ಉಚಿತವಾಗಿ ಬಸ್ ಪ್ರಯಾಣ ಮಾಡಲು ನಮಗೂ 'ಶಕ್ತಿ ಯೋಜನೆ' ನೀಡಿ; ಕಾಸರಗೋಡಿನ ಕನ್ನಡತಿಯರು

ಗಡಿನಾಡ ಕನ್ನಡಿಗರು (ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಹೊರಗೆ ವಾಸಿಸುವ ಕನ್ನಡಿಗರು) ‘ಶಕ್ತಿ’ ಉಚಿತ ಬಸ್ ಪ್ರಯಾಣ ಯೋಜನೆಯ ಲಾಭವನ್ನು ಕೇರಳದ ಗಡಿ ಜಿಲ್ಲೆ ಕಾಸರಗೋಡಿನ ಕನ್ನಡಿಗ ಮಹಿಳೆಯರಿಗೆ ವಿಸ್ತರಿಸಬೇಕೆಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಗಡಿನಾಡ ಕನ್ನಡಿಗರು (ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಹೊರಗೆ ವಾಸಿಸುವ ಕನ್ನಡಿಗರು) ‘ಶಕ್ತಿ’ ಉಚಿತ ಬಸ್ ಪ್ರಯಾಣ ಯೋಜನೆಯ ಲಾಭವನ್ನು ಕೇರಳದ ಗಡಿ ಜಿಲ್ಲೆ ಕಾಸರಗೋಡಿನ ಕನ್ನಡಿಗ ಮಹಿಳೆಯರಿಗೆ ವಿಸ್ತರಿಸಬೇಕೆಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯು ಬಲವಾದ ಸಾಮಾಜಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಹೊಂದಿದೆ. ಕಾಸರಗೋಡಿನಿಂದ ಪ್ರತಿದಿನ ಸಾವಿರಾರು ಜನರು ಶಿಕ್ಷಣ, ಆರೋಗ್ಯ ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ಮಂಗಳೂರು ಮತ್ತು ದಕ್ಷಿಣ ಕನ್ನಡದ ಇತರ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಗಡಿ ಜಿಲ್ಲೆಗಳ ಮೂಲಕ ಸಂಚರಿಸುವ ಕೆಲವು ಪ್ಯಾಸೆಂಜರ್ ರೈಲುಗಳಿದ್ದರೂ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಈ ಸಮಯವು ಅನುಕೂಲಕರವಾಗಿಲ್ಲ. ಇದರಿಂದಾಗಿ ಅವರು ದಿನಕ್ಕೆ ಸುಮಾರು 100 ರೂ. ವೆಚ್ಚದ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ.

ಉಚಿತ ಬಸ್ ಸೌಲಭ್ಯವು ತನಗೆ ಮತ್ತು ತನ್ನ ಹೆತ್ತವರಿಗೆ ದೊಡ್ಡ ಅನುಕೂಲವಾಗಿದೆ. ರೈಲು ಸೇವೆಗಳು ಅಗ್ಗದ ಸಾರಿಗೆಯನ್ನು ಒದಗಿಸುತ್ತಿದ್ದರೂ, ನಮ್ಮ ಸಮಯಕ್ಕೆ ಹೊಂದಿಕೆಯಾಗದ ಕಾರಣ ಕಾಲೇಜಿನಿಂದ ಹಿಂದಿರುಗುವಾಗ ಮಾತ್ರ ಬಳಸಲು ಸಾಧ್ಯವಾಗುತ್ತದೆ ಎಂದು ಸೂರಂಬೈಲ್‌ನಿಂದ ಮಂಗಳೂರಿಗೆ (ಒಂದು ಮಾರ್ಗ 50 ಕಿಲೋಮೀಟರ್) ನಡುವೆ ಸಂಚರಿಸುವ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಪ್ರತೀಕ್ಷಾ ಎನ್ ಹೇಳುತ್ತಾರೆ. 

ವಿಶ್ವವಿದ್ಯಾಲಯದ ಕಾಲೇಜಿನಲ್ಲಿರುವ ಒಟ್ಟು 1,800 ವಿದ್ಯಾರ್ಥಿಗಳ ಪೈಕಿ ಸುಮಾರು ಶೇ 25 ರಷ್ಟು ವಿದ್ಯಾರ್ಥಿಗಳು ಕಾಸರಗೋಡಿನವರು. ಕಾರ್ ಸ್ಟ್ರೀಟ್‌ನಲ್ಲಿರುವ ಸರ್ಕಾರಿ ಕಾಲೇಜು, ಮಿಲಾಗ್ರಿಸ್ ಕಾಲೇಜು ಮತ್ತು ಪುತ್ತೂರು ಮತ್ತು ಸುಳ್ಯದ ಹಲವು ಕಾಲೇಜುಗಳಲ್ಲಿ ಕಾಸರಗೋಡಿನ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿದ್ದಾರೆ.

ಉಪ್ಪಳ-ಮಂಗಳೂರು ನಡುವೆ ಸಂಚರಿಸುವ ಮತ್ತೊಬ್ಬ ವಿದ್ಯಾರ್ಥಿನಿ ಶಿವಾನಿ ಶೆಟ್ಟಿ ಮಾತನಾಡಿ, ಕಾಸರಗೋಡಿನಲ್ಲಿ ಕಾಲೇಜುಗಳ ಕೊರತೆಯಿಂದಾಗಿ ಉನ್ನತ ವ್ಯಾಸಂಗಕ್ಕಾಗಿ ಮಂಗಳೂರನ್ನೇ ಅವಲಂಬಿಸುವಂತಾಗಿದೆ. ‘ಶಕ್ತಿ’ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದು ಶ್ಲಾಘಿಸಿದ ಅವರು, ಗಡಿನಾಡ ಕನ್ನಡಿಗರಿಗೂ ಈ ಯೋಜನೆಯನ್ನು ವಿಸ್ತರಿಸಬೇಕು ಎಂದರು.

ಶಕ್ತಿ ಯೋಜನೆಯನ್ನು ಕಾಸರಗೋಡಿನ ಮಹಿಳೆಯರಿಗೆ ವಿಸ್ತರಿಸಲು ಶೀಘ್ರದಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲು ಯೋಜಿಸುತ್ತಿದ್ದೇವೆ ಎಂದು ಕನ್ನಡ ಹೋರಾಟ ಸಮಿತಿ ಕಾಸರಗೋಡಿನ ನಿವೃತ್ತ ಕನ್ನಡ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ಹೇಳಿದರು. ಕಾಸರಗೋಡು ಕೇರಳದ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಂಶವನ್ನು ಗಮನಿಸಿದರೆ ನಮ್ಮ ಬೇಡಿಕೆಯು ಸಮರ್ಥನೀಯವಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com