ಬೆಂಗಳೂರು: ಆನ್‌ಲೈನ್ ಸೆಕ್ಸ್ ಚಾಟ್ ದಂಧೆ; 10 ಸಾವಿರ ರೂಪಾಯಿ ಕಳೆದುಕೊಂಡ ವ್ಯಕ್ತಿ

38 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಆನ್‌ಲೈನ್ ಲೈವ್ ಸೆಕ್ಸ್ ಚಾಟ್ ರೂಮ್‌ನಲ್ಲಿ ಮಹಿಳೆಯೊಂದಿಗೆ 10 ನಿಮಿಷಗಳ ಚಾಟ್‌ನಲ್ಲಿ 10,000 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 38 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಆನ್‌ಲೈನ್ ಲೈವ್ ಸೆಕ್ಸ್ ಚಾಟ್ ರೂಮ್‌ನಲ್ಲಿ ಮಹಿಳೆಯೊಂದಿಗೆ 10 ನಿಮಿಷಗಳ ಚಾಟ್‌ನಲ್ಲಿ 10,000 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಕಾಜಲ್ ಎಂದು ಗುರುತಿಸಲಾದ ಆರೋಪಿ ಸಂತ್ರಸ್ತನಿಗೆ ಆಮಿಷವೊಡ್ಡಿ ಚಾಟ್ ಮಾಡುವಾಗ ವಿವಸ್ತ್ರಗೊಳಿಸಿದ್ದಾರೆ.  ಫೋನ್ ಕಾಲ್ ಕಟ್ ಮಾಡುವ ಮೊದಲು ಸಂತ್ರಸ್ತನ ಎಲ್ಲಾ ಸಂಪರ್ಕ ವಿವರಗಳನ್ನು ಪಡೆದಿದ್ದಳು.

ಸ್ವಲ್ಪ ಸಮಯದ ನಂತರ, ಅವಳು ಮತ್ತೆ ಅವನಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಳು, ಹಣ ನೀಡದಿದ್ದರೇ ಅವಳು ವೀಡಿಯೊವನ್ನು ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದಳು. ಆರೋಪಿಯನ್ನು ಸುಮಾರು 12 ಗಂಟೆಗಳ ಕಾಲ ಬ್ಲಾಕ್ ಮೇಲ್ ಮಾಡಿ ಆಕೆ ನೀಡಿದ ಖಾತೆಗೆ ಹಣ ಕಳುಹಿಸುವಂತೆ ಮಾಡಲಾಗಿತ್ತು. ಮತ್ತೆ ಹಣಕ್ಕಾಗಿ ಬೇಡಿಕೆ ಹೆಚ್ಚಾದಾಗ, ಅವರು ವೈಟ್‌ಫೀಲ್ಡ್ ವಿಭಾಗದ ಬೆಳ್ಳಂದೂರು ಪೊಲೀಸರನ್ನು ಸಂಪರ್ಕಿಸಿ ಆಕೆಯ ವಿರುದ್ಧ ದೂರು ದಾಖಲಿಸಿದರು.

ಸಂತ್ರಸ್ತ ವ್ಯಕ್ತಿ ಬೆಳ್ಳಂದೂರಿನ ಪಿಜಿ ವಸತಿಗೃಹದಲ್ಲಿ ನೆಲೆಸಿದ್ದಾರೆ. ಬುಧವಾರ ರಾತ್ರಿ 11ಗಂಟೆಗೆ ಚಾಟಿಂಗ್ ಆರಂಭಿಸಿದ  ವ್ಯಕ್ತಿ  ಆರೋಪಿಯ ಆಮೀಷಕ್ಕೆ  ಬಲಿಯಾಗಿದ್ದಾನೆ. ನಂತರ ಆರೋಪಿ ಮರುದಿನ ಬೆಳಗ್ಗೆ 11 ಗಂಟೆಯವರೆಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಆರೋಪಿ ಸಂತ್ರಸ್ತೆಗೆ ಆಕೆಯ ವಾಟ್ಸಾಪ್ ನಂಬರ್ ನೀಡಿ ವಾಟ್ಸಾಪ್ ವಿಡಿಯೋ ಕರೆಗೆ ಬರುವಂತೆ ಹೇಳಿದ್ದಾಳೆ. ಇಲ್ಲಿ ಮತ್ತೆ, ಸಂಭಾಷಣೆಯ ಸಮಯದಲ್ಲಿ, ಅವಳು ಬಟ್ಟೆ ಬಿಚ್ಚಿ ಯಾರಿಗೂ ತಿಳಿಯದಂತೆ ರೆಕಾರ್ಡಿಂಗ್ ಮಾಡುತ್ತಿದ್ದಳು. ಆತನನ್ನು ಮತ್ತಷ್ಟು ಹೆದರಿಸಲು ಆಕೆ ವಿಡಿಯೋ ರೆಕಾರ್ಡಿಂಗ್‌ಗಳನ್ನು ಆತನ ವಾಟ್ಸಾಪ್‌ಗೆ ಕಳುಹಿಸಿದ್ದಾಳೆ ಎಂದು ವರದಿಯಾಗಿದೆ.

ಆಕೆ ನೀಡಿದ ಮತ್ತೊಂದು ಮೊಬೈಲ್ ಸಂಖ್ಯೆಗೆ ವ್ಯಕ್ತಿ ಎರಡು ಯುಪಿಐ ವಹಿವಾಟು ನಡೆಸಿದ್ದಾನೆ ಎಂದು ವರದಿಯಾಗಿದೆ. ಮೊದಲನೆಯದರಲ್ಲಿ 2000 ರೂ., ಎರಡನೆಯದರಲ್ಲಿ 8000 ರೂ. ಆರೋಪಿಗಳು ಇನ್ನೂ 80,000 ರೂ.ಗೆ ಬೇಡಿಕೆಯಿಟ್ಟಾಗ, ಸಂತ್ರಸ್ತ ಪಾವತಿಸಲು ನಿರಾಕರಿಸಿ ನಮ್ಮನ್ನು ಸಂಪರ್ಕಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಎರಡೂ ಮೊಬೈಲ್ ಸಂಖ್ಯೆಗಳನ್ನು ಪಡೆಯಲಾಗಿದೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳು ಅಕ್ರಮವಾಗಿ ಸಿಮ್ ಕಾರ್ಡ್ ಪಡೆದಿದ್ದು, ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಅಪರಿಚಿತ ವ್ಯಕ್ತಿಯೊಂದಿಗೆ ಚಾಟ್ ಮಾಡುವಾಗ ಜಾಗರೂಕರಾಗಿರಬೇಕು. ಸಂತ್ರಸ್ತ ವ್ಯಕ್ತಿ ಗುರುವಾರ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಪರಿಚಿತ ಮಹಿಳೆಯ ವಿರುದ್ಧ ಸುಲಿಗೆ (IPC ಸೆಕ್ಷನ್ 384) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. “ಅಂತಹ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳ ಚಂದಾದಾರರಾಗಿರುವ ಸಂತ್ರಸ್ತರನ್ನು ಗುರಿಯಾಗಿಸುವುದು ಆರೋಪಿಗಳ ಕಾರ್ಯ ವಿಧಾನವಾಗಿದೆ. ಸಂತ್ರಸ್ತರನ್ನು ಸೆಳೆಯಲು ನಗ್ನ ಚಿತ್ರಗಳನ್ನು ಆಪ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ನಂತರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಣ ವಸೂಲಿ ಮಾಡಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com