ಕಾಡಾನೆಗಳ ಓಡಾಟ ಹೆಚ್ಚಳ; ಸುಂಟಿಕೊಪ್ಪದಾದ್ಯಂತ ಬೆಳೆಗಾರರಿಗೆ ಬೆಳೆ ನಷ್ಟದೊಂದಿಗೆ ಸಂಕಷ್ಟ!

ಸುಂಟಿಕೊಪ್ಪ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳ ಓಡಾಟ ನಿರಂತರವಾಗಿ ಹೆಚ್ಚಿದ್ದು, ನಿವಾಸಿಗಳಲ್ಲಿ ಭಯ ಮೂಡಿಸಿದೆ. ಮೂರಕ್ಕೂ ಹೆಚ್ಚು ಕಾಡಾನೆಗಳು ಗ್ರಾಮಗಳಲ್ಲಿ ನಿತ್ಯ ಓಡಾಡುತ್ತಿದ್ದು, ಹೆಚ್ಚುತ್ತಿರುವ ಮಾನವ-ಆನೆ ಘರ್ಷಣೆಗೆ ವಿರಾಮ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಡಿಕೇರಿ: ಸುಂಟಿಕೊಪ್ಪ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳ ಓಡಾಟ ನಿರಂತರವಾಗಿ ಹೆಚ್ಚಿದ್ದು, ನಿವಾಸಿಗಳಲ್ಲಿ ಭಯ ಮೂಡಿಸಿದೆ. ಮೂರಕ್ಕೂ ಹೆಚ್ಚು ಕಾಡಾನೆಗಳು ಗ್ರಾಮಗಳಲ್ಲಿ ನಿತ್ಯ ಓಡಾಡುತ್ತಿದ್ದು, ಹೆಚ್ಚುತ್ತಿರುವ ಮಾನವ-ಆನೆ ಘರ್ಷಣೆಗೆ ವಿರಾಮ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

'ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು ಮತ್ತಿತರ ಸುತ್ತಮುತ್ತಲಿನ ತೋಟಗಳಲ್ಲಿ ಒಟ್ಟು ಮೂರು ಕಾಡಾನೆಗಳು ನಿತ್ಯ ದಾಳಿ ನಡೆಸುತ್ತಿವೆ. ಮೂರೂ ಗಂಡಾನೆ ಹಗಲು ಹೊತ್ತಿನಲ್ಲಿ ಮತ್ತು ಬೇರೆ ಬೇರೆ ಸಮಯಗಳಲ್ಲಿ ಎಸ್ಟೇಟ್‌ಗಳಿಗೆ ಭೇಟಿ ನೀಡುತ್ತವೆ. ಕಾಡಾನೆಗಳ ಕಾಟದಿಂದ ಬೆಳೆಗಾರರು ಮತ್ತು ರೈತರು ತೋಟ ಅಥವಾ ಜಮೀನುಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಈ ಭಾಗದ ಬೆಳೆಗಾರ ಎ ​​ಚೆಂಗಪ್ಪ ಹಂಚಿಕೊಂಡರು. 

ಆನೆಗಳು ಕಾಫಿ ಬೆಳೆಗಳನ್ನು ಹಾನಿಗೊಳಿಸುತ್ತಿರುವಾಗ ಎಸ್ಟೇಟ್‌ಗಳಾದ್ಯಂತ ಹಣ್ಣಿನ ಮರಗಳನ್ನೂ ವಿಪರೀತ ಹಾನಿಗೊಳಿಸುತ್ತಿವೆ.
ಕೆಎಸ್ ಮಂಜುನಾಥ್ ಒಡೆತನದ ಎಸ್ಟೇಟ್ ಆನೆ ಚಲನವಲನಕ್ಕೆ ಸಂಪೂರ್ಣ ಹಾನಿಯಾಗಿದೆ. ಈಮಧ್ಯೆ, ಭತ್ತದ ನಾಟಿಗೆ ಜಮೀನು ಸಿದ್ಧಪಡಿಸಿರುವ ಈ ಭಾಗದ ರೈತರು ಆನೆಗಳ ದಾಳಿಗೆ ಹೆದರಿದ್ದಾರೆ.

'ಆನೆ ಯಾವುದೇ ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಆದರೆ, ದಾಳಿ ನಡೆಸಿಲ್ಲ ಎಂಬುದೇ ಅರಣ್ಯ ಇಲಾಖೆ ಕ್ರಮಕೈಗೊಂಡು ಪುನರ್ವಸತಿ ಕಲ್ಪಿಸದಿರಲು ಕಾರಣವಾಗಬಾರದು' ಎಂದು ಸುಂಟಿಕೊಪ್ಪದ ರಾಜು ರೈ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ (ಇಟಿಎಫ್) ಸ್ಥಾಪಿಸಿದ್ದರೂ, ಇದರಿಂದ ಸಂಘರ್ಷ ಕಡಿಮೆಯಾಗಿಲ್ಲ ಎಂದು ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ.

ಕಾಡಾನೆಗಳನ್ನು ಒಂದು ಎಸ್ಟೇಟ್‌ನಿಂದ ಮತ್ತೊಂದು ಎಸ್ಟೇಟ್‌ಗೆ ಮತ್ತು ಕಾಡಿಗೆ ಓಡಿಸಲು ಇಟಿಎಫ್ ಸಿಬ್ಬಂದಿ ಸಜ್ಜಾಗಿದ್ದಾರೆ. ಆದರೆ, ಈ ಕಾರ್ಯಾಚರಣೆಯ ಸಮಯದಲ್ಲಿ ಬೆಳೆಗಾರರು ಅನುಭವಿಸಿದ ಬೆಳೆ ನಷ್ಟಕ್ಕೆ ಪರಿಹಾರ ನೀಡುವುದಿಲ್ಲ ಎಂದು ಅವರು ಹಂಚಿಕೊಂಡರು.

ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿರುವ ಗ್ರಾಮಸ್ಥರು, ಗ್ರಾಮದಲ್ಲಿ ಓಡಾತ್ತಿರುವ ಮೂರು ಆನೆಗಳನ್ನು ಕೂಡಲೇ ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com