ವಿಜಿಲೆನ್ಸ್ ಅಧಿಕಾರಿಗಳನ್ನು ನೇಮಿಸಿ: ಸಿಎಂ ಸಿದ್ದರಾಮಯ್ಯಗೆ ಎಎಪಿ ಒತ್ತಾಯ

ಕಾನೂನಿನ ಪ್ರಕಾರ ಪ್ರತಿ ಇಲಾಖೆಗೆ ಮುಖ್ಯ ವಿಜಿಲೆನ್ಸ್ ಅಧಿಕಾರಿ (ಸಿವಿಒ) ನೇಮಕ ಮಾಡದಿದ್ದಕ್ಕಾಗಿ ಆಮ್ ಆದ್ಮಿ ಪಕ್ಷವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾನೂನಿನ ಪ್ರಕಾರ ಪ್ರತಿ ಇಲಾಖೆಗೆ ಮುಖ್ಯ ವಿಜಿಲೆನ್ಸ್ ಅಧಿಕಾರಿ (ಸಿವಿಒ) ನೇಮಕ ಮಾಡದಿದ್ದಕ್ಕಾಗಿ ಆಮ್ ಆದ್ಮಿ ಪಕ್ಷವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

2016-17ರಲ್ಲಿ ಪ್ರತಿ ಇಲಾಖೆಗೆ ಸಿವಿಒ ಇರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು ಎಂದು ಎಎಪಿ ಮಾಧ್ಯಮ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ನೆನಪಿಸಿದರು.

'ನೀವು ಎರಡನೇ ಅವಧಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡು 50 ದಿನಗಳಿಗಿಂತ ಹೆಚ್ಚು ದಿನ ಕಳೆದಿದೆ. ಹಾಗಿದ್ದರೂ ಇದನ್ನು ಏಕೆ ಮಾಡಲಾಗಿಲ್ಲ? ಲೋಕಾಯುಕ್ತದಲ್ಲಿ ಈಗಾಗಲೇ ಪ್ರಕರಣಗಳ ಹೊರೆ ತುಂಬಾ ಹೆಚ್ಚಾಗಿದೆ. ನೀವು ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಮತ್ತು ಜಿಲ್ಲೆಗೆ ಒಂದರಂತೆ ಜಾಗೃತ ಕೋಶವನ್ನು ಪ್ರಾರಂಭಿಸಬೇಕು' ಎಂದರು.

'ನಿಮ್ಮದೇ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಿವಿಒಗಳನ್ನು ನೇಮಿಸಬೇಕು ಮತ್ತು ಕಳಂಕವಿಲ್ಲದ ಪ್ರಾಮಾಣಿಕ ಅಧಿಕಾರಿಗಳನ್ನು ಈ ಹುದ್ದೆಗಳಿಗೆ ನೇಮಿಸಬೇಕು. ರಾಜ್ಯದಿಂದ ಭ್ರಷ್ಟಾಚಾರ ತೊಲಗದಿದ್ದರೆ ನಿಮ್ಮ ಯಾವುದೇ ಭರವಸೆಯನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾಗುತ್ತೀರಿ'  ಎಂದು ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ಈ ಸಲಹೆಗಳನ್ನು ಈಡೇರಿಸದಿದ್ದಲ್ಲಿ ಎಎಪಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದರು. 
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ, ದೆಹಲಿ ಮತ್ತು ಪಂಜಾಬ್‌ನಂತೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ವ್ಯವಹರಿಸಲು ಸಾಮಾನ್ಯ ಫೋನ್ ಸಂಖ್ಯೆಯನ್ನು ಏಕೆ ಅಳವಡಿಸಲಾಗಿಲ್ಲ ಎಂದು ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com