ಕ್ವಾರಿ ಮಾಲೀಕರ ಮುಷ್ಕರ: ಏರೋ ಇಂಡಿಯಾ ಕಾಮಗಾರಿ ಮೇಲೆ ಪರಿಣಾಮ

ಫೆಬ್ರವರಿ 13 ರಂದು ಆರಂಭವಾಗಲಿರುವ ಏರೋ ಇಂಡಿಯಾದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಿಗದಿತ ಅವಧಿಗೂ ಮುನ್ನವೇ ಕಾಮಗಾರಿಗಳನ್ನು ಮುಗಿಸಲು ಯತ್ನಗಳು ಮುಂದುವರೆದಿರುವ ನಡುವಲ್ಲೇ, ಕಾಮಗಾರಿಗೆ ನಿರ್ಮಾಣ ಸಾಮಗ್ರಿಗಳ ಕೊರತೆ ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಫೆಬ್ರವರಿ 13 ರಂದು ಆರಂಭವಾಗಲಿರುವ ಏರೋ ಇಂಡಿಯಾದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಿಗದಿತ ಅವಧಿಗೂ ಮುನ್ನವೇ ಕಾಮಗಾರಿಗಳನ್ನು ಮುಗಿಸಲು ಯತ್ನಗಳು ಮುಂದುವರೆದಿರುವ ನಡುವಲ್ಲೇ, ಕಾಮಗಾರಿಗೆ ನಿರ್ಮಾಣ ಸಾಮಗ್ರಿಗಳ ಕೊರತೆ ಎದುರಾಗಿದೆ.

ಕ್ವಾರಿ ಮತ್ತು ಕಲ್ಲು ಪುಡಿ ಮಾಡುವ ಘಟಕಗಳ ಮಾಲೀಕರು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದು, ಇದರಿಂದ ಕಾಮಗಾರಿ ಕಾರ್ಯಕ್ಕೆ ತೀವ್ರ ಹಿನ್ನಡೆಯುಂಟಾದಂತಾಗಿದೆ.

ಏರೋ ಇಂಡಿಯಾ ಸ್ಥಳವಾದ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ನೂರಾರು ಲೋಡ್ ಜೆಲ್ಲಿ ಕಲ್ಲು, ಎಂ-ಸ್ಯಾಂಡ್ ಮತ್ತು ಇತರ ನಿರ್ಮಾಣ ಸಾಮಗ್ರಿಗಳ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

“ಏರೋ ಇಂಡಿಯಾಕ್ಕಾಗಿ ಅವರಿಗೆ ಸುಮಾರು 1,400 ಟ್ರಕ್‌ಲೋಡ್‌ಗಳ ನಿರ್ಮಾಣ ಸಾಮಗ್ರಿಗಳ ಅಗತ್ಯವಿದೆ ಎಂದು ನಮಗೆ ತಿಳಿದಿದೆ. ಆದರೆ ನಾವು ಅಸಹಾಯಕರಾಗಿದ್ದೇವೆ. ಇದು ನಮ್ಮ ಅಹಂಕಾರವಲ್ಲ, ನಾವು ಸಂಪೂರ್ಣ ಅಸಹಾಯಕರಾಗಿದ್ದೇವೆ. ನಾವು ಆಂದೋಲನವನ್ನು ಮುಂದುವರಿಸದಿದ್ದರೆ, ನಾವು ನಮ್ಮ ಎಲ್ಲಾ ಆಸ್ತಿಗಳನ್ನು ಕಳೆದುಕೊಳ್ಳುತ್ತೇವೆ ಮತ್ತು ನಾವು ವಾಸಿಸುವ ಮನೆಗಳನ್ನು ಕೂಡ ಕಳೆದುಕೊಳ್ಳುತ್ತೇವೆ. ಕಾಮಗಾರಿಯ ನಂತರ, ಈ ಯೋಜನೆಗಳನ್ನು ಪೂರ್ಣಗೊಳಿಸಲು ಅವರಿಗೆ ಸುಮಾರು ಮೂರು ವಾರಗಳ ಸಮಯ ಅಗತ್ಯವಿದೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ನಾವೇನು ಮಾಡುವುಗು ಎಂದು ಎಂದು ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಸಿಎಂ ಭೇಟಿಯಾಗಲು ಕ್ವಾರಿ ಮಾಲೀಕರು ಮುಂದು
“ನಾನೂ ಕೂಡ ಬಿಜೆಪಿಯ ಸದಸ್ಯ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾರ್ಗೋಪಾಯ ಕಂಡುಕೊಳ್ಳಲು ಮುಂದಾಗಿದ್ದೇವೆ. ಮುಷ್ಕರದಿಂದ ನಮಗೆ ಸಂತೋಷವಿಲ್ಲ, ಆದರೆ ನಮಗೆ ಯಾವುದೇ ಆಯ್ಕೆಯಿಲ್ಲ. ಸರ್ಕಾರ ನಮ್ಮಿಂದ ದುಪ್ಪಟ್ಟು ಆದಾಯ ಪಡೆಯುತ್ತಿದೆ. ನಮ್ಮ ಮೇಲೆ ಇತರೆ ತೆರಿಗೆಗಳನ್ನು ವಿಧಿಸಿದ್ದಾರೆ. ಇದು ಅನ್ಯಾಯ. ಬೇರೆ ಯಾವ ರಾಜ್ಯದಲ್ಲಿಯೂ ಈ ರೀತಿ ಮಾಡಿಲ್ಲ ಎಂದು ಹೇಳಿದ್ದಾರೆ.

ಬಿಬಿಎಂಪಿ ಇಂಜಿನಿಯರ್'ಗಳ ಮುಖ್ಯಸ್ಥ ಬಿ.ಎಸ್.ಪ್ರಲ್ಹಾದ್ ಅವರು ಮಾತನಾಡಿ, ಡಿಸೆಂಬರ್ 21 ರಿಂದ ಮುಷ್ಕರ ನಡೆಯುತ್ತಿದೆ. ಏರ್ ಶೋಗೆ ಸಂಬಂಧಿಸಿದಂತೆ, ನಾವು ಕೆಲವು ಮಾರ್ಗಗಳ ಉಸ್ತುವಾರಿ ವಹಿಸಿದ್ದೇವೆ. ಅಲ್ಲಿ ಹೆಚ್ಚಿನ ನಿರ್ಮಾಣ ಕಾರ್ಯಗಳು ಆಗಿಲ್ಲ. ಹಳೆ ವಿಮಾನ ನಿಲ್ದಾಣದ ಬಳಿಯ ಎಚ್‌ಎಎಲ್ ಅಂಡರ್‌ಪಾಸ್ ಸೇರಿದಂತೆ ಕೆಲವು ಪ್ರಮುಖ ಕಾಮಗಾರಿಗಳು ಮತ್ತು ಇತರ ಪ್ರಮುಖ ಯೋಜನೆಗಳು ಮುಷ್ಕರದಿಂದಾಗಿ ವಿಳಂಬವಾಗುತ್ತಿವೆ ಎಂದು ಹೇಳಿದ್ದಾರೆ.

ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ ಪುನೀತಾ ಅವರು ಮಾತನಾಡಿ, ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಸಮಸ್ಯೆಯ ಬಗ್ಗೆ ಮಾಹಿತಿಗಳಿವೆ, ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ನಿರ್ಮಾಣ ಸಾಮಗ್ರಿಗಳನ್ನು ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com