ಬಂಡೀಪುರ ಅರಣ್ಯಾಧಿಕಾರಿಗಳಿಂದ ಪುಂಡಾನೆ ಸೆರೆ: ರೈತರು ನಿಟ್ಟುಸಿರು

ಕುಂದುಕೆರೆ ಮತ್ತು ಗೋಪಾಲಸ್ವಾಮಿ ಬೆಟ್ಟ ಅರಣ್ಯದಂಚಿನ ಗ್ರಾಮಗಳಲ್ಲಿ ಹಲವಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ನಾಶಪಡಿಸಿ, ಗ್ರಾಮಸ್ಥರ ತುಳಿದು ಕೊಂದು ಹಾಕಿದ್ದ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಕೊನೆಗೂ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಸೆರೆಸಿಕ್ಕ ಪುಂಡಾನೆ.
ಸೆರೆಸಿಕ್ಕ ಪುಂಡಾನೆ.

ಮೈಸೂರು: ಕುಂದುಕೆರೆ ಮತ್ತು ಗೋಪಾಲಸ್ವಾಮಿ ಬೆಟ್ಟ ಅರಣ್ಯದಂಚಿನ ಗ್ರಾಮಗಳಲ್ಲಿ ಹಲವಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ನಾಶಪಡಿಸಿ, ಗ್ರಾಮಸ್ಥರ ತುಳಿದು ಕೊಂದು ಹಾಕಿದ್ದ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಕೊನೆಗೂ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಕುಂದುಕೆರೆ, ಜಿ.ಎಸ್.ಬೆಟ್ಟ ವ್ಯಾಪ್ತಿಯ ಕೆಬ್ಬೆಪುರ, ಹುಂಡೀಪುರ, ಚೌಡಹಳ್ಳಿ, ಜಕ್ಕಹಳ್ಳಿ, ಮಂಗಲ, ಎಲೆಚೆಟ್ಟಿ, ಚಿಕ್ಕಯೆಲೆಚೆಟ್ಟಿ ಗ್ರಾಮಗಳಲ್ಲಿ ಕಳೆದೊಂದು ವರ್ಷದಿಂದ ಆನೆಗಳು ದಾಳಿ ನಡೆಸುತ್ತಿದ್ದು, ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿತ್ತು. ಅಲ್ಲದೆ, ಸಾರ್ವಜನಿಕರ ಮೇಲೂ ದಾಳಿಗೆ ಮುಂದಾಗುತ್ತಿದ್ದ. ಬೆಳೆಗಳ ನಾಶದಿಂದಾಗಿ ರೈತರು ಅಪಾರ ನಷ್ಟವನ್ನು ಎದುರಿಸುತ್ತಿದ್ದರು.

ಪುಂಡಾನೆಯನ್ನು ಸೆರೆ ಹಿಡಿಯರು ಅರಣ್ಯಾಧಿಕಾರಿಗಳು ಕಳೆದ 5 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಇದರಂತೆ ನಿನ್ನೆ ಆನೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸೆರೆ ಸಿಕ್ಕಿರುವ ಪುಂಡಾನೆ ಜೂನ್ 15, 2022 ರಂದು ಶಿವಪುರ ಗ್ರಾಮದಲ್ಲಿ ಗ್ರಾಮಸ್ಥರೊಬ್ಬರನ್ನು ತುಳಿದು ಕೊಂದಿತ್ತು, ಜೊತೆಗೆ ಹಲವಾರು ತೋಟದ ಮನೆಗಳಿಗೆ ನುಗ್ಗಿ ಆಸ್ತಿಗಳಿಗೆ ಹಾನಿ ಮಾಡಿತ್ತು. ಅಲ್ಲದೆ, ಭತ್ತದ ಗದ್ದೆಗಳ ಮೇಲೂ ದಾಳಿ ಮಾಡುತ್ತಿತ್ತು.

ಆನೆಗಳ ನಿರಂತರ ದಾಳಿಯಿಂದ ಕಂಗಾಲಾದ ಗ್ರಾಮಸ್ಥರು 2023ರ ಮೇ 15ರಿಂದ ಹುಂಡಿಪುರ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ವೇಳೆ ಗ್ರಾಮಸ್ಥರು ಆನೆಯನ್ನು ಆದಷ್ಟು ಬೇಗ ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com