ಶಕ್ತಿ ಯೋಜನೆ: ಜೂನ್ 18 ರಂದು ಬೆಂಗಳೂರಿನಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ವೆಚ್ಚ 14 ಕೋಟಿ ರೂ.!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿರುವ ಶಕ್ತಿ ಯೋಜನೆಯಲ್ಲಿ ಜೂನ್ 18 ರಂದು ಟಿಕೆಟ್ ವೆಚ್ಚ 13.99 ಕೋಟಿ ರೂಪಾಯಿಗಳ ಹೊಸ ದಾಖಲೆ ಬರೆದಿದೆ. ಜೂನ್ 17 ರಂದು 12.88 ಕೋಟಿ ರೂ. ಮತ್ತು ಜೂನ್ 16 ರಂದು 12.45 ಕೋಟಿ ರೂ. ಆಗಿತ್ತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿರುವ ಶಕ್ತಿ ಯೋಜನೆಯಲ್ಲಿ ಜೂನ್ 18 ರಂದು ಟಿಕೆಟ್ ವೆಚ್ಚ 13.99 ಕೋಟಿ ರೂಪಾಯಿಗಳ ಹೊಸ ದಾಖಲೆ ಬರೆದಿದೆ. ಜೂನ್ 17 ರಂದು 12.88 ಕೋಟಿ ರೂ. ಮತ್ತು ಜೂನ್ 16 ರಂದು 12.45 ಕೋಟಿ ರೂ. ಆಗಿತ್ತು. 

ಜೂನ್ 11 ರಿಂದ 18 ರವರೆಗಿನ ಮಹಿಳೆಯರು ಪ್ರಯಾಣಿಸಿದ ಒಟ್ಟು ಟಿಕೆಟ್ ಮೌಲ್ಯವು 84.28 ಕೋಟಿ ರೂ. ಆಗಿದ್ದು, ಒಟ್ಟು 3.63 ಕೋಟಿ ಮಹಿಳೆಯರು ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.

ಬಸ್ ನಿಗಮಗಳ ಅಂಕಿಅಂಶಗಳ ಪ್ರಕಾರ, ಒಟ್ಟು 97.32 ಲಕ್ಷ ಪ್ರಯಾಣಿಕರಲ್ಲಿ, ಕೆಎಸ್‌ಆರ್‌ಟಿಸಿ ಭಾನುವಾರ ಅತಿ ಹೆಚ್ಚು ಪ್ರಯಾಣಿಕರನ್ನು ಅಂದರೆ 28.92 ಲಕ್ಷದೊಂದಿಗೆ ದಾಖಲೆ ಬರೆದಿದೆ. ಅದರಲ್ಲಿ 15.43 ಲಕ್ಷ ಮಹಿಳೆಯರು. ಬಿಎಂಟಿಸಿ ಬಸ್‌ಗಳು 28.35 ಲಕ್ಷ ಪ್ರಯಾಣಿಕರನ್ನು ಕರೆದೊಯ್ದಿದ್ದು, ಅದರಲ್ಲಿ 14.91 ಲಕ್ಷ ಮಹಿಳೆಯರು. 23.74 ಲಕ್ಷ ಪ್ರಯಾಣಿಕರೊಂದಿಗೆ ಎನ್‌ಡಬ್ಲ್ಯುಕೆಆರ್‌ಟಿಸಿ  ನಂತರದ ಸ್ಥಾನದಲ್ಲಿದ್ದು, ಈ ಪೈಕಿ 13.88 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಕೆಕೆಆರ್‌ಟಿಸಿ ಒಟ್ಟು 16.30 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ದಿದ್ದು, ಅದರಲ್ಲಿ 7.24 ಲಕ್ಷ ಮಹಿಳೆಯರು ಸೇರಿದ್ದಾರೆ.

ಜೂನ್ 11 ರಿಂದ 18 ರವರೆಗೆ ಒಟ್ಟು 3.63 ಕೋಟಿ ರೂ. ಟಿಕೆಟ್ ವೆಚ್ಚವಾಗಿದ್ದು, 1.25 ಕೋಟಿ ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಮತ್ತು 1.04 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸುವ ಮೂಲಕ ಯೋಜನೆಯ ಲಾಭ ಪಡೆದಿದ್ದಾರೆ. ಎನ್‌ಡಬ್ಲ್ಯುಕೆಆರ್‌ಟಿಸಿ 87.33 ಲಕ್ಷ ಮಹಿಳಾ ಪ್ರಯಾಣಿಕರು ಮತ್ತು ಕೆಕೆಆರ್‌ಟಿಸಿಯಲ್ಲಿ 46.12 ಲಕ್ಷ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ.

ಟಿಕೆಟ್ ರಹಿತ ಪ್ರಯಾಣ: ಬಿಎಂಟಿಸಿಯಿಂದ 6 ಲಕ್ಷ ದಂಡ ವಸೂಲಿ

ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲು ಬಿಎಂಟಿಸಿ ಬಸ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿದೆ. ಮೇ ತಿಂಗಳಲ್ಲಿ ದಂಡವಾಗಿ 6.96 ಲಕ್ಷ ರೂ. ಸಂಗ್ರಹಿಸಿದೆ. ಬಿಎಂಟಿಸಿ ಸಿಬ್ಬಂದಿ 14,710 ಟ್ರಿಪ್‌ಗಳಿಗೆ ತೆರಳಿದ್ದು, 3,659 ಟಿಕೆಟ್‌ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಕರ್ತವ್ಯ ಲೋಪಕ್ಕಾಗಿ ಕಂಡಕ್ಟರ್‌ಗಳ ವಿರುದ್ಧ 1,288 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸೋಮವಾರ ಪ್ರಕಟಣೆ ತಿಳಿಸಿದೆ.

ಮೇ ತಿಂಗಳಲ್ಲಿ, ಮಹಿಳೆಯರಿಗೆ ಮೀಸಲಿಟ್ಟ ಆಸನಗಳನ್ನು ಆಕ್ರಮಿಸಿಕೊಂಡಿದ್ದಕ್ಕಾಗಿ 334 ಪುರುಷ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ ಮತ್ತು ಎಂವಿ ಕಾಯಿದೆ 1988 ರ ಸೆಕ್ಷನ್ 177ರ ಕೆಎಂವಿ ನಿಯಮಗಳು 94 ರ ಪ್ರಕಾರ, 34,400 ರೂ.ಗಳನ್ನು ದಂಡವಾಗಿ ಸಂಗ್ರಹಿಸಲಾಗಿದೆ.

ದಂಡ ವಿಧಿಸಿಕೊಳ್ಳುವುದನ್ನು ಮಾತ್ರವಲ್ಲದೆ ಮುಜುಗರಕ್ಕೊಳಗಾಗುವುದನ್ನು ತಪ್ಪಿಸಲು ಪ್ರಯಾಣಿಕರು ಟಿಕೆಟ್ ಮತ್ತು ಪಾಸ್‌ಗಳನ್ನು ಖರೀದಿಸಬೇಕು ಎಂದು ಬಿಎಂಟಿಸಿ ಹೇಳಿದೆ. ಇದು ಸಾರಿಗೆ ನಿಗಮಗಳಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟ ಆಸನಗಳನ್ನು ಆಕ್ರಮಿಸದಂತೆ ಬಸ್ ನಿಗಮಗಳು ಸೂಚಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com