ಸರ್ಕಾರಿ ಆಸ್ಪತ್ರೆಗೆ ಡಿಸಿ ದಿಢೀರ್ ಭೇಟಿ: ಒಳ ರೋಗಿಗಳಿಗೆ ಕೊಡುವ ಮುದ್ದೆ ಸಾಂಬಾರಿಗೆ 92 ರೂಪಾಯಿ, ಬಿಲ್ ನೋಡಿ ಅಧಿಕಾರಿ ಶಾಕ್!

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ, ಸಾಂಬರ್‌ ಅಥವಾ ಒಂದು ಪ್ಲೇಟ್‌ ಅನ್ನ ಸಾಂಬರ್‌ಗೆ 92 ರು. ಬಿಲ್‌ ಮಾಡುತ್ತಿರುವುದನ್ನು ಕಂಡು ಶಾಕ್ ಆಂದ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್‌ ಅವರು, ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು...
ಪರಿಶೀಲನೆ ನಡೆಸುತ್ತಿರುವ ಮಂಡ್ಯ ಜಿಲ್ಲಾಧಿಕಾರಿ.
ಪರಿಶೀಲನೆ ನಡೆಸುತ್ತಿರುವ ಮಂಡ್ಯ ಜಿಲ್ಲಾಧಿಕಾರಿ.

ನಾಗಮಂಗಲ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ, ಸಾಂಬರ್‌ ಅಥವಾ ಒಂದು ಪ್ಲೇಟ್‌ ಅನ್ನ ಸಾಂಬರ್‌ಗೆ 92 ರು. ಬಿಲ್‌ ಮಾಡುತ್ತಿರುವುದನ್ನು ಕಂಡು ಶಾಕ್ ಆಂದ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್‌ ಅವರು, ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ಕೊಟ್ಟಜಿಲ್ಲಾಧಿಕಾರಿಗಳು ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಕುಂದು ಕೊರತೆಗಳ ಬಗ್ಗೆ ಹೊರರೋಗಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಆಸ್ಪತ್ರೆಯ ಒಳರೋಗಿಗಳಿಗೆ ನೀಡುತ್ತಿರುವ ಊಟದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿ, ಒಳರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ, ಆಡಳಿತದ ಖರ್ಚು-ವೆಚ್ಚಗಳ ಕಡತ ಪರಿಶೀಲನೆ ನಡೆಸಲು ಮುಂದಾದರು. ಈ ವೇಳೆ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ ಸಾಂಬರ್‌ ಅಥವಾ ಒಂದು ಪ್ಲೇಟ್‌ ಅನ್ನ ಸಾಂಬರ್‌ಗೆ 92 ರುೂ, ಒಂದು ಬಾಳೆ ಹಣ್ಣಿಗೆ 8 ರು. ಹಾಗೂ ಒಂದು ಮೊಟ್ಟೆಗೆ 10ರೂ ಬಿಲ್ ಮಾಡುತ್ತಿರುವುದನ್ನು ಕಂಡು ಕೆಂಡಾಮಂಡಲಗೊಂಡರು.

ಹೋಟೆಲ್‌ಗಳಲ್ಲಿಯೇ ಕನಿಷ್ಠ 40 ರಿಂದ 60 ರು.ಗೆ ಮುದ್ದೆ, ಚಪಾತಿ, ಅನ್ನ ಸಾಂಬರ್‌ನ ಒಳ್ಳೆಯ ಊಟ ಸಿಗುತ್ತದೆ. ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್‌ನಲ್ಲಿಯೂ 10 ರು.ಗೆ ಅನ್ನ ಸಾಂಬರ್‌ ನೀಡಲಾಗುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಅನ್ನ-ಸಾಂಬರ್‌ ಅಥವಾ ಒಂದು ಮುದ್ದೆ-ಸಾಂಬರ್‌ಗೆ 92ರು. ಏಕೆ ಕೊಡುತ್ತಿರುವಿರಿ. ನಾನೂ ಕೂಡ ಮುದ್ದೆ ತಿನ್ನುವವನೆ. ಒಂದು ಮುದ್ದೆ ತಯಾರಿಸಲು ಕನಿಷ್ಠ 10ರಿಂದ 15ರು. ಖರ್ಚಾಗುತ್ತದೆ. ಆದರೆ, ಇಲ್ಲಿ 92 ರು. ನಿಗದಿಪಡಿಸಿರುವುದಾದರೂ ಏಕೆ? ಈ ಊಟದ ಟೆಂಡರ್‌ ಅನುಮೋದಿಸಿದವರು ಯಾರೆಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಊಟದ ಟೆಂಡರ್‌ನ ಅವಧಿ ಮಾರ್ಚ್ ತಿಂಗಳಿಗೆ ಮುಕ್ತಾಯವಾಗಿದ್ದರೂ ಕೂಡ ಈವರೆಗೂ ಟೆಂಡರ್‌ ಕರೆದಿಲ್ಲವೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ವೇಳೆ ತಡಬಡಾಯಿಸಿದ ಗುಮಾಸ್ತ ಮೋಹನ್‌, ಇಲಾಖೆಯ ಮೇಲಾಧಿಕಾರಿಗಳಿಂದ ಅನುಮತಿ ಬಂದಿಲ್ಲ. ಹಾಗಾಗಿ ಟೆಂಡರ್‌ ಕರೆದಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರು.

ಕಡತಗಳ ಪರಿಶೀಲನೆ ನಡೆಸಿದ ಬಳಿಕ ಒಳರೋಗಿಗಳ ಊಟದ ದುಬಾರಿ ವೆಚ್ಚದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ, ಶೀಘ್ರದಲ್ಲಿ ವರದಿ ನೀಡುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್‌ ನಯೀಂಉನ್ನೀಸಾ ಅವರಿಗೆ ತಾಕೀತು ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com