಗರಿಕ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದ ಹೆಣ್ಣೂರು ರಸ್ತೆಯ ನಿವಾಸಿ ವಿಂಕಲ್ ಮಥಿಯಾಸ್, ಬಿಬಿಎಂಪಿ  ಡಾಂಬರು ಹಾಕಿ ರಿಪೇರಿ ಮಾಡಿದ ನಂತರ  BWSSB ರಸ್ತೆಯನ್ನು ಅಗೆದು ಹಾಳು ಮಾಡುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com