ಲೋಕಾಯುಕ್ತ ಪೊಲೀಸರ ದಾಳಿ
ಲೋಕಾಯುಕ್ತ ಪೊಲೀಸರ ದಾಳಿ

ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: 48.75 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಕಳೆದೆರಡು ದಿನಗಳಿಂದ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 15 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 48.75 ಕೋಟಿ ರೂ ಮೌಲ್ಯದ ನಗದು, ಚಿನ್ನಾಭರಣ ಮತ್ತು ಇತರ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಬೆಂಗಳೂರು: ಕಳೆದೆರಡು ದಿನಗಳಿಂದ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 15 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 48.75 ಕೋಟಿ ರೂ ಮೌಲ್ಯದ ನಗದು, ಚಿನ್ನಾಭರಣ ಮತ್ತು ಇತರ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಸರ್ಕಾರಿ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಮಂಗಳೂರು, ಉಡುಪಿ, ಹಾವೇರಿ, ಕೊಪ್ಪಳ ಸೇರಿದಂತೆ 15 ಮಂದಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು 57 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದರು.

15 ಮಂದಿಯಲ್ಲಿ ಬಿಬಿಎಂಪಿ ದಕ್ಷಿಣ ವಿಭಾಗದ (ಬೊಮ್ಮನಹಳ್ಳಿ ವಲಯ) ಕಾರ್ಯಪಾಲಕ ಎಂಜಿನಿಯರ್ ಎನ್‌ಜಿ ಪ್ರಮೋದ್‌ ಕುಮಾರ್‌ ಅವರ ಬಳಿ ಅಂದಾಜು 8 ಕೋಟಿ ರೂ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಈತನ ವಿರುದ್ಧ ಮಂಡ್ಯ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಂಡ್ಯ ಮತ್ತು ಬೆಂಗಳೂರಿನಲ್ಲಿ ಈತನ ಸಂಬಂಧ ಐದು ಕಡೆ ಶೋಧ ನಡೆಸಲಾಯಿತು.

ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ದೇವರಹಳ್ಳಿಯಲ್ಲಿ 60x50 ಅಳತೆಯ ನಿವೇಶನದಲ್ಲಿ 11 ಮನೆಗಳ ಅಪಾರ್ಟ್‌ಮೆಂಟ್ ನಿರ್ಮಿಸಿರುವುದು ಪೊಲೀಸರಿಗೆ ಪತ್ತೆಯಾಗಿದೆ. ಅಲ್ಲದೆ, ಅಧಿಕಾರಿಗೆ ಅದೇ ಗ್ರಾಮದಲ್ಲಿ 1.20 ಎಕರೆ ಪರಿವರ್ತಿತ ಜಮೀನು, ಮೈಸೂರಿನಲ್ಲಿ ಮೂರು ವಸತಿ ಪ್ಲಾಟ್‌ಗಳು ಮತ್ತು ಬೆಂಗಳೂರಿನ ವಸಂತಪುರದಲ್ಲಿ ಒಂದು ಫ್ಲಾಟ್ ಜೊತೆಗೆ ಜೆಪಿ ನಗರದಲ್ಲಿ ಫ್ಲಾಟ್ ಇದೆ. ಅದಲ್ಲದೆ ಅಧಿಕಾರಿ ಬಳಿ ಎರಡು ನಾಲ್ಕು ಚಕ್ರದ ವಾಹನಗಳು, 857 ಗ್ರಾಂ ಚಿನ್ನಾಭರಣ, 749 ಗ್ರಾಂ ಬೆಳ್ಳಿ ಹಾಗೂ 1.40 ಲಕ್ಷ ರೂಪಾಯಿ ನಗದು ದಾಳಿ ವೇಳೆ ಪತ್ತೆಯಾಗಿದೆ. 

ಹಾವೇರಿ ಉಪವಿಭಾಗದ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಎಂಜಿನಿಯರ್ ವಾಗೀಶ್ ಬಸವಾನಂದ ಶೆಟ್ಟರ ವಿರುದ್ಧ ಡಿಎ ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿ ಲೋಕಾಯುಕ್ತ ಪೊಲೀಸರು ಮೂರು ಸ್ಥಳಗಳಲ್ಲಿ ಶೋಧ ನಡೆಸಿ ಅವರ ಆಸ್ತಿ ಮೌಲ್ಯ ಸುಮಾರು 4.75 ಕೋಟಿ ರೂಪಾಯಿ ಪತ್ತೆಯಾಗಿದೆ. ಇವರ ಬಳಿ 500 ಗ್ರಾಂ ಚಿನ್ನಾಭರಣ, 2 ಕಿಲೋ ಬೆಳ್ಳಿ ವಸ್ತುಗಳು, ರೂ. 18.30 ಲಕ್ಷ ನಗದು, ಮೂರು ನಾಲ್ಕು ಚಕ್ರದ ವಾಹನಗಳು, ಎರಡು ಟ್ರ್ಯಾಕ್ಟರ್‌ಗಳು, ರಾಣೆಬೆನ್ನೂರಿನಲ್ಲಿ 14 ಸೈಟ್‌ಗಳು ಮತ್ತು ಎಂಟು ಮನೆಗಳು, ಹಾವೇರಿಯಲ್ಲಿ 2 ಸೈಟ್‌ಗಳು ಮತ್ತು ಹಾವೇರಿ ಜಿಲ್ಲೆಯಲ್ಲಿ 65 ಎಕರೆ ಕೃಷಿ ಭೂಮಿ ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಆರ್‌ಡಿಪಿಆರ್ ಎಂಜಿನಿಯರಿಂಗ್ ವಿಭಾಗದ ಜೂನಿಯರ್ ಎಂಜಿನಿಯರ್ ಶಂಕರ್ ನಾಯ್ಕ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.

ಉಳಿದಂತೆ: ಎಚ್‌ಜೆ ರಮೇಶ್, ಮುಖ್ಯ ಇಂಜಿನಿಯರ್ ಮತ್ತು ನಿರ್ದೇಶಕರು (ತಾಂತ್ರಿಕ), ಬೆಸ್ಕಾಂ ಕಾರ್ಪೊರೇಟ್ ಕಚೇರಿ, ಬೆಂಗಳೂರು - 5.6 ಕೋಟಿ ರೂ ಮೌಲ್ಯ.

  • ಟಿ.ವಿ.ನಾರಾಯಣಪ್ಪ, ಕಾರ್ಖಾನೆಗಳ ಉಪನಿರ್ದೇಶಕರು, ಬೆಂಗಳೂರು - 2.5 ಕೋಟಿ ರೂ ಮೌಲ್ಯ
  • ಎಸ್.ಡಿ.ರಂಗಸ್ವಾಮಿ, ಕಾರ್ಯದರ್ಶಿ, ಕಿತ್ತಗಾನಹಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಉತ್ತರ ತಾಲ್ಲೂಕು - 2.5 ಕೋಟಿ ರೂ. 
  • ಎನ್ ಮಟ್ಟು, ಮುಖ್ಯ ಲೆಕ್ಕಾಧಿಕಾರಿ, ಮುಡಾ, ಮೈಸೂರು - 2.70 ಕೋಟಿ ಕೋಟಿ ರೂ. 
  • ಎ ನಾಗೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಮುಡಾ ಮೈಸೂರು - 2.30 ಕೋಟಿ ರೂ. 
  • ಜೆ ಮಹೇಶ್, ಸೂಪರಿಂಟೆಂಡೆಂಟ್ ಎಂಜಿನಿಯರ್, ಡಿಸಿ (ಅಭಿವೃದ್ಧಿ), ಮೈಸೂರು ನಗರ ನಿಗಮ - 2.5 ಕೋಟಿ ರೂ. 
  • ಎಂ ಶಂಕರ ಮೂರ್ತಿ, ಹಿರಿಯ ಉಪನೋಂದಣಾಧಿಕಾರಿ, ನಂಜನಗೂಡು, ಮೈಸೂರು ಜಿಲ್ಲೆ- 2.63 ಕೋಟಿ ರೂ. 
  • ಕೆ ಪ್ರಶಾಂತ್, ಸೂಪರಿಂಟೆಂಡೆಂಟ್ ಇಂಜಿನಿಯರ್, ಕರ್ನಾಟಕ ನೀರವಾರಿ ನಿಗಮ ಲಿಮಿಟೆಡ್, ಮೇಲ್ ತುಂಗಾ ಯೋಜನೆ ವಲಯ, ಶಿವಮೊಗ್ಗ - 3.20 ಕೋಟಿ ರೂ. 
  • ಬಿ.ಆರ್.ಕುಮಾರ್, ಕಾರ್ಮಿಕ ಅಧಿಕಾರಿ, ಮಣಿಪಾಲ, ಉಡುಪಿ-1.40 ಕೋಟಿ ರೂ. 
  • ಎ.ಎಂ.ನಿರಂಜನ್, ಹಿರಿಯ ಭೂವಿಜ್ಞಾನಿ, ವಿಕಾಸ ಸೌಧ, ಬೆಂಗಳೂರು - 3.66 ಕೋಟಿ ರೂ. 
  • ಜರಣಪ್ಪ ಎಂ ಚಿಂಚಿಲಿಕರ್, ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್, ಕೊಪ್ಪಳ - 3.5 ಕೋಟಿ ರೂ. 
  • ಸಿ.ಎನ್.ಮೂರ್ತಿ, ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಮೈಸೂರು - 3.5 ಕೋಟಿ ರೂ. 

Related Stories

No stories found.

Advertisement

X
Kannada Prabha
www.kannadaprabha.com