ಬೆಂಗಳೂರು: ಆರ್‌ಎಂಸಿ ಯಾರ್ಡ್ ಬಳಿ 1.5 ಲಕ್ಷ ಮೌಲ್ಯದ 210 ಟ್ರೇ ಟೊಮೆಟೊ, ಲಗ್ಗೇಜ್ ಜೀಪ್ ಕಳ್ಳತನ!

ಟೊಮೆಟೊ ಬೆಲೆ ಗಗನಕ್ಕೇರಿದ್ದು, ಕಳ್ಳತನದಂತಹ ಪ್ರಕರಣಗಳು ವರದಿಯಾಗುತ್ತಿವೆ. ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಎಂಟಿಐ ಜಂಕ್ಷನ್ ಬಳಿ ಶನಿವಾರ ರಾತ್ರಿ ಸುಮಾರು 210 ಟ್ರೇ ಟೊಮೆಟೊ ಹಾಗೂ ಅದನ್ನು ಸಾಗಿಸುತ್ತಿದ್ದ ಜೀಪ್ ಕಳ್ಳತನವಾಗಿದೆ. 
ಕಳ್ಳತನವಾದ ಟೊಮೆಟೊ ಸಾಗಿಸುತ್ತಿದ್ದ ಜೀಪ್
ಕಳ್ಳತನವಾದ ಟೊಮೆಟೊ ಸಾಗಿಸುತ್ತಿದ್ದ ಜೀಪ್

ಬೆಂಗಳೂರು: ಟೊಮೆಟೊ ಬೆಲೆ ಗಗನಕ್ಕೇರಿದ್ದು, ಕಳ್ಳತನದಂತಹ ಪ್ರಕರಣಗಳು ವರದಿಯಾಗುತ್ತಿವೆ. ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಎಂಟಿಐ ಜಂಕ್ಷನ್ ಬಳಿ ಶನಿವಾರ ರಾತ್ರಿ ಸುಮಾರು 210 ಟ್ರೇ ಟೊಮೆಟೊ ಹಾಗೂ ಅದನ್ನು ಸಾಗಿಸುತ್ತಿದ್ದ ಜೀಪ್ ಕಳ್ಳತನವಾಗಿದೆ. 

ಚಿತ್ರದುರ್ಗದ ಚಳ್ಳಕೆರೆ ನಿವಾಸಿ 38 ವರ್ಷದ ಚಾಲಕ ತನ್ನ ಲಗೇಜ್ ಜೀಪಿನಲ್ಲಿ ಕೋಲಾರದ ಮಾರುಕಟ್ಟೆಗೆ ಟೊಮೆಟೊ ಸಾಗಿಸುತ್ತಿದ್ದಾಗ ಸಿಎಂಟಿಐ ಜಂಕ್ಷನ್ ಬಳಿ ಚಹಾ ಕುಡಿಯಲು ಜೀಪ್ ನಿಲ್ಲಿಸಿದ್ದಾರೆ. ಚಹಾ ಸೇವಿಸಿ ಹಿಂತಿರುಗಿದ ಬಳಿಕ ಜೀಪು ಕಳ್ಳತನವಾಗಿದೆ. ಜೀಪಿನಲ್ಲಿದ್ದ ಚಾಲಕನ ಎರಡು ಮೊಬೈಲ್ ಹಾಗೂ ಆತನ ಸ್ನೇಹಿತನ ಒಂದು ಫೋನ್ ಕೂಡ ಕಳ್ಳತನವಾಗಿದೆ. ಟೊಮೆಟೊ ಬೆಲೆ ಸುಮಾರು 1.5 ಲಕ್ಷ ರೂ. ಜೀಪಿನ ಮೌಲ್ಯ ಸುಮಾರು 3.25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

ಈ ಸಂಬಂಧ ಲಗೇಜ್ ಜೀಪಿನ ಮಾಲೀಕ ಕಮ್ ಚಾಲಕ ಶಿವಣ್ಣ ದೂರು ದಾಖಲಿಸಿದ್ದಾರೆ. ಶಿವಣ್ಣ ಅವರು ಚಳ್ಳೆಕೆರೆಯಿಂದ ಬೆಂಗಳೂರು ಮತ್ತು ಕೋಲಾರದ ಮಾರುಕಟ್ಟೆಗಳಿಗೆ ಟೊಮೆಟೊ ಮತ್ತು ಇತರ ತರಕಾರಿಗಳನ್ನು ನಿಯಮಿತವಾಗಿ ಸಾಗಿಸುತ್ತಿದ್ದರು. ಶನಿವಾರ ಕೆಲವು ರೈತರಿಂದ ಟೊಮೆಟೊ ಮತ್ತು ಈರುಳ್ಳಿ ಸಂಗ್ರಹಿಸಿ ಕೋಲಾರದ ಮಾರುಕಟ್ಟೆಗೆ ತೆರಳುತ್ತಿದ್ದರು. ಅವರ ಸ್ನೇಹಿತ ಮಲ್ಲೇಶ್ ಜೊತೆಯಲ್ಲಿದ್ದ. ಕೋಲಾರಕ್ಕೆ ತೆರಳುತ್ತಿದ್ದ ಇಬ್ಬರೂ ಸಿಎಂಟಿಐ ಜಂಕ್ಷನ್ ಬಳಿ ಜೀಪನ್ನು ನಿಲ್ಲಿಸಿದ್ದು, ರಸ್ತೆ ಬದಿಯ ಟೀ ಸ್ಟಾಲ್‌ಗೆ ಹೋಗಿದ್ದಾರೆ. ನಂತರ ಹಿಂತಿರುಗಿ ನೋಡಿದಾಗ ಟೊಮೆಟೊ ಇದ್ದ ಜೀಪ್ ಕಳ್ಳತನವಾಗಿದೆ.

ಆರೋಪಿಗಳು ಮುಖ್ಯವಾಗಿ ಟೊಮೆಟೊ ಕಾರಣಕ್ಕಾಗಿ ವಾಹನ ಕದ್ದಿದ್ದಾರೆ. ದೂರುದಾರರು ತಮ್ಮ ವಾಹನದ ಹಿಂದೆ ನಿಲ್ಲಿಸಿದ್ದ ಎಸ್‌ಯುವಿಯಲ್ಲಿದ್ದ ಜನರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಳವಾದ ವಾಹನ ತುಮಕೂರು ಆರ್‌ಟಿಒದಲ್ಲಿ ದಾಖಲಾಗಿದೆ. ಶನಿವಾರ ರಾತ್ರಿ 10.15 ರಿಂದ 10.30 ರ ನಡುವೆ ಈ ಘಟನೆ ನಡೆದಿದೆ ಎಂದು ದೂರುದಾರರ ಹೇಳಿಕೆಗಳ ಆಧಾರಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತ ತನ್ನ ವಾಹನವನ್ನು ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧಿಸಿದ ನಂತರ ದೂರು ದಾಖಲಿಸಿದ್ದಾರೆ. ಆರೋಪಿಗಳ ಸುಳಿವು ಪಡೆಯಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com