ಪಠ್ಯಪುಸ್ತಕ ಪರಿಷ್ಕರಣೆ: 10 ದಿನಗಳೊಳಗೆ ಕಿರುಪುಸ್ತಕಗಳ ವಿತರಣೆ- ಸಚಿವ ಮಧು ಬಂಗಾರಪ್ಪ

ಪಠ್ಯಪುಸ್ತಕಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಿರುವ ಪೂರಕ ಕಿರುಪುಸ್ತಕಗಳನ್ನು 10 ದಿನಗಳೊಳಗೆ ವಿತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಪಠ್ಯಪುಸ್ತಕಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಿರುವ ಪೂರಕ ಕಿರುಪುಸ್ತಕಗಳನ್ನು 10 ದಿನಗಳೊಳಗೆ ವಿತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲಾಗಿಲ್ಲ. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಮಾಡಿದ ಬದಲಾವಣೆಗಳನ್ನು ಮಾತ್ರ ಬದಲಿಸಲಾಗಿದೆ ಎಂದು ಹೇಳಿದರು.

ಮಕ್ಕಳ ಹಿತದೃಷ್ಟಿಯಿಂದ ಕೆಲವು ಅಧ್ಯಾಯಗಳನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ನಂತರ ಪದಗಳು ಮತ್ತು ವಾಕ್ಯಗಳ ಮೂಲಕ ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಕಿರುಪುಸ್ತಕಗಳನ್ನು ವಿತರಿಸುತ್ತಿರುವುದರಿಂದ ಶಿಕ್ಷಣ ಇಲಾಖೆಗೂ ದೊಡ್ಡ ಹೊರೆಯಾಗುವುದಿಲ್ಲ. ಸರಿಸುಮಾರು ಹತ್ತರಿಂದ ಹನ್ನೆರಡು ಲಕ್ಷ ವೆಚ್ಚವಾಗುತ್ತದೆ ಎಂದು ತಿಳಿಸಿದರು.

ಕಿರುಪುಸ್ತಕವನ್ನು ರೂಪಿಸಲು ತಾತ್ಕಾಲಿಕವಾಗಿ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಮುಂದಿನ ವಾರದೊಳಗೆ ವಿತರಣೆ ಮಾಡಲಾಗುತ್ತದೆ. ಈ ಕಿರುಪುಸ್ತಕಗಳು ಇಲಾಖೆಯ ಅಡಿಯಲ್ಲಿರುವ 74,000 ಶಾಲೆಗಳ ಎಲ್ಲ ಶಿಕ್ಷಕರನ್ನು ತಲುಪಲಿದೆ. ಕಿರುಪುಸ್ತಕವನ್ನು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಸೇರಿಸಲಾಗುವುದು ಮತ್ತು ಇವುಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡಲಾಗುವುದು. ಸೋಮವಾರದ ವೇಳೆಗೆ, ಈ ಬದಲಾವಣೆಗಳನ್ನು ವೆಬ್‌ಸೈಟ್‌ನಲ್ಲಿ ಸಾರ್ವಜನಿಕಗೊಳಿಸಲಾಗುವುದು ಎಂದರು.

6 ನೇ ತರಗತಿಯಿಂದ 10 ನೇ ತರಗತಿಯ ಕನ್ನಡ ಭಾಷೆ ಮತ್ತು ಸಮಾಜ ಅಧ್ಯಯನ ಪಠ್ಯಪುಸ್ತಕಗಳಲ್ಲಿ ಮಾತ್ರ ಬದಲಾವಣೆಗಳನ್ನು ತರಲಾಗಿದೆ. ಕಿರುಪುಸ್ತಕಗಳು ಒಂದು ವಾರ ಅಥವಾ ಹತ್ತು ದಿನಗಳ ಒಳಗಾಗಿ ಎಲ್ಲಾ ಶಾಲೆಗಳನ್ನು ತಲುಪಲಿದೆ. ಕಿರುಪುಸ್ತಕಗಳನ್ನು ಮುದ್ರಿಸುವ ಮತ್ತು ಸಾಧ್ಯವಾದಷ್ಟು ಬೇಗ ಅವುಗಳನ್ನು ಮಕ್ಕಳ ಕೈಗೆ ತಲುಪಿಸುವ ಕೆಲಸಗಳು ನಡೆಯುತ್ತಿದೆ. ಪುಸ್ತಕಗಳು ಮುದ್ರಣಗೊಂಡ ನಂತರ 48 ಗಂಟೆಯೊಳಗೆ ಶಾಲೆ ತಲುಪಲಿವೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com