ದ್ರಾಕ್ಷಿ ಸಂಗ್ರಹಿಸಿಡಲು ಕೋಲ್ಡ್ ಸ್ಟೋರೆಜ್ ಕೊರತೆ; ರಾಜ್ಯಕ್ಕೆ ಸಾವಿರಾರು ಕೋಟಿ ರೂ. ವ್ಯಾಪಾರ ನಷ್ಟ: ಜೆಡಿಎಸ್

ದ್ರಾಕ್ಷಿ ಸಂಗ್ರಹಿಸಿಡಲು ಅಗತ್ಯವಾಗಿರುವ ಕೋಲ್ಡ್ ಸ್ಟೋರೆಜ್ ಗಳ ಅಲಭ್ಯತೆಯಿಂದಾಗಿ ನಮ್ಮ ರಾಜ್ಯವು ಸಾವಿರಾರು ಕೋಟಿ ರೂ. ಗಳ ವ್ಯಾಪಾರ-ವಹಿವಾಟು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಬೆಳೆಗಾರರು ಅನಿವಾರ್ಯವಾಗಿ ಹಣ್ಣನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ ಎಂದು ಜೆಡಿಎಸ್ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದ್ರಾಕ್ಷಿ ಸಂಗ್ರಹಿಸಿಡಲು ಅಗತ್ಯವಾಗಿರುವ ಕೋಲ್ಡ್ ಸ್ಟೋರೆಜ್ ಗಳ ಅಲಭ್ಯತೆಯಿಂದಾಗಿ ನಮ್ಮ ರಾಜ್ಯವು ಸಾವಿರಾರು ಕೋಟಿ ರೂ. ಗಳ ವ್ಯಾಪಾರ-ವಹಿವಾಟು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಬೆಳೆಗಾರರು ಅನಿವಾರ್ಯವಾಗಿ ಹಣ್ಣನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ ಎಂದು ಜೆಡಿಎಸ್ ಹೇಳಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್,  ರಾಜ್ಯದಲ್ಲಿ ವರ್ಷಕ್ಕೆ ಬೆಳೆಯುವ ದ್ರಾಕ್ಷಿಯಲ್ಲಿ 73%ನಷ್ಟು ವಿಜಯಪುರ ಜಿಲ್ಲೆಯೊಂದರಿಂದಲೇ ಬರುತ್ತಿದೆ. ಕೋಲ್ಡ್ ಸ್ಟೋರೆಜ್ ಗಳಿಲ್ಲದಿರುವುದರಿಂದ ರೈತರು ದ್ರಾಕ್ಷಿಯನ್ನು ಜಿಲ್ಲೆಯಿಂದ ನೆರೆ ರಾಜ್ಯಕ್ಕೆ ಕಳಿಸುತ್ತಿದ್ದಾರೆ ಎಂದು ಪಕ್ಷದ ಶಾಸಕ ದೇವನಾಂದ್ ಚವ್ಹಾಣ್ ಅವರು ಸದನದಲ್ಲಿ ಪ್ರಶ್ನಿಸುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಈ ಕಡೆ ಗಮನಹರಿಸಬೇಕಿದೆ ಎಂದು ಒತ್ತಾಯಿಸಿದೆ. 

ಇಷ್ಟು ದೊಡ್ಡ ಮೊತ್ತದ ವ್ಯಾಪಾರ ನಮ್ಮ ರಾಜ್ಯದಲ್ಲೆ ನಡೆದರೆ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಳ್ಳಬಹುದು. ಬೆಳೆಗಾರರಿಗೆ ಹೆಚ್ಚಿನ‌ ಆದಾಯ ಸಿಗುತ್ತದೆ. ರಾಜ್ಯ ಸರ್ಕಾರದ ಖಜಾನೆಗೆ ತೆರಿಗೆ ಹರಿದು ಬರಲಿದೆ. ಈ ನಿಟ್ಟಿನಲ್ಲಿ‌ ಸರ್ಕಾರ ಇಷ್ಟೊತ್ತಿಗಾಗಲೆ, ಕೋಲ್ಡ್ ಸ್ಟೋರೆಜ್ ಗಳನ್ನು ನಿರ್ಮಿಸಬೇಕಿತ್ತು ಎಂದು ಜೆಡಿಎಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com