ಶಕ್ತಿ ಯೋಜನೆ ಚಾಲನೆ ವೇಳೆ ಬಸ್ ಮೇಲೆ ಬಿಜೆಪಿ ಸ್ಟಿಕ್ಕರ್: ಅಧಿಕಾರಿಗಳ ಯಡವಟ್ಟು
ಬಳ್ಳಾರಿ: ಶಕ್ತಿ ಯೋಜನೆಗೆ ಚಾಲನೆ ನೀಡುವ ವೇಳೆ ಬಸ್ ಮೇಲೆ ಇದ್ದ ಬಿಜೆಪಿ ಸ್ಟಿಕ್ಕರ್ ನೋಡಿ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಗರಂ ಆದ ಬೆಳವಣಿಗೆ ಭಾನುವಾರ ಕಂಡು ಬಂದಿತು.
ಶಕ್ತಿ ಯೋಜನೆಗೆ ಚಾಲನೆ ನೀಡಲು ಆರು ಹೊಸ ಬಸ್ ತರಲಾಗಿತ್ತು. ಈ ವೇಳೆ ಒಂದು ಬಸ್ ಮೇಲೆ ಬಿಜೆಪಿ ಸ್ಟಿಕ್ಕರ್ ಕಂಡು ಬಂದಿತ್ತು. ಸ್ಟಿಕರ್ ಕಂಡ ಸಚಿವ ನಾಗೇಂದ್ರ ಅವರು, ಯೋಜನೆಗೆ ಚಾಲನೆ ನೀಡಲು ನಿರಾಕರಿಸಿದರು. ಈ ವೇಳ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಕಾರ್ಯಕ್ರಮವನ್ನು ಸುಗಮವಾಗಿ ನಡೆಯುವಂತೆ ಮಾಡಲು ಬಿಜೆಪಿ ಸ್ಟಿಕರ್'ನ್ನು ತೆಗೆದು ಹಾಕಿದರು. ನಂತರ ನಾಗೇಂದ್ರ ಅವರು ಬಸ್'ಗೆ ಚಾಲನೆ ನೀಡಿದರು.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ರ್ಯಾಲಿಗಳಿಗೆ ಬಸ್ ಗಳನ್ನು ಬಳಕೆ ಮಾಡಲಾಗಿತ್ತು. ರ್ಯಾಲಿ ವೇಳೆ ಬಿಜೆಪಿ ಪೋಸ್ಟರ್ ಗಳನ್ನು ಬಸ್ ಗಳ ಮೇಲೆ ಅಂಟಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟಿಕರ್ ಗಾತ್ರದಲ್ಲಿ ಚಿಕ್ಕದಾಗಿತ್ತು. ಹೀಗಾಗಿ ಅದನ್ನು ಯಾರೂ ಗಮನಿಸಿಲ್ಲ. ಸಚಿವರ ಗಮನಕ್ಕೆ ಬಂದ ಕೂಡಲೇ ಅದನ್ನು ತೆಗೆಯಲಾಯಿತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ