ತುಮಕೂರಿನಲ್ಲಿ ಪೇ ಎಂಎಲ್ಎ ಪೋಸ್ಟರ್: ಶಾಸಕ ಜ್ಯೋತಿ ಗಣೇಶ್ ವಿರುದ್ಧ ಅಭಿಯಾನ

ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂಎಲ್ಎ ಪೋಸ್ಟರ್ ಅಭಿಯಾನ ಆರಂಭವಾಗಿದ್ದು, ತುಮಕೂರು‌ ನಗರದ ತುಂಬ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ.
ಪೇ ಎಂಎಲ್ ಎ ಅಭಿಯಾನ
ಪೇ ಎಂಎಲ್ ಎ ಅಭಿಯಾನ

ತುಮಕೂರು: ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂಎಲ್ಎ ಪೋಸ್ಟರ್ ಅಭಿಯಾನ ಆರಂಭವಾಗಿದ್ದು, ತುಮಕೂರು‌ ನಗರದ ತುಂಬ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ.

ಕಾಂಗ್ರೆಸ್ ಮುಖಂಡ ಶಶಿ ಹುಲಿಕುಂಟೆಯಿಂದ ಹಾಗೂ ಕಾರ್ಯಕರ್ತರಿಂದ ಪೋಸ್ಟರ್ ಅಭಿಯಾನ ಶುರುವಾಗಿದ್ದು, ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಪೋಟೊ ಒಳಗೊಂಡಿರೋ ಪೇ ಎಂಎಲ್ಎ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ನಿಮಗೆ ಕೆಲಸ ಆಗಬೇಕೆ, ನನಗೆ ಪೇ ಮಾಡಿ. ಭ್ರಷ್ಟಚಾರ ನನ್ನ ಮೊದಲ ಆದ್ಯತೆ. ಈ ರೀತಿ ಸ್ಲೋಗನ್ ಬರೆದಿರೋ ಪೋಸ್ಟರ್‌ಗಳನ್ನು ತುಮಕೂರು‌ ನಗರದ ಟೌನ್ ಹಾಲ್ ಸರ್ಕಲ್‌, ಬಿ.ಎಚ್.ರಸ್ತೆ, ಹೊರಪೇಟೆಯಲ್ಲಿ ಕಾಂಗ್ರೆಸ್ ಅಂಟಿಸಿದೆ.

ತುಮಕೂರು‌ ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಯಲ್ಲಿ ಲಂಚದ ಡೀಲ್ ಹಾಗೂ ಕಾಮಗಾರಿಯಲ್ಲಿ ಶಾಸಕ ಜ್ಯೋತಿ ಗಣೇಶ್ ಪರ್ಸೆಂಟೇಜ್‌ ಪಡೆಯುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ. ಇನ್ನು ಪೋಸ್ಟರ್‌ ಅಂಟಿಸಿದ ಹುಡುಗರನ್ನು ತಿಲಕ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೋಸ್ಟರ್ ಮಧ್ಯದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭಾವಚಿತ್ರವಿದೆ. ‘ನಿಮ್ಮ ಕೆಲಸ ಆಗಬೇಕೆ? ನನಗೆ ಪೇ ಮಾಡಿ. ಭ್ರಷ್ಟಾಚಾರವೇ ನನ್ನ ಮೊದಲ ಆದ್ಯತೆ’ ಎಂದು ಪೋಸ್ಟರ್‌ನಲ್ಲಿ ನಮೂದಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶಾಸಕರು ಲಂಚ ಪಡೆದಿದ್ದಾರೆ ಎಂಬ ಆರೋಪ ಇಟ್ಟುಕೊಂಡು ಈ ಅಭಿಯಾನ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com