ಬೆಂಗಳೂರಿನಲ್ಲಿ ನಮ್ಮ ಮೆಟ್ರೋಗಾಗಿ ಎರಡು ವರ್ಷಗಳಲ್ಲಿ ಕಡಿದ ಮರಗಳೆಷ್ಟು ಗೊತ್ತಾ? ಇಲ್ಲಿದೆ ಬೆಚ್ಚಿಬೀಳಿಸುವ ವರದಿ..

2021 ರಿಂದ 2023ರ ನಡುವೆ ನಮ್ಮ ಮೆಟ್ರೋ ಯೋಜನೆಗಳಿಗಾಗಿ ಸಾವಿರಾರು ಮರಗಳನ್ನು ಕತ್ತರಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವರದಿಯೊಂದು ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: 2021 ರಿಂದ 2023ರ ನಡುವೆ ನಮ್ಮ ಮೆಟ್ರೋ ಯೋಜನೆಗಳಿಗಾಗಿ ಸಾವಿರಾರು ಮರಗಳನ್ನು ಕತ್ತರಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವರದಿಯೊಂದು ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದೆ.

ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳ ಪ್ರಕಾರ, ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಹಂತ-2, ಹಂತ-2ಎ ಮತ್ತು ಹಂತ-2ಬಿ ಯೋಜನೆಗಳಿಗಾಗಿ 3,626 ಮರಗಳನ್ನು ಕಡಿಯಲಾಗಿದೆ. 

ಬಿಬಿಎಂಪಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಬಿಎಂಆರ್‌ಸಿಎಲ್‌ನಿಂದ ಬೇಡಿಕೆ ಬಂದಿದ್ದು, ಟ್ರೀ ಕಮಿಟಿಯ ಮುಂದೆ ವಿನಂತಿಯನ್ನು ಇರಿಸಿದ ನಂತರ ಕೆಲವು ಮರಗಳನ್ನು ಸವರುವ ಮತ್ತು ಸ್ಥಳಾಂತರ ಪ್ರಕ್ರಿಯೆಯ ವರ್ಗಕ್ಕೆ ತರಲಾಗಿದೆ ಎಂದರು.

2021 ರಿಂದ 2022 ರವರೆಗೆ, 72 ಮರಗಳನ್ನು ಉಳಿಸಿಕೊಳ್ಳಲಾಗಿದೆ ಮತ್ತು 856 ಮರಗಳನ್ನು ನಗರದ ವಿವಿಧ ಭಾಗಗಳಿಗೆ ಮತ್ತು ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ. BMRCL ನ ಹಂತ-2 ಮತ್ತು ಹಂತ 2A ಯೋಜನೆಗಳಿಗಾಗಿ 2,461 ಮರಗಳನ್ನು ಕಡಿಯಲಾಗಿದೆ. ಅದೇ ರೀತಿ, 2022 ರಿಂದ ಜನವರಿ 2023 ರವರೆಗೆ ಹಂತ 2A ಮತ್ತು 2B ಗಾಗಿ 36 ಮರಗಳನ್ನು ಉಳಿಸಿಕೊಳ್ಳಲಾಗಿದೆ ಮತ್ತು 107 ಮರಗಳನ್ನು ಸ್ಥಳಾಂತರಿಸಲಾಗಿದೆ. ಇದೇ ವೇಳೆ 1,165 ಅನ್ನು ಕಡಿಯಲಾಗಿದೆ ಎಂದು ಬಿಬಿಎಂಪಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದುವರೆಗೆ 1,193 ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಸಾಮಾಜಿಕ ಮತ್ತು ಪರಿಸರ ಘಟಕದ ಪ್ರಧಾನ ವ್ಯವಸ್ಥಾಪಕಿ ದಿವ್ಯಾ ಹೊಸೂರ್ ಹೇಳಿದ್ದಾರೆ. 'ನಾವು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ನೀಡಿದ ಸ್ಥಳಾಂತರ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ. ಸ್ಥಳಾಂತರದಲ್ಲಿ ತರಬೇತಿ ಪಡೆದ ಜನರಿಗೆ ಕಾರ್ಯವನ್ನು ನೀಡಲಾಗುತ್ತದೆ ಮತ್ತು ಮರಗಳನ್ನು 5 ಕಿಮೀ ವ್ಯಾಪ್ತಿಯೊಳಗೆ ಮಾತ್ರ ಸ್ಥಳಾಂತರಿಸಲಾಗುತ್ತದೆ. ನಾವು ಬಾಗಮನೆ ಟೆಕ್ ಪಾರ್ಕ್, ಕಾಡುಗೋಡಿ ಮತ್ತು ಇತರ ಸ್ಥಳಗಳಿಗೆ ಮರಗಳನ್ನು ಸ್ಥಳಾಂತರಿಸಿದ್ದೇವೆ' ಎಂದು ಅವರು ಹೇಳಿದರು.

ಎಲ್ಲಾ ನಿಯಮಗಳನ್ನು ಶ್ರದ್ಧೆಯಿಂದ ಅನುಸರಿಸಿ ಕೆಲಸ ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತಿದ್ದರೆ, ಮರ ಕಡಿಯಲು ಅನುಮತಿ ನೀಡಿದ ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಎಂಜಿನಿಯರ್‌ಗಳ ವಿನ್ಯಾಸಕ್ಕಾಗಿ ಪರಿಸರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಜಿನಿಯರ್‌ಗಳು ಉದ್ದೇಶಪೂರ್ವಕವಾಗಿ ಮೆಟ್ರೋ ಮಾರ್ಗಗಳಲ್ಲಿ ಹೆಚ್ಚಿನ ಜಾಗವನ್ನು ಗುರುತಿಸಿದ್ದಾರೆ. ಅವುಗಳಿಂದಾಗಿ, 200 ವರ್ಷಕ್ಕಿಂತ ಮೇಲ್ಪಟ್ಟ ಅನೇಕ ಮರಗಳನ್ನು ಕಡಿಯಲಾಯಿತು. ಎಂಜಿನಿಯರ್‌ಗಳು ಸರಿಯಾದ ಗುರುತು ಮತ್ತು ವಿನ್ಯಾಸಗಳನ್ನು ಮಾಡಿದ್ದರೆ, ನಾವು ಇನ್ನೂ ಶೇ 30ರಷ್ಟು ಮರಗಳನ್ನು ಕಡಿಯದಂತೆ ಉಳಿಸಬಹುದಿತ್ತು ಎಂದು ಪರಿಸರವಾದಿ ಡಾ ಯಲ್ಲಪ್ಪ ರೆಡ್ಡಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com