ಮಣಿಪುರ ಹಿಂಸಾಚಾರ: ಅಲ್ಲಿಂದ ವಲಸೆ ಬರುವ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಶಾಲೆಗಳಿಗೆ ಸರ್ಕಾರ ಸೂಚನೆ

ರಾಜ್ಯ ಪಠ್ಯಕ್ರಮಕ್ಕೆ ಸಂಯೋಜಿತವಾಗಿರುವ ಎಲ್ಲಾ ಶಾಲೆಗಳು ಕರ್ನಾಟಕಕ್ಕೆ ವಲಸೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಪಠ್ಯಕ್ರಮಕ್ಕೆ ಸಂಯೋಜಿತವಾಗಿರುವ ಎಲ್ಲಾ ಶಾಲೆಗಳು ಕರ್ನಾಟಕಕ್ಕೆ ವಲಸೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೂಚನೆ ನೀಡಿದೆ.

ಈ ಕುರಿತು ಹೊರಡಿಸಿರುವ ಸುತ್ತೋಲೆಯಲ್ಲಿ, ದಾಖಲೆಗಳ ಕೊರತೆಯನ್ನು ನೆಪವಾಗಿಟ್ಟುಕೊಂಡು ಮಣಿಪುರದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸದಂತೆ ಶಾಲೆಗಳಿಗೆ ತಿಳಿಸಲಾಗಿದೆ.

'ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಕಾರಣದಿಂದ ಕೆಲವು ಪೋಷಕರು ಕರ್ನಾಟಕಕ್ಕೆ ವಲಸೆ ಬರುತ್ತಿದ್ದಾರೆ ಮತ್ತು ಕರ್ನಾಟಕದ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯಲು ಬಯಸುತ್ತಿದ್ದಾರೆ. ದಾಖಲೆಗಳ ಕೊರತೆಯ ಕಾರಣಕ್ಕೆ ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಬಾರದು' ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಗಳು ತಮ್ಮ ರಾಜ್ಯದಲ್ಲಿ ಯಾವ ದರ್ಜೆಯಲ್ಲಿ ಓದುತ್ತಿದ್ದರು ಎಂಬುದರ ಕುರಿತು ಪೋಷಕರಿಂದ ಅಂಡರ್‌ಟೇಕಿಂಗ್ ಪಡೆಯುವ ಮೂಲಕ ಪ್ರವೇಶವನ್ನು ನೀಡಬೇಕು ಎಂದು ತಿಳಿಸಲಾಗಿದೆ.

ಪ್ರೀ-ಯೂನಿವರ್ಸಿಟಿ ಕೋರ್ಸ್‌ಗಳಿಗೆ ಸಹ ಈ ನಿರ್ದೇಶನಗಳು ಅನ್ವಯಿಸುತ್ತವೆ. ಕಾಲೇಜುಗಳು ಆನ್‌ಲೈನ್‌ ಮೂಲಕ ಅರ್ಹತಾ ಪ್ರಮಾಣಪತ್ರವನ್ನು ಪಡೆಯಲು ಮತ್ತು ನಿಗದಿತ ಸಮಯದೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಷರತ್ತಿನೊಂದಿಗೆ ವಿದ್ಯಾರ್ಥಿಗಳು/ಪೋಷಕರಿಂದ ಅಂಡರ್‌ಟೇಕಿಂಗ್ ಪಡೆಯಲು ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com