ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ರಾಜಕೀಯದಲ್ಲಿನ ಸೋದರನನ್ನು ನೆನೆದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸದನದಲ್ಲಿ ಭಾವುಕ!

ಸೋಮವಾರ ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ವೇಳೆ ಕಾಂಗ್ರೆಸ್ ನಾಯಕ ದಿವಂಗತ ಆರ್. ಧ್ರುವನಾರಾಯಣ ಅವರನ್ನು ನೆನೆದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾವುಕರಾದರು.
Published on

ಬೆಂಗಳೂರು: ಸೋಮವಾರ ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ವೇಳೆ ಕಾಂಗ್ರೆಸ್ ನಾಯಕ ದಿವಂಗತ ಆರ್ ಧ್ರುವನಾರಾಯಣ ಅವರನ್ನು ನೆನೆದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾವುಕರಾದರು.

'ಡಿಕೆ ಸುರೇಶ್ ನನ್ನ ಸಹೋದರನಂತೆ, ಧ್ರುವನಾರಾಯಣ ರಾಜಕೀಯದಲ್ಲಿ ನನ್ನ ಸಹೋದರನಾಗಿದ್ದರು. ಮುಂದಿನ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಧ್ರುವನಾರಾಯಣ ಅವರು ಅಧಿಕಾರ ವಹಿಸಿಕೊಳ್ಳಬೇಕೆಂದು ಬಯಸಿದ್ದರು' ಎಂದು ಹೇಳಿದರು.

ಅವರು ಬದುಕಿದ್ದರೆ, ಧ್ರುವನಾರಾಯಣ ಅವರು ಇಲ್ಲಿ ಸಚಿವರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿರಲಿಲ್ಲ ಎಂದರು.

ಮಾಜಿ ಸಂಸದ ಧ್ರುವನಾರಾಯಣ (62) ಮಾರ್ಚ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಮಾಜಿ ಸಚಿವರಾದ ಅಂಜನಮೂರ್ತಿ, ಡಿಬಿ ಇನಾಮದಾರ್, ಮಾಜಿ ಶಾಸಕರಾದ ಯುಆರ್ ಸಭಾಪತಿ, ಕೆ ವೆಂಕಟಸ್ವಾಮಿ, ನೇತ್ರ ತಜ್ಞ ಡಾ ಭುಜಂಗ ಶೆಟ್ಟಿ ಮತ್ತಿತರರ ನಿಧನಕ್ಕೆ ವಿಧಾನಸಭೆ ಸಂತಾಪ ಸೂಚಿಸಿದೆ.

X

Advertisement

X
Kannada Prabha
www.kannadaprabha.com