ಬೆಂಗಳೂರು: ಕರ್ತವ್ಯಕ್ಕೆ ತೆರಳುತ್ತಿದ್ದ ಸಹಾಯಕ ಲೋಕೋ ಪೈಲಟ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ತನ್ನ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದ ಸಹಾಯಕ ಲೋಕೋ ಪೈಲಟ್ ಒಬ್ಬರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತನ್ನ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದ ಸಹಾಯಕ ಲೋಕೋ ಪೈಲಟ್ ಒಬ್ಬರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬುಧವಾರ ರಾತ್ರಿ ಕೃಷ್ಣರಾಜಪುರಂ ರೈಲು ನಿಲ್ದಾಣದ ಬಳಿ ಮೂವರು ದುಷ್ಕರ್ಮಿಗಳು ಆತನ ಕೈ ಮೇಲೆ ಹಲ್ಲೇ ಮಾಡಿದ್ದಾರೆ. ಆತನಿಗೆ 12 ಹೊಲಿಗೆಗಳನ್ನು ಹಾಕಿ ಐಸಿಯುನಲ್ಲಿ ದಾಖಲಿಸಲಾಗಿತ್ತು. ಒಂದು ದಿನದ ನಂತರ, 28 ವರ್ಷದ ಪ್ರಮಿತ್ ಹಲ್ದಾರ್ ಈಗ ಅಪಾಯದಿಂದ ಪಾರಾಗಿದ್ದಾರೆ.

ಕೋಲ್ಕತ್ತಾ ಮೂಲದ ಹಲ್ದಾರ್ ಅವರು ಮೂರು ವರ್ಷಗಳ ಹಿಂದೆ ಬೆಂಗಳೂರು ರೈಲ್ವೆ ವಿಭಾಗಕ್ಕೆ ಸೇರಿದ್ದರು.  ಇಲ್ಲಿ ಗೂಡ್ಸ್ ರೈಲು ಎಎಲ್‌ಪಿ ಆಗಿ ನಿಯೋಜನೆಗೊಂಡಿದ್ದರು.

ರೈಲ್ವೆ ಮೂಲಗಳು ಘಟನೆಯನ್ನು ದೃಢಪಡಿಸಿವೆ. ಹಲ್ದಾರ್ ಅವರು ನಿಲ್ದಾಣದಿಂದ ಕೇವಲ 500 ಮೀಟರ್ ದೂರದಲ್ಲಿ ನೆಲೆಸಿದ್ದಾರೆ. ಬುಧವಾರ ರಾತ್ರಿ 10.30 ರ ಸುಮಾರಿಗೆ ಸ್ಟೇಷನ್ ರಸ್ತೆಯಲ್ಲಿ (ಕೆ ಆರ್ ಪುರಂ ರ್ಲೈ ನಿಲ್ದಾಣದ ಹಿಂದೆ) ನಡೆದುಕೊಂಡು ಹೋಗುತ್ತಿದ್ದರು.

ಕಂಠ ಪೂರ್ತಿ ಕುಡಿದಿದ್ದ ಮೂವರು ಆತನನ್ನು ನಿಲ್ಲಲು ಹೇಳಿದರು. ಹಲ್ದಾರ್ ಗಾಬರಿಗೊಂಡು ವೇಗವಾಗಿ ನಡೆದರು. ಈ ವೇಳೆ ಓಡಿ ಬಂದ ಅವರು ಆತನನ್ನು ಹಿಡಿದು ಹಲ್ಲೆ ನಡೆಸಿದರು. ಅವರಲ್ಲಿ ಒಬ್ಬರು ಚಾಕುವನ್ನು ತೆಗೆದುಕೊಂಡು ಅವರ ಮುಖ ಕತ್ತರಿಸಲು ಪ್ರಯತ್ನಿಸಿದ, ಹಲ್ದಾರ್ ತನ್ನನ್ನು ರಕ್ಷಿಸಿಕೊಳ್ಳಲು ಕೈಯ್ಯಿಂದ ತಳ್ಳಿದ್ದಾನೆ. ಇದರಿಂದ ಆಳವಾದ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಹಲ್ದಾರ್  ಆ ಕುಡುಕರಿಂದ ತಪ್ಪಿಸಿಕೊಳ್ಳಲು ಮನೆಗೆ ಓಡಿಹೋಗಿದ್ದಾರೆ. ಸಮೀಪದಲ್ಲೇ ಇದ್ದ ಅವರ ಸಹೋದ್ಯೋಗಿಗಳು ಅವರನ್ನು ರೈಲ್ವೇ ಆಸ್ಪತ್ರೆಗೆ ಕರೆದೊಯ್ದರು ಮತ್ತು  ಗಂಭೀರವಾಗಿ ಗಾಯಗೊಂಡಿದ್ದರಿಂದ ಮಲ್ಲೇಶ್ವರಂನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ  ಶಿಫ್ಟ್ ಮಾಡಲು ವೈದ್ಯರು ಸಲಹೆ ನೀಡಿದರು.

"ಕೆಆರ್ ಪುರಂ ಲೊಕೊ ಶೆಡ್ ಮತ್ತು ನಿಲ್ದಾಣದಲ್ಲಿ ಕೆಲಸ ಮಾಡುವ 200 ರೈಲು ಚಾಲಕರು ಹತ್ತಿರದಲ್ಲಿಯೇ ವಾಸಿಸುತ್ತಿದ್ದಾರೆ, ಏಕೆಂದರೆ ಗೂಡ್ಸ್ ರೈಲು ನಿರ್ದಿಷ್ಟ ಸಮಯ ಹೊಂದಿಲ್ಲ. ಹೀಗಾಗಿ ಅವರು ಸೂಚನೆಯಲ್ಲಿ ಕೆಲಸಕ್ಕೆ  ಹಾಜರಾಗಲು ಸಿದ್ಧರಾಗಿರಬೇಕು" ಎಂದು ಮತ್ತೊಂದು ಮೂಲವು ವಿವರಿಸಿದೆ.

ರಸ್ತೆ ಪ್ರತ್ಯೇಕವಾಗಿದೆ ಮತ್ತು ರಾತ್ರಿ ಕರ್ತವ್ಯದಲ್ಲಿರುವ ಎಎಲ್‌ಪಿಗಳು ಮತ್ತು ಎಲ್‌ಪಿಗಳು ಭಯದಿಂದ  ಓಡಾಡುವ ಪರಿಸ್ಥಿತಿ ಎದುರಾಗಿದೆ. ಹತ್ತಿರದಲ್ಲಿ ಮದ್ಯದ ಅಂಗಡಿಗಳಿವೆ ಮತ್ತು ಕುಡಿದು ಜಗಳ ಮಾಡುವುದು ಸಾಮಾನ್ಯವಾಗಿದೆ ಎಂದು ಅವರು ಹೇಳಿದರು.

ಏಪ್ರಿಲ್ 2022 ರಲ್ಲಿ  ಸಹಾಯಕ ಲೋಕೋ ಪೈಲಟ್ ಮೇಲೆ ಈ  ಪ್ರದೇಶದಲ್ಲಿ ಹಲ್ಲೆ ನಡೆಸಲಾಯಿತು ಮತ್ತು ತಲೆಗೆ ಗಂಭೀರವಾದ ಗಾಯಗಳಾಗಿವೆ. ಲೊಕೊ ಪೈಲಟ್‌ಗಳ ಮೂಲಗಳ ಪ್ರಕಾರ. ಅವರು ರಾತ್ರಿಯಲ್ಲಿ ಎದುರಿಸುವ ಅಪಾಯಗಳ ಬಗ್ಗೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ ಮತ್ತು ಪರಿಹಾರಕ್ಕಾಗಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾರೆ, ಆದರೆ ಯಾವುದೇ ಬೆಂಬಲ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಘಟನೆಯನ್ನು ನನ್ನ ಗಮನಕ್ಕೆ ತಂದಿಲ್ಲ, ನನಗೆ ಲೊಕೊ ಪೈಲಟ್‌ಗಳಿಂದ ಯಾವುದೇ ದೂರು ಬಂದಿಲ್ಲ, ನಾನು ಇದರ ಬಗ್ಗೆ ಗಮನ ಹರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಡಿಆರ್‌ಎಂ ಶ್ಯಾಮ್ ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com