ಕೆಟ್ಟ ವಿನ್ಯಾಸ, ಮೃತದೇಹ ಪತ್ತೆ, ಪದೇ ಪದೇ ದುರ್ಘಟನೆ: ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ದುರಾದೃಷ್ಟವೇ?

ಹವಾ ನಿಯಂತ್ರಣ ಒಳಾಂಗಣದೊಂದಿಗೆ ಮಾದರಿ ರೈಲ್ವೆ ನಿಲ್ದಾಣ ಎಂದು ಹೇಳಲಾಗುತ್ತಿದ್ದ ಬೈಯಪ್ಪನ ಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ನಿರ್ಮಾಣಕ್ಕೂ ಮುನ್ನಾ ಹಾಗೂ ನಂತರವೂ ಪದೇ ಪದೇ ತೊಂದರೆಗಳು ಆಗುತ್ತಲೇ ಇವೆ.
ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್
ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್
Updated on

ಬೆಂಗಳೂರು: ಹವಾ ನಿಯಂತ್ರಣ ಒಳಾಂಗಣದೊಂದಿಗೆ ಮಾದರಿ ರೈಲ್ವೆ ನಿಲ್ದಾಣ ಎಂದು ಹೇಳಲಾಗುತ್ತಿದ್ದ ಬೈಯಪ್ಪನ ಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ನಿರ್ಮಾಣಕ್ಕೂ ಮುನ್ನಾ ಹಾಗೂ ನಂತರವೂ ಪದೇ ಪದೇ ತೊಂದರೆಗಳು ಆಗುತ್ತಲೇ ಇವೆ. ಜೂನ್ 2 ರಂದು ಒಡಿಶಾದ ಬಾಲಾಸೋರ್ ಬಳಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಸಿಲುಕಿದ್ದ ಸುಮಾರು 1,300 ಪ್ರಯಾಣಿಕರು ಇದೇ ನಿಲ್ದಾಣದಿಂದ ಹೌರಾ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ಹೌರಾಕ್ಕೆ ತೆರಳುತ್ತಿದ್ದರು. 

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ಈ ನಿಲ್ದಾಣವು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ರೂಮ್ ನಂತಹ ರಚನೆಯನ್ನು ಹೊಂದಿದೆ. ಅಂತಿಮ ಗಡುವು ನೀಡಿದ ಮೂರು ವರ್ಷಗಳ ನಂತರ 314 ಕೋಟಿ ರೂ.ವೆಚ್ಚದ ನಿಲ್ದಾಣವನ್ನು ಕಳೆದ ವರ್ಷ ಜೂನ್ 6 ರಂದು ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ತೆರೆಯಲಾಯಿತು. ಆದಾಗ್ಯೂ, ನೈಋತ್ಯ ರೈಲ್ವೇ ವಲಯದಲ್ಲಿ ಬೇರೆ ಯಾವುದೇ ನಿಲ್ದಾಣ ಇಷ್ಟೊಂದು ಸಮಸ್ಯೆಗಳಿಂದ ಕೂಡಿರುವಂತೆ ತೋರುತ್ತಿಲ್ಲ, ಈ ನಿಲ್ದಾಣದ ಅದೃಷ್ಟವೇ ಸರಿಯಿಲ್ಲವೇ ಎಂಬ ಚಿಂತೆ ಕಾಡುತ್ತಿದೆ.

ಭೀಕರ ಅಪಘಾತದ ಮೂರು ದಿನಗಳ ಮೊದಲು, ಭಾರೀ ಗಾಳಿ ಮತ್ತು ಮಳೆಗೆ ಮೇಲ್ಛಾವಣಿ ಕುಸಿದು  ಪ್ರಯಾಣಿಕರು ತಮ್ಮ ಪ್ರಾಣಕ್ಕಾಗಿ ಓಡಬೇಕಾಯಿತು. ಹೆಚ್ಚಿನ ಪ್ರಮಾಣದಲ್ಲಿ ದುರಸ್ಥಿ ಕಾರ್ಯ ಆಗಬೇಕಾಗಿದೆ. ಏಳು ತಿಂಗಳ ಹಿಂದೆ ಇದೇ ಮೇಲ್ಫಾವಣಿ ಕುಸಿದಿತ್ತು. ಆದರೆ ಸಣ್ಣ ಪುಟ್ಟ ಗಾಯಗಳಾಗಿತ್ತು. 

ಈ ವರ್ಷದ ಮಾರ್ಚ್ 18 ರಂದು, ಮೃತಪಟ್ಟ ಮಹಿಳೆಯೊಬ್ಬರ ದೇಹವು  ಟರ್ಮಿನಲ್ ಪ್ರವೇಶದ್ವಾರದಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಡಿಸೆಂಬರ್ 8, 2022 ರಂದು, ಬಂಗಾರಪೇಟೆ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ವಿಶೇಷ ಮೆಮು ರೈಲಿನಲ್ಲಿ ಗೋಣಿ ಚೀಲದಲ್ಲಿ ಮಹಿಳೆಯೊಬ್ಬರ ಮೃತದೇಹ ನಿಲ್ದಾಣ ತಲುಪಿತ್ತು. 

ಈ ನಿಲ್ದಾಣ ಉದ್ಘಾಟಿಸಿದ ಒಂದು ವರ್ಷದ ನಂತರ ಕಾಮಗಾರಿ ಪೂರ್ಣಗೊಂಡಿದೆ. ಇದು ಮಾದರಿ ನಿಲ್ದಾಣವಾಗಬೇಕು ಎಂಬ ಕಾರಣಕ್ಕೆ ನಿರ್ಮಾಣ ಹಂತದಲ್ಲಿಯೇ ಭಾರಿ ಪ್ರಚಾರ ಪಡೆಯಲಾಗಿತ್ತು. ಅಂತಿಮವಾಗಿ ಕಳೆದ ವರ್ಷ ಜೂನ್‌ನಲ್ಲಿ ಕೆಲವು ರೈಲುಗಳ ಸಂಚಾರವನ್ನು ಪ್ರಾರಂಭಿಸಲಾಗಿತ್ತು.

ಜೂನ್ 2019 ರ ಗಡುವು ಮುಗಿದ ಒಂದು ತಿಂಗಳ ನಂತರ  ಪ್ಲಾಟ್‌ಫಾರ್ಮ್ ರೈಲಿನ ಉದ್ದಕ್ಕಿಂತ 70 ಮೀಟರ್‌ಗಳಷ್ಟು ಕಡಿಮೆಯಾಗುವುದರೊಂದಿಗೆ ವಿನ್ಯಾಸದಲ್ಲಿ ಕೆಲವೊಂದು ಮೂಲಭೂತ ನ್ಯೂನತೆಗಳನ್ನು ಕಂಡುಹಿಡಿಯಲಾಯಿತು. ಎರಡು ಹಂತಗಳಲ್ಲಿ ನಿಲ್ದಾಣ ತೆರೆಯುವ ಕ್ರಮವನ್ನು ಸ್ಥಗಿತಗೊಳಿಸಲಾಯಿತು. ಅವ್ಯವಹಾರಕ್ಕೆ ಕಾರಣರಾದ ಉನ್ನತ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಭಾರೀ ಮಳೆಯ ಪರಿಣಾಮವಾಗಿ ಸ್ಟೇಷನ್ ಮಾಸ್ಟರ್‌ಗಳ ನಿಯಂತ್ರಣ ಕೊಠಡಿಗೆ ನೀರು ನುಗ್ಗಿ ದುಬಾರಿ ಮತ್ತು ನಿರ್ಣಾಯಕ ಉಪಕರಣಗಳಿಗೆ ಹಾನಿಯಾಗುವ ಭಯ ಹೆಚ್ಚಿಸಿತು. ನೈರುತ್ಯ ರೈಲ್ವೆ ಆರಂಭದಲ್ಲಿ ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿತು ಮತ್ತು ನೀರು ಸೋರಿಕೆ ಆಗಿಲ್ಲ ಎಂದು ಹೇಳಿಕೊಂಡಿತು, ಆದರೆ ವೀಡಿಯೊಗಳು ಬೇರೆ ರೀತಿಯಲ್ಲಿ ತೋರಿಸಿದವು. ನೀರು ಬರುವ ಕಡೆ ಗಾಜಿನ ಬಾಗಿಲು ಸರಿಪಡಿಸುವುದರೊಂದಿಗೆ ಇದು ಅಂತ್ಯಗೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com