ಬೆಂಗಳೂರು: ವಾಣಿಜ್ಯ ಸಂಕೀರ್ಣಗಳ ನವೀಕರಣ ಯೋಜನೆ, ಪುನರ್ ಆರಂಭಕ್ಕೆ ಬಿಡಿಎ ಮುಂದು!

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಏಳು ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಾಣ ಮಾಡುವುದರೊಂದಿಗೆ ಬಾಡಿಗೆಯಲ್ಲಿ ಆರು ಪಟ್ಟು ಹೆಚ್ಚು ಆದಾಯ ಗಳಿಸುವ ಬಿಡಿಎ ಯೋಜನೆಗೆ ಹಿಂದಿನ ಸರ್ಕಾರ 2019 ಅಕ್ಟೋಬರ್ ನಲ್ಲಿ ತಡೆ ಹಿಡಿಯುವ ಮೂಲಕ ತೀವ್ರ ಹೊಡೆತ ನೀಡಿತ್ತು.
ಬಿಡಿಎ ಸಾಂದರ್ಭಿಕ ಚಿತ್ರ
ಬಿಡಿಎ ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಏಳು ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಾಣ ಮಾಡುವುದರೊಂದಿಗೆ ಬಾಡಿಗೆಯಲ್ಲಿ ಆರು ಪಟ್ಟು ಹೆಚ್ಚು ಆದಾಯ ಗಳಿಸುವ ಬಿಡಿಎ ಯೋಜನೆಗೆ ಹಿಂದಿನ ಸರ್ಕಾರ 2019 ಅಕ್ಟೋಬರ್ ನಲ್ಲಿ ತಡೆ ಹಿಡಿಯುವ ಮೂಲಕ ತೀವ್ರ ಹೊಡೆತ ನೀಡಿತ್ತು. ಇದೀಗ ಹೊಸ ಸರ್ಕಾರದ ಮೂಲಕ ತನ್ನ ಯೋಜನೆಯನ್ನು ಪುನರುಜ್ಜೀವನಗೊಳಿಸಲು ಪ್ರಾಧಿಕಾರ ಪ್ರಯತ್ನಿಸುತ್ತಿದೆ.

ಈ ಸಂಬಂಧ ಬಿಡಿಎ ಉನ್ನತ ಅಧಿಕಾರಿಗಳು ಕಳೆದ ವಾರ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿದ್ದು, ಗುತ್ತಿಗೆದಾರರಿಗೆ ನೀಡಿರುವ ಕೆಲಸವನ್ನು ಮುಂದುವರಿಸುವ ಅಗತ್ಯವನ್ನು ಮನವರಿಕೆ ಮಾಡಿದರು ಎಂದು ಮೂಲಗಳು ತಿಳಿಸಿವೆ. 

ಎಚ್‌ಎಸ್‌ಆರ್ ಲೇಔಟ್, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ಸದಾಶಿವನಗರ ಮತ್ತು ಇಂದಿರಾನಗರದ ಪ್ರಮುಖ ಪ್ರದೇಶಗಳಲ್ಲಿ ಬಿಡಿಎ ಸಂಕೀರ್ಣಗಳು 566 ಅಂಗಡಿಗಳನ್ನು ಹೊಂದಿವೆ. ಈ 30 ವರ್ಷಗಳಷ್ಟು ಹಳೆಯದಾದ ಹಲವು ಅಂಗಡಿಗಳು ದಯನೀಯ ಸ್ಥಿತಿಯಲ್ಲಿದ್ದು, ಅವುಗಳಿಗೆ ವಾರ್ಷಿಕ ಬಾಡಿಗೆ ಕೇವಲ 7 ಕೋಟಿ ರೂ. ಆಗಿದೆ.

ಮುಂದಿನ 30 ವರ್ಷಗಳವರೆಗೆ ಅವುಗಳನ್ನು ಗುತ್ತಿಗೆ ನೀಡುವ ನಿಟ್ಟಿನಲ್ಲಿ ಮರು ನಿರ್ಮಾಣ ಮಾಡುವುದಕ್ಕೆ 2019 ಮಾರ್ಚ್ 22 ರಂದು ಖಾಸಗಿಯವರಿಗೆ ಹಸ್ತಾಂತರಿಸಲಾಗಿತ್ತು. ಬಹು-ಮಹಡಿಗಳ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸಂಕೀರ್ಣವನ್ನು ಮರು ನಿರ್ಮಾಣವಾಗುತ್ತಿದ್ದು, ಅವುಗಳು ಸಂಪೂರ್ಣವಾಗಿ ಸಿದ್ಧವಾದಾಗ ರೂ 38.98 ಕೋಟಿ ಆದಾಯ ಗಳಿಸಲು ಯೋಜಿಸಿರುವುದಾಗಿ ಮೂಲವೊಂದು ತಿಳಿಸಿದೆ.

ಇಂದಿರಾನಗರ ಕಾಂಪ್ಲೆಕ್ಸ್ ಅನ್ನು ಮೇವರಿಕ್ ಹೋಲ್ಡಿಂಗ್ಸ್‌ಗೆ ಗುತ್ತಿಗೆ ನೀಡಿದರೆ, ಉಳಿದ ಆರನ್ನು ಎಂಫಾರ್ ಡೆವಲಪರ್ಸ್‌ಗೆ ಹಸ್ತಾಂತರಿಸಲಾಗಿದೆ. ಗುತ್ತಿಗೆದಾರರು ಈ ಕಟ್ಟಡಗಳಲ್ಲಿ 30 ವರ್ಷಗಳಲ್ಲಿ  ಸುಮಾರು  700 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಸಾಧ್ಯತೆಯಿದೆ. 'ಅಂಗಡಿಗಳಿರುವ ಜಾಗದಿಂದ ಶೇ.30ರಷ್ಟು ಆದಾಯ ಬಿಡಿಎಗೆ ಮತ್ತು, ಉಳಿದ ಶೇ.70ರಷ್ಟು ಖಾಸಗಿಯವರಿಗೆ ಹೋಗಬೇಕಿತ್ತು. ಇಂದಿರಾನಗರದಲ್ಲಿ ಮಾತ್ರ ಬಿಡಿಎಗೆ ಶೇ 35ರಷ್ಟಿತ್ತು ಎಂದು ಇನ್ನೊಂದು ಮೂಲಗಳು ತಿಳಿಸಿವೆ. ಇಂದಿರಾನಗರದಲ್ಲಿ ಬಿಡಿಎ ಬಾಡಿಗೆ 2 ಕೋಟಿಯಿಂದ 20 ಕೋಟಿಗೆ ಏರಿಕೆಯಾಗುತ್ತಿತ್ತು.

ವಾಣಿಜ್ಯ ಸಂಕೀರ್ಣಗಳನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬೇಕೆಂದು ಅವಧಿ ನಿಗದಿಪಡಿಸಿ ಮಾರ್ಚ್ 2019 ರಲ್ಲಿ ಎರಡು ವರ್ಷಗಳ ಗುತ್ತಿಗೆ ನೀಡಲಾಗಿತ್ತು. ಆದರೆ ಅದನ್ನು  ತಡೆಹಿಡಿಯಲಾಯಿತು  ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com