ಬೆಂಗಳೂರು: ಮಳೆನೀರು ಚರಂಡಿ ಸರಿಪಡಿಸಲು ಬೆಂಗಳೂರಿಗೆ 2,800 ಕೋಟಿ ರೂ ಅಗತ್ಯ!

ಭವಿಷ್ಯದಲ್ಲಿ ಪ್ರವಾಹ ಮತ್ತು ವಿನಾಶವನ್ನು ತಡೆಗಟ್ಟಲು ಮಳೆನೀರಿನ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಬೆಂಗಳೂರಿಗೆ 2,800 ಕೋಟಿ ರೂ.ಗಳ ಅಗತ್ಯವಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಭವಿಷ್ಯದಲ್ಲಿ ಪ್ರವಾಹ ಮತ್ತು ವಿನಾಶವನ್ನು ತಡೆಗಟ್ಟಲು ಮಳೆನೀರಿನ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಬೆಂಗಳೂರಿಗೆ 2,800 ಕೋಟಿ ರೂ.ಗಳ ಅಗತ್ಯವಿದೆ. ಬೆಂಗಳೂರು ನಗರ ಪ್ರವಾಹದ ವರದಿಯು ಬುಧವಾರ ಬಿಡುಗಡೆ ಮಾಡಿದ್ದು, ಮುಂಬರುವ ವರ್ಷಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಗಳನ್ನು ಎದುರಿಸಲು ಮಾಸ್ಟರ್ ಪ್ಲಾನ್‌ನ ಅವಶ್ಯಕತೆಯಿದೆ ಎಂದು ಹೇಳಿದೆ.

ಸಣ್ಣ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತವಾಗುತ್ತಿವೆ. ಒಳಚರಂಡಿ ವ್ಯವಸ್ತೆ ಅಸ್ತವ್ಯಸ್ತವಾಗಿದೆ. ಕೆಲ ಕಾಲದ ಮಳೆಗೆ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಹೀಗಾಗಿ ಭವಿಷ್ಯದ ಪ್ರವಾಹ ಮತ್ತು ವಿನಾಶವನ್ನು ತಡೆಗಟ್ಟಲು ಮಳೆನೀರು ಒಳಚರಂಡಿ ವ್ಯವಸ್ಥೆ  ಸರಿಪಡಿಸಲು ಬೆಂಗಳೂರಿಗೆ 2,800 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ ನೈಟ್ ಫ್ರಾಂಕ್ ಇಂಡಿಯಾ ವರದಿ ಮಾಡಿದೆ.

ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ ನೈಟ್ ಫ್ರಾಂಕ್ ಇಂಡಿಯಾ ಬೆಂಗಳೂರು ನಗರ ಪ್ರವಾಹ ವರದಿ ಬಿಡುಗಡೆ ಮಾಡಿದ್ದು, ಮುಂಬರುವ ವರ್ಷಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸಲು ಮಾಸ್ಟರ್ ಪ್ಲಾನ್‌ನ ಅಗತ್ಯವಿದೆ ಎಂದು ಒತ್ತಿಹೇಳಿದೆ. ನಗರ ಪ್ರವಾಹದಿಂದ ಉಂಟಾಗುವ ಸಾಮಾಜಿಕ ಮತ್ತು ಆರ್ಥಿಕ ನಷ್ಟವನ್ನು ತಪ್ಪಿಸಲು ಬೆಂಗಳೂರಿನ ಮಳೆನೀರಿನ ಮೂಲಸೌಕರ್ಯಗಳ ಮರುಸ್ಥಾಪನೆ ಮತ್ತು ನಿರ್ಮಾಣವು ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಸಂಸ್ಥೆಯು ಉಲ್ಲೇಖಿಸಿದೆ.

2002 ರಲ್ಲಿ 37% ರಷ್ಟಿದ್ದ ನಗರದ ಅಭುವೃದ್ಧು ಹೊಂದುತ್ತಿರುವ ಪ್ರದೇಶದ ಪಾಲು 2020 ರಲ್ಲಿ 93% ಕ್ಕೆ ಏರಿದೆ ಎಂದು ವರದಿ ಹೇಳಿದೆ. ಅಸ್ತಿತ್ವದಲ್ಲಿರುವ ಜನಸಂಖ್ಯೆಯು ಈಗಾಗಲೇ ನಗರದಲ್ಲಿನ ಕೆರಗಳು ಮತ್ತು ಮಳೆನೀರಿನ ಚರಂಡಿಗಳ ಸುತ್ತಲೂ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಜೊತೆಗೆ ಕ್ಯಾಸ್ಕೇಡಿಂಗ್ ಕೂಡ ಹೊಂದಿದೆ ಎಂದು ವರದಿ ಹೇಳಿದೆ.

ಮಳೆಯ ತುರ್ತು ಸಂದರ್ಭಗಳಲ್ಲಿ ಬಿಬಿಎಂಪಿ ಸಹಾಯಕ್ಕೆ ಬರಲಿದ್ದಾರೆ ಸಂಚಾರಿ ಪೊಲೀಸರು ಮಳೆನೀರನ್ನು ಗಣನೀಯವಾಗಿ ಹೀರಿಕೊಳ್ಳುವ ನಗರದ ಸಾಮರ್ಥ್ಯ ಕುಸಿತವಾಗಿದೆ. ಹೀಗಾಗಿಯೇ ಕಳೆದ ವರ್ಷ ರಾಜ್ಯ ರಾಜಧಾನಿ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಪ್ರಸ್ತುತ, ಬೆಂಗಳೂರು 842 ಕಿಮೀ ಪ್ರಾಥಮಿಕ ಮತ್ತು ಮಾಧ್ಯಮಿಕ ಒಳಚರಂಡಿಯನ್ನು ಹೊಂದಿದೆ. ಪ್ರಾದೇಶಿಕ ವಿಸ್ತರಣೆಗೆ ಪೂರಕವಾಗಿ, ನಗರವು ವಿಶಾಲವಾಗಿ 658 ಕಿಮೀ ಪ್ರಾಥಮಿಕ ಮತ್ತು ಮಾಧ್ಯಮಿಕ ಚರಂಡಿಗಳನ್ನು ಸೇರಿಸುವ ಅಗತ್ಯವಿದೆ ಎಂದು ಸಂಸ್ಥೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com