ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಫುಡ್ ಪಾರ್ಕ್ ಯೋಜನೆಗೆ ಭೂಮಿ ಅಲಭ್ಯ: ಯೋಜನೆಗೆ ಹಿನ್ನಡೆ!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರತಿ ಜಿಲ್ಲೆಗಳಲ್ಲಿ ಫುಡ್ ಪಾರ್ಕ್ ಸ್ಥಾಪಿಸುವ ಯೋಜನೆಗೆ ಭೂಮಿ ಅಲಭ್ಯವಾಗಿದ್ದು, ಪರಿಣಾ ಯೋಜನೆಗೆ ಹಿನ್ನಡೆಯುಂಟಾಗಿದೆ.
ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಫುಡ್ ಪಾರ್ಕ್ ಯೋಜನೆಗೆ ಭೂಮಿ ಅಲಭ್ಯ: ಯೋಜನೆಗೆ ಹಿನ್ನಡೆ!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರತಿ ಜಿಲ್ಲೆಗಳಲ್ಲಿ ಫುಡ್ ಪಾರ್ಕ್ ಸ್ಥಾಪಿಸುವ ಯೋಜನೆಗೆ ಭೂಮಿ ಅಲಭ್ಯವಾಗಿದ್ದು, ಪರಿಣಾ ಯೋಜನೆಗೆ ಹಿನ್ನಡೆಯುಂಟಾಗಿದೆ.

ಪ್ರತಿ ಜಿಲ್ಲೆಯಲ್ಲಿ 20-50 ಎಕರೆ ಪ್ರದೇಶದಲ್ಲಿ ಫುಡ್ ಪಾರ್ಕ್ ಸ್ಥಾಪಿಸುವುದಾಗಿ 2022 ರಲ್ಲಿ ರಾಜ್ಯ ಸರ್ಕಾರ ಘೋಷಿಸಿತ್ತು. ಭೂಮಿ ಅಲಭ್ಯ ಹಿನ್ನೆಲೆಯಲ್ಲಿ ಯೋಜನೆಯ ಪ್ರದೇಶವನ್ನು 10 ಎಕರೆಗೆ ಇಳಿಸಲಾಗಿತ್ತು. ಆದರೂ ಭೂಮಿ ಪಡೆದುಕೊಳ್ಳುವಲ್ಲಿ ಕೃಷಿ ಇಲಾಖೆಗೆ ಹಿನ್ನಡೆಯುಂಟಾಗಿದೆ ಎಂದು ತಿಳಿದುಬಂದಿದೆ.

ಫುಡ್ ಪಾರ್ಕ್ ಗಳು ಒಮ್ಮೆ ಸ್ಥಾಪಿತಗೊಂಡಿದ್ದೇ  ಆದರೆ, ಇವು, ಸಂಸ್ಕರಣೆ, ಶೀತಲ ಶೇಖರಣಾ ಘಟಕಗಳು, ಗೋದಾಮುಗಳು, ತೂಕದ ಸೇತುವೆಗಳಂತಹ ಸೌಲಭ್ಯಗಳನ್ನು ಒದಗಿಸಲಿವೆ. ಈ ಉದ್ಯಾನಗಳಲ್ಲಿ ಘಟಕ ಸ್ಥಾಪಿಸಲು ಆಸಕ್ತಿ ತೋರುವವರಿಗೆ ವಿದ್ಯುತ್ ಸಂಪರ್ಕ, ನೀರು ಪೂರೈಕೆ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮಾತನಾಡಿ, ಫುಡ್ ಪಾರ್ಕ್‌ಗಳು ರೈತರ ಉತ್ಪನ್ನ ಸಂಸ್ಥೆಗಳ (ಎಫ್‌ಪಿಒ) ಮೂಲಕ ರೈತರಿಗೆ ಸಹಾಯ ಮಾಡುತ್ತವೆ. ಯೋಜನೆಗೆ ಶೀಘ್ರದಲ್ಲಿಯೇ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಪ್ರತಿ ಜಿಲ್ಲೆಯಲ್ಲಿ ಹತ್ತು ಎಕರೆಯನ್ನು ಭೂಮಿಯನ್ನು ಹುಡುಕಲಾಗುತ್ತಿದೆ, ಆದರೆ ನಮಗೆ ಇನ್ನೂ ಭೂಮಿ ಲಭ್ಯವಾಗಿಲ್ಲ. ಕೃಷಿ ಇಲಾಖೆ ಬಳಿ ಇರುವ ಭೂಮಿಯನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಫುಡ್ ಪಾರ್ಕ್ ಗಳಿಂದ ಸಂಸ್ಕರಣೆ ಮತ್ತು ಇತರ ಘಟಕಗಳನ್ನು ಸ್ಥಾಪಿಸಬಹುದು. ಅದು ರೈತರಿಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಫುಡ್ ಪಾರ್ಕ್‌ಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ವ್ಯಾಪಾರ ಮಾಡಲು ಸಹಾಯ ಮಾಡಲು ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕವು 1,200 ಫುಡ್ ಪಾರ್ಕ್ ಗಳನ್ನು ಹೊಂದಿದ್ದು, ಪ್ರತಿಯೊಂದು ಫುಡ್ ಪಾರ್ಕ್ ನಲ್ಲಿಯೂ 1,000 ರೈತ ಸದಸ್ಯರಿದ್ದಾರೆ. “ನಾವು ಅವರಿಗೆ ಸಾಲ ಮತ್ತು ಸಬ್ಸಿಡಿಗಳನ್ನು ನೀಡುತ್ತೇವೆ. ಫುಡ್ ಪಾರ್ಕ್‌ಗಳ ಉದ್ದೇಶವು ರೈತರನ್ನು ಬೆಳೆಸುವುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಫುಡ್ ಪಾರ್ಕ್ ಗಳು ರೈತರ ಬೆಳೆಗಳನ್ನು ಸಂಸ್ಕರಿಸುವುದು, ಪ್ಯಾಕ್ ಮಾಡುವುದು, ಬ್ರ್ಯಾಂಡ್ ಮಾಡುವುದು ಮತ್ತು ಮಾರುಕಟ್ಟೆ ಮಾಡುವುದು ಸೇರಿದಂತೆ ರೈತರ ಅವರ ಲಾಭದ ಪ್ರಮಾಣವನ್ನು ಗಣನೀಯವಾಗಿ ಸುಧಾರಿಸುತ್ತದೆ. ಇದು ಮಧ್ಯವರ್ತಿಗಳನ್ನೂ ತಡೆಯುತ್ತದೆ. ನಾವು ರೈತರನ್ನು ಉದ್ಯಮಿಗಳನ್ನಾಗಿ ಮಾಡಲು ಬಯಸುತ್ತಿದ್ದೇವೆ. ಕೃಷಿಯನ್ನು ಉದ್ಯಮವಾಗಿ ಪರಿಗಣಿಸುತ್ತೇವೆ. ಅವರು ಲಾಭವನ್ನು ನೋಡಬೇಕೆಂದು ನಾವು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

ಇದೀಗ ಜಮೀನು ಗುರುತಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಫುಡ್ ಪಾರ್ಕ್‌ಗಳನ್ನು ಪ್ರಾರಂಭಿಸುವ ನಿರೀಕ್ಷೆಗಳಿವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com