ಕಲಬುರಗಿ ಡೆಮೋ ರೈಲು ಹಳಿ ಮೇಲೆ ಬಿತ್ತು ಭಾರೀ ಗಾತ್ರದ ಬಂಡೆ: ಚಾಲಕನ ಸಮಯ ಪ್ರಜ್ಞಯಿಂದ ತಪ್ಪಿದ ಅನಾಹುತ!

ಮರಗುತ್ತಿ ಸುರಂಗ ಮಾರ್ಗದಲ್ಲಿ ಬಂಡೆಗಲ್ಲೊಂದು ಕಳಚಿ ಹಳಿ ಮೇಲೆಯೇ ಬಿದ್ದಾಗ, ಬಂಡೆ ಬಿದ್ದ ಸದ್ದಿನಿಂದ ಜಾಗೃತಗೊಂಡ ಚಾಲಕ ತಕ್ಷಣ ರೈಲಿನ ವೇಗ ತಗ್ಗಿಸುವ ಮೂಲಕ ಕಲಬುರಗಿ- ಬೀದರ್‌ ರೈಲು ಮಾರ್ಗದಲ್ಲಿನ ಸುರಂಗದಲ್ಲಿ ನಡೆಯಬಹುದಾಗಿದ್ದ ರೈಲು ಅವಘಡ ತಪ್ಪಿದಂತಾಗಿದೆ.
ರೈಲು ಹಳಿ ಮೇಲೆ ಬಿದ್ದ ಭಾರೀ ಗಾತ್ರದ ಬಂಡೆ
ರೈಲು ಹಳಿ ಮೇಲೆ ಬಿದ್ದ ಭಾರೀ ಗಾತ್ರದ ಬಂಡೆ

ಕಲಬುರಗಿ: ಮರಗುತ್ತಿ ಸುರಂಗ ಮಾರ್ಗದಲ್ಲಿ ಬಂಡೆಗಲ್ಲೊಂದು ಕಳಚಿ ಹಳಿ ಮೇಲೆಯೇ ಬಿದ್ದಾಗ, ಬಂಡೆ ಬಿದ್ದ ಸದ್ದಿನಿಂದ ಜಾಗೃತಗೊಂಡ ಚಾಲಕ ತಕ್ಷಣ ರೈಲಿನ ವೇಗ ತಗ್ಗಿಸುವ ಮೂಲಕ ಕಲಬುರಗಿ- ಬೀದರ್‌ ರೈಲು ಮಾರ್ಗದಲ್ಲಿನ ಸುರಂಗದಲ್ಲಿ ನಡೆಯಬಹುದಾಗಿದ್ದ ರೈಲು ಅವಘಡ ತಪ್ಪಿದಂತಾಗಿದೆ.

ತಾಲ್ಲೂಕಿನ ಮರಗುತ್ತಿ ಬಳಿಯ ರೈಲು ಸುರಂಗ ಮಾರ್ಗದಲ್ಲಿನ ಹಳಿಯ ಮೇಲೆ ಬಂಡೆ ಬಿದ್ದಿರುವುದರಿಂದ ಸೋಮವಾರ ಎರಡು ಗಂಟೆ ಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಬೆಳಿಗ್ಗೆ 7.30ಕ್ಕೆ ಬೀದರ್ ನಿಂದ ತೆರಳಿದ ಬೀದರ್- ಕಲಬುರಗಿ ಡೆಮು ರೈಲು 9ಕ್ಕೆ ಮರಗುತ್ತಿ ಸುರಂಗ ಮಾರ್ಗ ತಲುಪಿತು. ಸುರಂಗ ಮಾರ್ಗದಲ್ಲಿ ಸಂಚರಿಸುವ ಮೇಲಿನಿಂದ ಬಂಡೆಯೊಂದು ಕಳಚಿ ಬಿದಿತ್ತು.

ಭಾರಿ ಗಾತ್ರದ ಕಲ್ಲು ಉರುಳಿ ಬಿದ್ದ ಪರಿಣಾಮವಾಗಿ ಆ ಕಲ್ಲು ನೇರವಾಗಿ ಓಡುವ ರೈಲಿಗೇ (ರೈಲಿನ ಫುಟ್‌ಬೋರ್ಡ್‌) ತಾಕಿದೆ. ಇದರಿದಾಗಿ ರೈಲನ್ನು ಚಾಲಕ ಕಲ್ಲು ಬಿದ್ದ ಸ್ಥಳದಲ್ಲೇ ಬ್ರೆಕ್‌ ಹಾಕಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ರೈಲಲ್ಲಿರುವ ಪ್ರಯಾಣಿಕರಿಗೆ ಯಾರಿಗೂ ಯಾವುದೇ ಅಪಾಯಗಳಗಿಲ್ಲ ಎಂದು ಸರ್ಕಲ್ ಇನ್ಸ್ ಪೆಕ್ಟರ್ ರವಿ ಕುಮಾರ್ ಹೇಳಿದ್ದಾರೆ.

ಭಾರಿ ಅನಾಹುತ ತಪ್ಪಿತು ಎಂದು ನಿಟ್ಟುಸಿರು ಬಿಡುತ್ತ ಪ್ರಯಾಣಿಕರಲ್ಲಿ ಶೇ.60ರಷ್ಟುಮಂದಿ ಸುರಂಗದಲ್ಲೇ ರೈಲಿನಿಂದ ಇಳಿದು 1 ಕಿಮೀ ನಡೆದುಕೊಂಡು ಬಂದು ಖಾಸಗಿ ವಾಹನಗಳ ಮೂಲಕ ಕಮಲಾಪುರ ಸೇರಿದರೆ, ಉಳಿದವರು ಬಂಡೆಗಲ್ಲು ಒಡೆದು ಮಾರ್ಗ ಸಂಚಾರಮುಕ್ತಗೊಳಿಸುವವರೆಗೂ ಸುರಂಗದಲ್ಲೇ ರೈಲಲ್ಲಿದ್ದು ನಂತರ ಪ್ರಯಾಣ ಬೆಳೆಸಿದ್ದಾರೆ.

ಸುರಂಗ ಮಾರ್ಗದ ಮಧ್ಯದಲ್ಲಿ ಜಾಲಿ ಅಳವಡಿಸಿ ಸಿಮೆಂಟ್ ಲೇಪನ ಮಾಡಲಾಗಿದೆ. ಇದು ಕಚ್ಚಾ ಕಾಮಗಾರಿಯಾಗಿದ್ದು ಕಲ್ಲು ಕಳಚಿ ಬಿದ್ದಿದೆ. ಪೂರ್ತಿ ಸುರಂಗ ಮಾರ್ಗ ಕಬ್ಬಿಣದ ರಾಡ್ ನಿಂದ ಆರ್ ಸಿ ಸಿ ಹಾಕಬೇಕಿತ್ತು. ಮಳೆಗಾಲದಲ್ಲಿ ಸುರಂಗ ಮಾರ್ಗ ಮುಗಿಯುತ್ತಿದ್ದಂತೆ ಹೊರಗಡೆ ಗುಡ್ಡದ ಮೇಲಿನ ಕಲ್ಲುಗಳು ಜಾರಿ ಹಳಿಯ ಮೇಲೆ ಬೀಳುವ ಸಂಭವವಿದೆ. ಹೀಗಾಗಿ ರೈಲ್ವೆ ಇಲಾಖೆಯವರು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಪ್ರಯಾಣಿಕರು ತಿಳಿಸಿದರು.

ಬೀದರ್‌ಗೆ ಪ್ರಯಾಣಿಕರನ್ನು ಕರೆದೊಯ್ಯಲು ಕಮಲಾಪುರದಲ್ಲಿ ಕೆಲವು ಬಸ್‌ಗಳ ವ್ಯವಸ್ಥೆ ಮಾಡುವಂತೆ ಆಯುಕ್ತರಿಗೆ ಮನವಿ ಮಾಡಿದರು. ಬೀದರ್‌ಗೆ ಪ್ರಯಾಣಿಕರನ್ನು ಕರೆತರಲು ಮೂರು ಬಸ್‌ಗಳನ್ನು ಕಮಲಾಪುರಕ್ಕೆ ಕಳುಹಿಸಲಾಗಿತ್ತು ಎಂದು ರವಿಕುಮಾರ್ ತಿಳಿಸಿದರು. ಅಧಿಕಾರಿಗಳಿಂದ ಅನುಮತಿ ದೊರೆತ ನಂತರ ಬೀದರ್ ಮತ್ತು ಕಲಬುರಗಿ ನಡುವೆ ರೈಲು ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ಸರ್ಕಲ್ ಇನ್ಸ್ ಪೆಕ್ಟರ್ ರವಿಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com