ಬೆಂಗಳೂರು: ಬಸ್ಗಳಲ್ಲಿ ಮಹಿಳೆಯರು, ಹಿರಿಯ ನಾಗರಿಕರಿಗೆ ಆಸನ ಮೀಸಲಿಟ್ಟಿರುವ ಕುರಿತು ಫಲಕ ನೋಡಿಸುತ್ತೇವೆ. ಆದರೆ, ಇನ್ನು ಮುಂದೆ ಶೇ.50ರಷ್ಟು ಆಸನಗಳು ಮೀಸಲು ಎಂಬ ಫಲವನ್ನು ಕೆಎಸ್'ಆರ್'ಟಿಸಿ ಬಸ್ ಗಳಲ್ಲಿ ನೋಡಲಿದ್ದೇವೆ.
ಹೌದು ದೇಶದಲ್ಲಿಯೇ ಇದೇ ಮೊದಲ ಬರಿಗೆ ಕರ್ನಾಟಕದಲ್ಲಿ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪುರುಷರಿಗೆ ಆಸನ ಮೀಸಲಿಡುವ ವ್ಯವಸ್ಥೆ ಜಾರಿಯಾಗುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಮಹಿಳೆಯರಿಗೆ ಉಚಿತ ಬಸ್ಸೌಲಭ್ಯ ನೀಡುವ ಶಕ್ತಿ ಯೋಜನೆ ಜಾರಿಯಾಗಿದೆ. ಜೂನ್ 11 ರಿಂದ ಅನುಷ್ಠಾನವಾಗುತ್ತಿದೆ. ಈ ಮೂಲಕ ಮಹಿಳೆಯರಿಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ ಇರಲಿದೆ. ಉಚಿತ ಬಸ್ಪ್ರಯಾಣ ಸೌಲಭ್ಯ ಲಭ್ಯವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಸ್ಪ್ರಯಾಣಕ್ಕೆ ಮುಂದಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಟಿಕೆಟ್ಪಡೆದು ಪ್ರಯಾಣ ಮಾಡುವ ಪುರುಷರಿಗೆ ಆಸನ ಕೊರತೆಯಾಗಬಹುದು.
ಇದರಿಂದ ಸಾರಿಗೆ ಸಂಸ್ಥೆಗಳ ಆದಾಯಕ್ಕೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಪುರುಷರಿಗೆ ಬಸ್ಗಳಲ್ಲಿ ಆಸನಗಳನ್ನು ಮೀಸಲಿಡಲು ಸರ್ಕಾರ ನಿರ್ಧರಿಸಿದೆ. ಆದರೆ, ಬಿಎಂಟಿಸಿಯಲ್ಲಿ ಪುರುಷ ಸೀಟುಗಳಿಗೆ ಮೀಸಲಾತಿಗಳನ್ನು ನೀಡಲಾಗಿಲ್ಲ.
ಈವರೆಗೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಶೇ.28ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಬಸ್ಸುಗಳಲ್ಲಿನ 49 ಆಸನಗಳ ಪೈಕಿ 14 ಆಸನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಅಂಗವಿಕಲರಿಗೆ ಮೂರು, ಹಿರಿಯ ನಾಗರಿಕರಿಗೆ 3, ಸ್ವಾತಂತ್ರ್ಯ ಹೋರಾಟಗಾರರಿಗೆ 1 ಆಸನ ಮೀಸಲಿಡಲಾಗಿದೆ.
ಪುರುಷರಿಗೆ ಮೀಸಲಿರುವ ಆಸನದಲ್ಲಿ ಮಹಿಳೆಯರು ಕುಳಿತುಕೊಳ್ಳಬಹುದು. ಆದರೆ, ಪುರುಷರು ಕುಳಿತುಕೊಳ್ಳಲು ಬಯಸಿದ್ದೇ ಆದರೆ, ಸೀಟು ಬಿಟ್ಟುಕೊಡಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶಕ್ತಿಯೋಜನೆಯಿಂದಾಗಿ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಟಿಕೆಟ್ ಖರೀದಿ ಮಾಡಿ ಪ್ರಯಾಣಿಸುವ ಪುರುಷರಿಗೆ ಶೇ.50ರಷ್ಟು ಸೀಟುಗಳನ್ನು ಹೆಚ್ಚಿಸಬೇಕಿದೆ. ಒಂದು ವೇಳೆ ಮಹಿಳೆಯರಿಗೆ ಮೀಸಲಿಟ್ಟಿರುವ ಎಲ್ಲಾ ಸೀಟುಗಳು ಭರ್ತಿಯಾಗಿದ್ದರೆ, ಪುರುಷರ ಸೀಟುಗಳು ಖಾಲಿಯಿದ್ದರೆ ಕುಳಿತುಕೊಳ್ಳಬಹುದು. ಆದರೆ, ಪುರುಷರು ಕುಳಿತುಕೊಳ್ಳಲು ಬಯಸಿದೆ ಆಸನವನ್ನು ಬಿಟ್ಟುಕೊಡಬೇಕಾಗುತ್ತದೆ. ನಿಯಮ ಜಾರಿಗೂ ಮೊದಲು ಸೀಟುಗಳ ಮೇಲೆ ಸ್ಟಿಕ್ಕರ್ ಗಳನ್ನು ಲಗತ್ತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ ಬಿಎಂಟಿಸಿ ಬಸ್ಗಳ ಸೀಟು ಕಾಯ್ದಿರಿಸುವಿಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಶಕ್ತಿ ಯೋಜನೆ ಬಗ್ಗೆ ಮಹಿಳೆಯರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯಿಂದ ರಾಜ್ಯದ ಮೇಲೆ ಭಾರಿ ಆರ್ಥಿಕ ಹೊರೆಯಾಗಲಿದೆ. ಯೋಜನೆ ಪ್ರಮುಖ ಸುಧಾರಣೆಗಳಾಗುವುದಿಲ್ಲ ಎಂದು ರಂಜಿತಾ ಸಿಂಗ್ ಎಂಬುವವರು ಹೇಳಿದ್ದಾರೆ.
ಹಿಲ್ಡಾ ರೋಪಾಸ್ ಎಂಬುವವರು ಮಾತನಾಡಿ, ಉಚಿತ ಯೋಜನೆಯು ರಾಜ್ಯದ ಅಭಿವೃದ್ಧಿಗೆ ಗಣನೀಯವಾಗಿ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಉಚಿತ ಪ್ರಯಾಣ ಯೋಜನೆ ಅನುಷ್ಠಾನಗೊಳಿಸುವುದು ಸವಾಲಾಗಿ ಪರಿಣಮಿಸಲಿದೆ. ಟಿಕೆಟ್ ಖರೀದಿಸಲು ಶಕ್ತರಾಗಿರುವ ಉದ್ಯೋಗಿ ಮಹಿಳೆಯರಿಗೆ ಹೋಲಿಸಿದರೆ, ಕೆಲಸ ಮಾಡದ ಮಹಿಳೆಯರಿಗೆ ಹೆಚ್ಚು ಸಹಾಯಕವಾಗಲಿದೆ ಎಂಬುದು ನನ್ನ ಅಭಿಪ್ರಾಯ ಎಂದು ಶಕುಂತಲಾ ದೇಬ್ ಎಂಬುವವರು ತಿಳಿಸಿದ್ದಾರೆ.
Advertisement