ಈ ತಾಲೂಕು ಆಸ್ಪತ್ರೆಯಲ್ಲಿ ಇರುವುದು 12 ವೈದ್ಯರು, ಕರ್ತವ್ಯ ನಿರ್ವಹಿಸುತ್ತಿರುವುದು ಇಬ್ಬರು ಮಾತ್ರ!
ಹೊಸಕೋಟೆಯ ತಾಲೂಕು ಆಸ್ಪತ್ರೆಗೆ ಶನಿವಾರ ದಿಢೀರ್ ಭೇಟಿ ನೀಡಿದ ಕೆಎಸ್‌ಎಲ್‌ಎಸ್‌ಎ ಕಾರ್ಯಾಧ್ಯಕ್ಷ ನ್ಯಾಯಮೂರ್ತಿ ಬಿ. ವೀರಪ್ಪ ಅವರು, 100 ಹಾಸಿಗೆ ಸಾಮರ್ಥ್ಯದ ಆಸ್ಪತ್ಯೆಯ 12 ವೈದ್ಯರ ಪೈಕಿ ಇಬ್ಬರು ಮಾತ್ರ ಇದ್ದದ್ದನ್ನು ಕಂಡು ಆಘಾತಗೊಂಡರು.
Published: 26th February 2023 09:16 AM | Last Updated: 26th February 2023 09:16 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹೊಸಕೋಟೆಯ ತಾಲೂಕು ಆಸ್ಪತ್ರೆಗೆ ಶನಿವಾರ ದಿಢೀರ್ ಭೇಟಿ ನೀಡಿದ ಕೆಎಸ್‌ಎಲ್‌ಎಸ್‌ಎ ಕಾರ್ಯಾಧ್ಯಕ್ಷ ನ್ಯಾಯಮೂರ್ತಿ ಬಿ. ವೀರಪ್ಪ ಅವರು, 100 ಹಾಸಿಗೆ ಸಾಮರ್ಥ್ಯದ ಆಸ್ಪತ್ಯೆಯ 12 ವೈದ್ಯರ ಪೈಕಿ ಇಬ್ಬರು ಮಾತ್ರ ಇದ್ದದ್ದನ್ನು ಕಂಡು ಕಿಡಿಕಾರಿದರು.
ರೋಗಿಗಳು ಚಿಕಿತ್ಸೆಗಾಗಿ ಸಾಲುಗಟ್ಟಿ ನಿಂತಿದ್ದರು. ಕಡ್ಡಾಯವಾಗಿ ಗ್ರಾಮೀಣ ಸೇವೆಗೆ ಒಳಪಡುವ ವೈದ್ಯರು ಪ್ರಾಮಾಣಿಕತೆ ತೋರದಿರುವುದು ಹಾಗೂ ಆಸ್ಪತ್ರೆಯಲ್ಲಿ ಶುಚಿತ್ವದ ಕೊರತೆ ಇರುವುದು ಕಂಡುಬಂದಿದೆ.
ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಜೈಶಂಕರ್ ಮತ್ತು ಪಿಆರ್‌ಒ ವಿಘ್ನೇಶ್ ಕುಮಾರ್ ಅವರೊಂದಿಗೆ ನ್ಯಾಯಮೂರ್ತಿ ವೀರಪ್ಪ ಆಸ್ಪತ್ರೆಗೆ ಭೇಟಿ ನೀಡಿದರು. ಗೈರು ಹಾಜರಾದ ವೈದ್ಯರಿಗೆ ನೋಟಿಸ್ ಜಾರಿ ಮಾಡುವಂತೆ ಮುಖ್ಯ ಆಡಳಿತಾಧಿಕಾರಿ ಡಾ.ಸತೀಶ್ ಅವರಿಗೆ ಸೂಚಿಸಲಾಗಿದೆ.