ವಿಧಾನಸಭೆ ಸದಸ್ಯರ ಗ್ರೂಪ್ ಫೋಟೋ
ರಾಜ್ಯ
'15 ನೇ ವಿಧಾನಸಭೆ'ಯ ವಿಧಾನಸಭಾ ಸದಸ್ಯರ ಗ್ರೂಪ್ ಫೋಟೋ!
15 ನೇ ವಿಧಾನಸಭೆಯ ಕೊನೆಯ ಅಧಿವೇಶನ ಫೆಬ್ರವರಿ 24 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಇಂದು ವಿಧಾನಸಭಾ ಸದಸ್ಯರು ವಿಧಾನಸೌಧದ ಎದುರು ಗ್ರೂಪ್ ಫೋಟೋಕ್ಕೆ ಪೋಸ್ ನೀಡಿದರು.
ಬೆಂಗಳೂರು: 15 ನೇ ವಿಧಾನಸಭೆಯ ಕೊನೆಯ ಅಧಿವೇಶನ ಫೆಬ್ರವರಿ 24 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಇಂದು ವಿಧಾನಸಭಾ ಸದಸ್ಯರು ವಿಧಾನಸೌಧದ ಎದುರು ಗ್ರೂಪ್ ಫೋಟೋಕ್ಕೆ ಪೋಸ್ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಎಲ್ಲ ಸದಸ್ಯರು ಸಮೂಹ ಛಾಯಾಚಿತ್ರಕ್ಕೆ ಸಾಕ್ಷಿಯಾದರು.
ಈ ಫೋಟೋವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ವಿಧಾನಸಭೆಯ ಅವಧಿ ನನ್ನ ಪಾಲಿಗೆ ಅತ್ಯಂತ ಸ್ಮರಣೀಯವಾಗಿದ್ದು, ಈ ಅವಧಿಯಲ್ಲಿ ನಾನು ಶಾಸಕನಾಗಿ, ರಾಜ್ಯದ ಗೃಹ ಸಚಿವನಾಗಿ, ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಎಲ್ಲ ಶಾಸಕ ಮಿತ್ರರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ