ವಿಧಾನ ಸೌಧ, ವಿಕಾಸ ಸೌಧ ಸುರಕ್ಷತೆಗೆ ವಿಶೇಷ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

ರಾಜ್ಯದ ಶಕ್ತಿಕೇಂದ್ರ ಕಟ್ಟಡಗಳಾದ  ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಆಗಮಿಸುವವರ ಬಗ್ಗೆ ಇಪ್ಪತ್ನಾಲ್ಕು ಗಂಟೆಗಳ ಕಣ್ಗಾವಲು ಇದ್ದು,  ಭದ್ರತೆ ಬಗ್ಗೆ ಯಾವುದೇ ರೀತಿಯ ರಾಜಿಯಿಲ್ಲ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ವಿಧಾನ ಪರಿಷತ್ ನಲ್ಲಿ ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಕಟ್ಟಡಗಳಾದ  ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಆಗಮಿಸುವವರ ಬಗ್ಗೆ ಇಪ್ಪತ್ನಾಲ್ಕು ಗಂಟೆಗಳ ಕಣ್ಗಾವಲು ಇದ್ದು, ಭದ್ರತೆ ಬಗ್ಗೆ ಯಾವುದೇ ರೀತಿಯ ರಾಜಿಯಿಲ್ಲ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ವಿಧಾನ ಪರಿಷತ್ ನಲ್ಲಿ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಟ್ಟಡಗಳ ಪ್ರವೇಶ ಸ್ಥಳಗಳಲ್ಲಿ ಅಳವಡಿಸಿದ ತಪಾಸಣಾ ಯಂತ್ರೋಪಕರಣಗಳು, ಬಹಳ ಹಳೆಯ ಕಾಲದವುಗಳಾಗಿದ್ದು ಅವುಗಳನ್ನು ಬದಲಾಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

"ವಿಧಾನ ಸೌಧ ಹಾಗೂ ವಿಕಾಸ ಸೌಧ ಕಟ್ಟಡಗಳಿಗೆ ಪ್ರವೇಶ ಪಡೆಯುವವರ ಬಗ್ಗೆ, ಎಲ್ಲಾ ರಕ್ಷಣಾ ಪ್ರೋಟೋಕಾಲ್ ನಿಯಮಗಳ ಪ್ರಕಾರ ತಪಾಸಣೆ ನಡೆಸಲಾಗುತ್ತಿದ್ದು,  ದಿನದ 24 ಗಂಟೆಗಳ ಲ್ಲಿಯೂ ಮೂರು ಪಾಳಿಗಳಲ್ಲಿ, ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದೂ ಸದನಕ್ಕೆ ತಿಳಿಸಿದರು.

ನೂತನ ತಪಾಸಣಾ  ಯಂತ್ರೋಪಕರಣ ಗಳನ್ನು ಅಳವಡಿಸಲು, ಟೆಂಡರ್ ಕರೆಯಲಾಗಿದೆ ಎಂದೂ ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com