ಸಚಿವರ ಭೇಟಿಗೆ ನಿರಾಕರಣೆ: ರಾಯಚೂರಿನಲ್ಲಿ ರಾಜಕಾಲುವೆಯಲ್ಲಿ ಕುಳಿತು ಮಹಿಳೆ ಪ್ರತಿಭಟನೆ!

ಸಫಾಯಿ ಕರ್ಮಚಾರಿ ಮಹಿಳೆಯೊಬ್ಬರು ತಮ್ಮ ಬೇಡಿಕೆ ಸಲ್ಲಿಸಲು ಸಚಿವರ ಭೇಟಿಗೆ ಅವಕಾಶ ನೀಡದ ಕಾರಣ ಇಲ್ಲಿನ ರಾಜಕಾಲುವೆಯಲ್ಲಿ ನಿಂತು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಸಚಿವರ ಭೇಟಿಗೆ ನಿರಾಕರಿಸಿದ್ದಕ್ಕೆ ರಾಜಕಾಲುವೆಗೆ ಇಳಿದು ಸಫಾಯಿ ಕರ್ಮಚಾರಿ ಮಹಿಳೆ ಪ್ರತಿಭಟನೆ
ಸಚಿವರ ಭೇಟಿಗೆ ನಿರಾಕರಿಸಿದ್ದಕ್ಕೆ ರಾಜಕಾಲುವೆಗೆ ಇಳಿದು ಸಫಾಯಿ ಕರ್ಮಚಾರಿ ಮಹಿಳೆ ಪ್ರತಿಭಟನೆ
Updated on

ರಾಯಚೂರು: ಸಫಾಯಿ ಕರ್ಮಚಾರಿ ಮಹಿಳೆಯೊಬ್ಬರು ತಮ್ಮ ಬೇಡಿಕೆ ಸಲ್ಲಿಸಲು ಸಚಿವರ ಭೇಟಿಗೆ ಅವಕಾಶ ನೀಡದ ಕಾರಣ ಇಲ್ಲಿನ ರಾಜಕಾಲುವೆಯಲ್ಲಿ ನಿಂತು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.

ಸಫಾಯಿ ಕರ್ಮಚಾರಿಗಳಿಗೆ ಪ್ರತ್ಯೇಕ ಸ್ಮಶಾನ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ನೀಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಸಫಾಯಿ ಕರ್ಮಚಾರಿಯಾಗಿರುವ ಗೀತಾ ಸಿಂಗ್ ಎನ್ನುವವರು ರಾಜಕಾಲುವೆಗೆ ಇಳಿದು ಕೊಳಕು ನೀರನ್ನು ಮೈಮೇಲೆ ಸುರಿದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು. ಮಂಗಳವಾರ ಈ ಘಟನೆ ನಡೆದಿದೆ.

ಸಚಿವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಸಲ್ಲಿಸಲು ಬಂದಿದ್ದ ಗೀತಾ ಸಿಂಗ್ ಅವರು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಭೇಟಿಗೆ ಅವಕಾಶ ನೀಡದ ಕಾರಣ ಪ್ರತಿಭಟನೆ ನಡೆಸಿದರು.

ಸಚಿವರ ಭದ್ರತಾ ಸಿಬ್ಬಂದಿ ಅವರನ್ನು ಭೇಟಿಯಾಗಲು ಅಥವಾ ಸಚಿವರಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಇದರಿಂದ ಕುಪಿತರಾದ ಅವರು ಸಮೀಪದಲ್ಲೇ ಇದ್ದ ಚರಂಡಿಗೆ ಹಾರಿ ಪ್ರತಿಭಟನೆ ನಡೆಸಿದ್ದಾರೆ. ಇತರರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ, ಪ್ರಯೋಜನವಾಗಲಿಲ್ಲ. ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಗೀತಾ ಸಿಂಗ್ ಪ್ರತಿಭಟನೆ ನಡೆಸುತ್ತಿರುವ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷ ಅಸಮಾಧಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ರಾಯಚೂರು ಉಸ್ತುವಾರಿ ಸಚಿವರನ್ನಾಗಿ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಅವರ ನೇಮಕವನ್ನು ವಿರೋಧಿಸಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಸಚಿವ ಪಾಟೀಲ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕಾಗಿ ಜನರು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯರು ಆಗಿರುವ ಮತ್ತು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಎನ್.ಎಸ್. ಬೋಸರಾಜು ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಜನರು ಒತ್ತಾಯಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com