ಗುತ್ತಿಗೆದಾರ ಸಂತೋಷ್ ಪಾಟೀಲ್ ಮೊಬೈಲ್ ಡೇಟಾ ಸಲ್ಲಿಸಿ: ನ್ಯಾಯಾಲಯ

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹೊಸ ಬೆಳವಣಿಗೆಯೊಂದರಲ್ಲಿ ಮೃತ ಗುತ್ತಿಗೆದಾರ ಮತ್ತು ಇತರರ ಮೊಬೈಲ್ ಫೋನ್‌ಗಳಿಂದ ಪಡೆದ ಡೇಟಾವನ್ನು ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ವಿಶೇಷ ನ್ಯಾಯಾಲಯ ಗುರುವಾರ ನಿರ್ದೇಶನ ನೀಡಿದೆ.
ಉಡುಪಿಯ ಹೊಟೇಲ್‌ನಿಂದ ಮಣಿಪಾಲಕ್ಕೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಶವವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸುತ್ತಿರುವುದು.
ಉಡುಪಿಯ ಹೊಟೇಲ್‌ನಿಂದ ಮಣಿಪಾಲಕ್ಕೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಶವವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸುತ್ತಿರುವುದು.
Updated on

ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹೊಸ ಬೆಳವಣಿಗೆಯೊಂದರಲ್ಲಿ ಮೃತ ಗುತ್ತಿಗೆದಾರ ಮತ್ತು ಇತರರ ಮೊಬೈಲ್ ಫೋನ್‌ಗಳಿಂದ ಪಡೆದ ಡೇಟಾವನ್ನು ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ವಿಶೇಷ ನ್ಯಾಯಾಲಯ ಗುರುವಾರ ನಿರ್ದೇಶನ ನೀಡಿದೆ.

ಉಡುಪಿ ಪೊಲೀಸರು ಜುಲೈನಲ್ಲಿ 'ಬಿ' ರಿಪೋರ್ಟ್ (ಕ್ಲೋಸರ್ ರಿಪೋರ್ಟ್) ಸಲ್ಲಿಸಿ ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಿದ್ದರು. ಈ ವರದಿಯನ್ನು ಪ್ರಶ್ನಿಸಿ ಪಾಟೀಲ್ ಕುಟುಂಬ ಕೋರ್ಟ್ ಮೆಟ್ಟಿಲೇರಿದ್ದರು.

ದೂರುದಾರರ ಪರ ವಾದ ಮಂಡಿಸಿದ ವಕೀಲ ಎಚ್.ಕೆ.ಪವನ್ ಅವರು, ಸಂತೋಷ್ ಪಾಟೀಲ್ ಅವರ ಎರಡು ಮೊಬೈಲ್ ಫೋನ್, ವಿಕಾಸ್ ಅವರ ಎರಡು ಫೋನ್ ಮತ್ತು ಶ್ರೀಕಾಂತ್ ಗಿಡ್ಡಬಸಣ್ಣನವರ್ ಅವರ ಒಂದು ಫೋನ್ ಅನ್ನು ತನಿಖೆಯ ಭಾಗವಾಗಿ ವಶಪಡಿಸಿಕೊಳ್ಳಲಾಗಿದ್ದು, ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.

“ಜೂನ್‌ನಲ್ಲಿ, ಎಫ್‌ಎಸ್‌ಎಲ್ ಈ ಫೋನ್‌ಗಳಿಂದ ಡೇಟಾವನ್ನು ಹೊರತೆಗೆಯಿತು ಮತ್ತು ಅದನ್ನು ಹಾರ್ಡ್ ಡಿಸ್ಕ್‌ಗಳಲ್ಲಿ ಹಾಕಿದೆ. ಆದರೆ, ಅಂತಿಮ ವರದಿ ('ಬಿ' ವರದಿ) ಸಲ್ಲಿಸುವಾಗ, ಹಾರ್ಡ್ ಡಿಸ್ಕ್ ನಲ್ಲಿ ಹಾಕಲಾಗಿರುವ ಡೇಟಾವನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಸತ್ಯವನ್ನು ಬಹಿರಂಗವಾಗಲು ಈ ಮಾಹಿತಿಗಳು ಅತ್ಯಗತ್ಯವಾಗಿದೆ. ಎಫ್‌ಎಸ್‌ಎಲ್ ಒದಗಿಸಿದ ದತ್ತಾಂಶವನ್ನು ನ್ಯಾಯಾಲಯದ ಗಮನಕ್ಕೆ ತರದಿದ್ದರೆ, ಸತ್ಯವನ್ನು ಬಹಿರಂಗವಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಈ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಧೀಶರು, ಹಾರ್ಡ್ ಡಿಸ್ಕ್‌ಗಳನ್ನು ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದರು ಮತ್ತು ವಿಚಾರಣೆಯನ್ನು ಜನವರಿ 30 ಕ್ಕೆ ಮುಂದೂಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com