ಪ್ರವಾಸಿಗರಿಗೆ ನೆರವಾಗಲು ಸಹಾಯಕೇಂದ್ರಗಳ ಸ್ಥಾಪಿಸಲು ಸರ್ಕಾರ ಮುಂದು

ರಾಜ್ಯದ ವಿವಿಧ ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಸಮರ್ಪಕ ಮಾಹಿತಿ ನೀಡಲು ಸಹಾಯವಾಣಿಗಳೊಂದಿಗೆ ಪ್ರತ್ಯೇಕ ಸಹಾಯಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ವಿವಿಧ ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಸಮರ್ಪಕ ಮಾಹಿತಿ ನೀಡಲು ಸಹಾಯವಾಣಿಗಳೊಂದಿಗೆ ಪ್ರತ್ಯೇಕ ಸಹಾಯಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಘೋಷಣೆಯಾಗಿರುವುದರಿಂದ ಆರು ತಿಂಗಳಲ್ಲಿ ಸಹಾಯಕೇಂದ್ರಗಳ ಸ್ಥಾಪಿಸುವ ಗುರಿಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೊಂದಿದ್ದಾರೆ.

ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಪಾತಗಳು ಸೇರಿದಂತೆ ಹಲವಾರು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಆಗಮಿಸುವ ಸಂಖ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡಲು ಸಹಾಯವಾಣಿಗಳ ಆರಂಭಿಸಲು ತಜ್ಞರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿರುವ ಜಲಪಾತಗಳ ಪಟ್ಟಿಯನ್ನು ಸಿದ್ಧಪಡಿಸಿ ಅವುಗಳ ಸುರಕ್ಷತೆಯನ್ನು ಪ್ರಮಾಣೀಕರಿಸುವುದಾಗಿ ರಾಜ್ಯ ಸರ್ಕಾರ ಈ ಹಿಂದೆಯೇ ಹೇಳಿತ್ತು. ಇದಕ್ಕಾಗಿ ಕ್ಯಾಲೆಂಡರ್ ಸಿದ್ಧಪಡಿಸಲು ಮುಂದಾಗಿತ್ತು. ಪಟ್ಟಿಯಲ್ಲಿರುವ ಜಲಪಾತಗಳಿಗೆ ಪ್ರವಾಸಿಗರು ಯಾವ ಸಂದರ್ಭದಲ್ಲಿ ಭೇಟಿ ನೀಡಬಹುದು, ಸ್ಥಳಗಳ ಮಾಹಿತಿ ಕುರಿತು ನಮೂದಿಸಲು ನಿರ್ಧರಿಸಿದ್ದು. ಆದರೆ, ಭಾರೀ ಮಳೆ ಹಿನ್ನೆಲೆಯಲ್ಲಿ ಜಲಪಾತಗಳಿಗೆ ಭೇಟಿ ನೀಡಲು ನಿಷೇಧ ಹೇರಲಾಗಿದೆ.

ಸರ್ಕಾರ, ಪ್ರವಾಸೋದ್ಯಮ ಇಲಾಖೆಯು ಈ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಅಗತ್ಯವಿದ್ದು, ಮಳೆಗಾಲದಲ್ಲಿ ಜಲಪಾತಗಳ ವಿವರಗಳನ್ನು ಸರ್ಕಾರ ಪ್ರವಾಸಿಗರಿಗೆ ಒದಗಿಸಬೇಕು. ಅಸಮರ್ಪಕ ನಿರ್ವಹಣೆಯಿಂದಾಗಿ ಜೋಗ್ ಫಾಲ್ಸ್ ಮತ್ತು ಗಗನಚುಕ್ಕಿ-ಭರಚುಕ್ಕಿಯಂತಹ ಕೆಲವೇ ಜಲಪಾತಗಳಲ್ಲಿ ಹೆಚ್ಚೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಪ್ರವಾಸಿ ತಾಣದಲ್ಲಿ ಸಿವಿಲ್ ಕಾಮಗಾರಿಗಳಿಗೆ ಒತ್ತು ನೀಡಲಾಗುತ್ತಿದೆ, ಇದು ದೂರದೃಷ್ಟಿ ಮತ್ತು ಯೋಜನೆಯ ಕೊರತೆಯಿರುವುದನ್ನು ಎತ್ತಿ ತೋರಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ರಾಜ್ಯದ ಪ್ರವಾಸಿ ತಾಣಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಸರ್ಕಾರ ಉತ್ಸುಕವಾಗಿದೆ. ಮಳೆಗಾರದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಜನರು ಉತ್ಸುಕರಾಗಿರುತ್ತಾರೆ. ಆದರೆ, ಅವರಿಗೆ ಮಾರ್ಗದರ್ಶ ನೀಡಲು ಸೂಕ್ತ ವೇದಿಕೆಗಳಿಲ್ಲ. ಇದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿರುವ ತಜ್ಞರೊಬ್ಬರು ಹೇಳಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ಹೆಲ್ಪ್‌ಡೆಸ್ಕ್ ಮತ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಬಜೆಟ್'ನಲ್ಲಿ ಘೋಷಣೆ ಮಾಡಲಾಗಿತ್ತು. ಈ ಸಹಾಯಕೇಂದ್ರಗಳ ಸ್ಥಾಪಿಸಲು ಆರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಈ ಕೇಂದ್ರವು ಗಮ್ಯಸ್ಥಾನದ ವಿವರವಾದ ಮಾಹಿತಿ, ಸುರಕ್ಷತಾ ಅಂಶಗಳು, ಸೌಲಭ್ಯಗಳು ಮತ್ತು ಪ್ರವಾಸಿಗರು ತಿಳಿದುಕೊಳ್ಳಲು ಬಯಸುವ ಎಲ್ಲಾ ಇತರ ಸಂಬಂಧಿತ ಮಾಹಿತಿಯನ್ನು ನೀಡುತ್ತದೆ. ಮಳೆಗಾಲದಲ್ಲಿ ಕೆಲವು ಜಲಪಾತಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈ ಕುರಿತ ನಿರ್ಧಾರವನ್ನು ಆಯಾ ಜಿಲ್ಲೆಗಳ ಸಂಬಂಧ ಪಟ್ಟಂತಹ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com