ಬೆಂಗಳೂರು: ಸ್ಯಾಂಟ್ರೊ ರವಿಯನ್ನು ಪೊಲೀಸ್ ವಶಕ್ಕೆ ನೀಡಲು ನಿರಾಕರಿಸಿರುವ ಕೋರ್ಟ್ ಜನವರಿ 25ರ ವರಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸ್ಯಾಂಟ್ರೋ ರವಿ ಪ್ರಕರಣನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದು, ಸೋಮವಾರ ಮೈಸೂರಿನ ವಿಜಯನಗರ ಪೊಲೀಸರು ಮೈಸೂರು ಜೈಲಿನಿಂದ ಸ್ಯಾಂಟ್ರೊ ರವಿ, ಪ್ರೇಮ್‌ಜಿ ಮತ್ತು ಶ್ರುತೇಶ್‌ರನ್ನು ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಈ ವೇಳೆ ನ್ಯಾಯಾಲಯ ಸ್ಯಾಂಟ್ರೊ ರವಿ ಮತ್ತು ಇತರ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಲು ನಿರಾಕರಿಸಿತು. ಜನವರಿ 25ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಸಿಐಡಿಗೆ ವಹಿಸಲು ಮನವಿ
ಕೋರ್ಟ್‌ನಲ್ಲಿ ಸರ್ಕಾರಿ ವಕೀಲರು ಪ್ರಕರಣವನ್ನು ಸಿಐಡಿಗೆ ವಹಿಸಲು ಮನವಿ ಮಾಡಿದರು. ಆಗ ಕೋರ್ಟ್ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಸಿಐಡಿಗೆ ವಹಿಸುವುದು ಸರ್ಕಾರದ ಕೆಲಸ, ಸೂಕ್ತ ದಾಖಲಾತಿಗಳ ಜೊತೆ ಅರ್ಜಿ ಸಲ್ಲಿಕೆ ಮಾಡಿ ಎಂದು ಸೂಚನೆ ನೀಡಿತು.
Advertisement