ಹಾಸನ: ರೌಡಿಶೀಟರ್​ ಮಾಸ್ತಿಗೌಡನ ಅಟ್ಟಾಡಿಸಿ ಬರ್ಬರ ಹತ್ಯೆ!

ಚನ್ನರಾಯಪಟ್ಟಣ ತಾಲೂಕಿನ ಹೊನ್ನಮಾರನಹಳ್ಳಿಯ ನಟೋರಿಯಸ್ ರೌಡಿಶೀಟರ್ ಮಾಸ್ತಿಗೌಡ ಅಲಿಯಾಸ್ ಕೃಷ್ಣ ಎಂಬಾತನನ್ನು ಹಾಡುಹಗಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 
ಮಾಸ್ತಿಗೌಡ ಹತ್ಯೆ
ಮಾಸ್ತಿಗೌಡ ಹತ್ಯೆ

ಹಾಸನ: ಚನ್ನರಾಯಪಟ್ಟಣ ತಾಲೂಕಿನ ಹೊನ್ನಮಾರನಹಳ್ಳಿಯ ನಟೋರಿಯಸ್ ರೌಡಿಶೀಟರ್ ಮಾಸ್ತಿಗೌಡ ಅಲಿಯಾಸ್ ಕೃಷ್ಣ ಎಂಬಾತನನ್ನು ಹಾಡುಹಗಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಪಟ್ಟಣದ ಬಿಎಂ ರಸ್ತೆಯಲಿರುವ ಧನಲಕ್ಷ್ಮೀ ಚಿತ್ರಮಂದಿರದ ಮುಂಭಾಗದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳ ತಂಡ ಮಾಸ್ತಿಗೌಡನನ್ನು ಹತ್ಯೆ ಮಾಡಿ ಪರಾರಿಯಾಗಿದೆ. 

ಮಾಸ್ತಿಗೌಡ ಕಾನೂನು ಬಾಹಿರ ಚಟುವಟಿಕೆ ಆರೋಪದಡಿ ಗಡಿಪಾರಾಗಿ ಸದ್ಯ ಕಲಬುರಗಿ ಜೈಲಿನಲ್ಲಿರುವ ಮತ್ತೊಬ್ಬ ರೌಡಿ ಶೀಟರ್ ಯಾಚೇನಹಳ್ಳಿ ಚೇತುವಿನ ಮಾಜಿ ಶಿಷ್ಯನಾಗಿದ್ದು ಈತ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು.

ಇನ್ನು ಮಾಸ್ತಿಗೌಡನ ಬರ್ಬರ ಕೊಲೆಯಿಂದ ಇದೀಗ ಚನ್ನರಾಯಪಟ್ಟಣ ಜನತೆ ಬೆಚ್ಚಿ ಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಚನ್ನರಾಯಪಟ್ಟಣ ಡಿವೈಎಸ್​ಪಿ ರವಿಪ್ರಸಾದ್, ನಗರ ಠಾಣೆ ಇನ್ಸ್‌ಪೆಕ್ಟರ್ ಕೆ.ಎಂ. ವಸಂತ್, ಶ್ವಾನದಳ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com