10,034 ಪೊಲೀಸ್ ಕ್ವಾರ್ಟರ್ಸ್ ನಿರ್ಮಾಣಕ್ಕೆ 2,000 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ: ಪರಮೇಶ್ವರ

ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಾಗಿ 10,034 ಕ್ವಾರ್ಟರ್ಸ್ ನಿರ್ಮಿಸಲು ಪ್ರತ್ಯೇಕವಾಗಿ 2,000 ಕೋಟಿ ರೂ.ಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಮಂಗಳವಾರ ತಿಳಿಸಿದರು.
ಜಿ ಪರಮೇಶ್ವರ
ಜಿ ಪರಮೇಶ್ವರ

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಾಗಿ 10,034 ಕ್ವಾರ್ಟರ್ಸ್ ನಿರ್ಮಿಸಲು ಪ್ರತ್ಯೇಕವಾಗಿ 2,000 ಕೋಟಿ ರೂ.ಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಮಂಗಳವಾರ ತಿಳಿಸಿದರು.

ಗದ್ದಲದ ನಡುವೆಯೇ ಸಭಾಧ್ಯಕ್ಷ ಯುಟಿ ಖಾದರ್ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡಿದ್ದು, ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ ಅವರು, 10,034 ಕ್ವಾರ್ಟರ್ಸ್‌ಗಳಲ್ಲಿ 9,524 ಕ್ವಾರ್ಟರ್ಸ್‌ಗಳು ಪೊಲೀಸ್ ಪೇದೆಗಳಿಗೆ ಮತ್ತು 510 ಕ್ವಾರ್ಟರ್ಸ್‌ಗಳನ್ನು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಿಗೆ ಮೀಸಲಿಡಲಾಗುವುದು ಎಂದು ಹೇಳಿದರು.

ಪೊಲೀಸ್ ಪೇದೆಗಳ ಕ್ವಾರ್ಟರ್ಸ್‌ನ 72 ಬ್ಲಾಕ್‌ಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು. ಇದರಲ್ಲಿ ರಾಜ್ಯದ ವಿವಿಧೆಡೆ 12 ಬ್ಲಾಕ್‌ಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com