22 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಸುರಂಗ ಮಾರ್ಗ: ಬೆಂಗಳೂರಿನ ಸಂಚಾರ ದಟ್ಟಣೆಗೆ ಕ್ರಮ

ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸುರಂಗ ರಸ್ತೆ ಯೋಜನೆಗಳ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ವಿನ್ಯಾಸ ಸಲಹಾ ಸಂಸ್ಥೆ ಎಇಕಾಂ ಇಂಡಿಯಾದ(AECOM India) ಎಂಜಿನಿಯರ್‌ಗಳು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. 
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸುರಂಗ ರಸ್ತೆ ಯೋಜನೆಗಳ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ವಿನ್ಯಾಸ ಸಲಹಾ ಸಂಸ್ಥೆ ಎಇಕಾಂ ಇಂಡಿಯಾದ(AECOM India) ಎಂಜಿನಿಯರ್‌ಗಳು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. 

ಹಂತ-1 ರ ಅಡಿಯಲ್ಲಿ, ಸುರಂಗ ರಸ್ತೆಯು ಯಲಹಂಕವನ್ನು ಉತ್ತರದಿಂದ ದಕ್ಷಿಣ ಕಾರಿಡಾರ್ ಅಡಿಯಲ್ಲಿ ಕೇಂದ್ರ ರೇಷ್ಮೆ ಮಂಡಳಿಗೆ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್ ಅಡಿಯಲ್ಲಿ (ಕೆಆರ್ ಪುರಂನಿಂದ ಕಂಟೋನ್ಮೆಂಟ್) ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್‌ಗೆ ಸಂಪರ್ಕಿಸುತ್ತದೆ. 50 ಕಿಮೀ ರಸ್ತೆಗಳಿಗೆ ಪ್ರತಿ ಕಿಲೋಮೀಟರ್‌ಗೆ 450 ಕೋಟಿ ರೂಪಾಯಿಗಳಂತೆ ಅಂದಾಜು 22,000 ಕೋಟಿ ರೂಪಾಯಿ ಖರ್ಚಾಗುತ್ತದೆ. 

ಯಲಹಂಕ-ಹೊಸೂರು ರಸ್ತೆಯನ್ನು ಹೆಬ್ಬಾಳ, ಮೇಖ್ರಿ ವೃತ್ತ, ಕಂಟೋನ್ಮೆಂಟ್, ಕಸ್ತೂರಬಾ ರಸ್ತೆ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಮೂಲಕ 27 ಕಿ.ಮೀ ವ್ಯಾಪ್ತಿಗೆ ಸಂಪರ್ಕಿಸುವ ಉತ್ತರ-ದಕ್ಷಿಣ ಕಾರಿಡಾರ್‌ನ ಮಾದರಿಯನ್ನು ಪ್ರಸ್ತುತಪಡಿಸಲಾಗಿದೆ ಎಂದು AECOM ಇಂಡಿಯಾದ ಪ್ರತಿನಿಧಿಗಳು ಹೇಳಿದ್ದಾರೆ.

ಅದೇ ರೀತಿ, ಪೂರ್ವ-ಪಶ್ಚಿಮ ಕಾರಿಡಾರ್-1 ಗಾಗಿ ಭಟರಹಳ್ಳಿ (ಕೆಆರ್ ಪುರಂ) ನಿಂದ ಮೇಖ್ರಿ ವೃತ್ತದವರೆಗೆ ಉತ್ತರ-ದಕ್ಷಿಣ ಕಾರಿಡಾರ್ ನ್ನು 20 ಕಿಲೋ ಮೀಟರ್ ವರೆಗೆ ಸಂಪರ್ಕಿಸುತ್ತದೆ. ಈಸ್ಟ್ ವೆಸ್ಟ್ ಕಾರಿಡಾರ್ 1 ರ ಉಳಿದ ಭಾಗ, ಪೂರ್ವ-ಪಶ್ಚಿಮ ಕಾರಿಡಾರ್ 2 ಮತ್ತು ಸೆಂಟ್ರಲ್ ಕಾರಿಡಾರ್‌ಗಳು ಸೇಂಟ್ ಜಾನ್ಸ್ ಆಸ್ಪತ್ರೆ ಜಂಕ್ಷನ್‌ನಿಂದ ಹೊರ ವರ್ತುಲ ರಸ್ತೆಯ ಅಗರ, ಹಲಸೂರಿನಿಂದ ಡಿಸೋಜಾ ವೃತ್ತ ಮತ್ತು ವೀಲರ್ಸ್ ರಸ್ತೆ ಜಂಕ್ಷನ್‌ನಿಂದ ಕಲ್ಯಾಣ್ ನಗರಕ್ಕೆ ಹಂತ 2 ರಲ್ಲಿ ನಿರ್ಮಿಸಲಾಗುತ್ತದೆ. 

ಒಟ್ಟು 99 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ಮೊದಲ ಹಂತದಲ್ಲಿ 50 ಕಿ.ಮೀ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಯು ಮೇಲ್ಮೈಯಲ್ಲಿ ರಸ್ತೆ ಜಾಗವನ್ನು ಮುಕ್ತಗೊಳಿಸುತ್ತದೆ, ಇದು ವಿಶಾಲವಾದ ಫುಟ್‌ಪಾತ್‌ಗಳು, ಸೈಕಲ್ ಮಾರ್ಗಗಳು ಮತ್ತು ಬಸ್‌ಗಳಿಗೆ ಲಭ್ಯವಾಗುವಂತೆ ಮಾಡುತ್ತದೆ ಎಂದು ಕಂಪನಿಯ ಪ್ರತಿನಿಧಿಗಳು ಹೇಳುತ್ತಾರೆ. ಇದರ ಮುಖ್ಯ ಅನುಕೂಲತೆಗಳೆಂದರೆ ಮರ ಕಡಿಯುವುದು ಕಡಿಮೆ ಆಗುತ್ತದೆ ಮತ್ತು ಸುರಂಗಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಮಾತ್ರ ಭೂಸ್ವಾಧೀನ ಅಗತ್ಯವಿದೆ ಎಂದು ಅವರು ಹೇಳಿದರು.

ಸುರಂಗ ರಸ್ತೆಯು ಪ್ರಯಾಣದ ಪ್ರತಿಯೊಂದು ದಿಕ್ಕಿಗೆ ಕೆಳ ಮತ್ತು ಮೇಲಿನ ಡೆಕ್‌ಗಳನ್ನು ಹೊಂದಿರುತ್ತದೆ. ಮೇಲಿನ ಡೆಕ್‌ನಲ್ಲಿ ದ್ವಿಚಕ್ರ ವಾಹನಗಳು ಎರಡೂ ದಿಕ್ಕುಗಳಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗುವುದು. ಮುಖ್ಯ ಸಂಚಾರದಿಂದ ಬೈಕ್ ಲೇನ್‌ಗಳನ್ನು ಸಮರ್ಪಕವಾಗಿ ಬ್ಯಾರಿಕೇಡ್ ಮಾಡಲಾಗುವುದು ಎಂದು ಹೇಳಿದರು.

ಯೋಜನೆಯನ್ನು ಪ್ರಾರಂಭಿಸುವ ಮೊದಲು ಕಾರ್ಯಸಾಧ್ಯತೆಯ ಅಧ್ಯಯನ, ವಿವರವಾದ ಯೋಜನಾ ವರದಿ ಮತ್ತು ಮಣ್ಣಿನ ಪರೀಕ್ಷೆಯನ್ನು ಮಾಡಬೇಕು. ಉಪ ಮುಖ್ಯಮಂತ್ರಿಗಳಿಗೆ ನಂತರ ಪ್ರಸ್ತುತಿ ನೀಡಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಯೋಜನೆಗೆ ಶೇಕಡಾ 40 ರಷ್ಟು ವೆಚ್ಚವನ್ನು ಸರ್ಕಾರವು ಭರಿಸಲಿದೆ. ಉಳಿದವು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಂಸ್ಥೆಯಿಂದ ಭರಿಸಲಾಗುವುದು ಎಂದು ಪ್ರಸ್ತುತಿಗೆ ಹಾಜರಿದ್ದ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು. 

ಸರ್ಕಾರವು 15 ವರ್ಷಗಳವರೆಗೆ ಪ್ರತಿ ವರ್ಷ 2,000 ಕೋಟಿ ರೂಪಾಯಿಗಿಂತ ಕಡಿಮೆ ಖರ್ಚು ಮಾಡಬೇಕಾಗುತ್ತದೆ. ಟೋಲ್ ಮೂಲಕ ಸಂಗ್ರಹಿಸಿದ ಮೊತ್ತವನ್ನು ಯೋಜನೆಯನ್ನು ನಿರ್ಮಿಸಿದ ಏಜೆನ್ಸಿಗೆ ಮರುಪಾವತಿಸಲು ಬಳಸಲಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com