ರೋಹಿಣಿ ಸಿಂಧೂರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವೇ? ಉತ್ತರಗಳಿಲ್ಲವೇ?: ರೂಪಾ ಮೌದ್ಗಿಲ್ ಪ್ರಶ್ನೆ

ರೋಹಿಣಿ ಸಿಂಧೂರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವೇ? ಉತ್ತರಗಳಿಲ್ಲವೇ? ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಅವರು ಸೋಮವಾರ ಪ್ರಶ್ನಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರೋಹಿಣಿ ಸಿಂಧೂರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವೇ? ಉತ್ತರಗಳಿಲ್ಲವೇ? ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಅವರು ಸೋಮವಾರ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರೂಪಾ ಮೌದ್ಗಿಲ್ ಅವರು, ರೋಹಿಣಿ ಸಿಂಧೂರಿ ಅವರ ಪತಿಯ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ ಎಂದರೆ ಏನು ಅರ್ಥ? ರೋಹಿಣಿ ಸಿಂಧೂರಿ ಅವರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವೇ? ಉತ್ತರಗಳಿಲ್ಲವೇ? ಅವರ ಪತಿ ಹೇಳೋದು, ಫೋನ್ ಹ್ಯಾಕ್ ಮಾಡಲಾಗಿದೆ ಎಂದು. ಇದು ನಂಬುವ ಮಾತೇ? ಏನೋ ಹೇಳಬೇಕು ಪಾಪ. ಮಾನ ಹರಾಜು ಆಗಿದೆ ಎಂದು ಹೇಳಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ, ಮಾಧ್ಯಮ ಮಿತ್ರರೇ ಪದೇ ಪದೇ ನನ್ನ ಪ್ರತಿಕ್ರಿಯೆ ಕೇಳುವ ಬದಲು ಸಿಂಧೂರಿ ಅವರನ್ನು ಕೇಳಿ, ಕೆಳಗಿನ ಕಂಪ್ಲೈಂಟ್ ಲೋಕಾಯುಕ್ತದಲ್ಲಿ ರಿಜಿಸ್ಟರ್ ಆಗಿದೆ. ಆಕೆಗೆ 3ನೇ ರಿಮೈಂಡರ್ ಬಂದಿದೆ ಉತ್ತರ ಕೊಡಲು. ಉತ್ತರ ಯಾಕೆ ಇನ್ನೂ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com