ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ಮುಂದೆ ಬಸ್ ಪಾಸ್ ಬೇಡ; ಶಕ್ತಿ ಕಾರ್ಡ್ ವಿತರಿಸಲು ಸರ್ಕಾರ ಚಿಂತನೆ!

ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಯೋಜನೆ ಲಭಿಸುವಂತೆ ಮಾಡಲು ಸರ್ಕಾರ ಮುಂದಾಗಿದ್ದು, ಶಕ್ತಿ ಕಾರ್ಡ್ ಗಳ ವಿತರಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಯೋಜನೆ ಲಭಿಸುವಂತೆ ಮಾಡಲು ಸರ್ಕಾರ ಮುಂದಾಗಿದ್ದು, ಶಕ್ತಿ ಕಾರ್ಡ್ ಗಳ ವಿತರಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಶಾಲಾ ದಾಖಲಾತಿ ಪತ್ರ ತೋರಿಸಿ ವಿದ್ಯಾರ್ಥಿನಿಯರು ಬಸ್ ಪಾಸ್ ಖರೀದಿ ಮಾಡುವ ಅಗತ್ಯ ಇರುವುದಿಲ್ಲ. ಶಕ್ತಿ ಯೋಜನೆಯಡಿಯಲ್ಲಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಯೋಜನೆಯಡಿಯಲ್ಲಿ ಇತರೆ ಮಹಿಳಾ ಪ್ರಯಾಣಿಕರಂತೆ ವಿದ್ಯಾರ್ಥಿನಿಯರೂ ಕೂಡ ಶಕ್ತಿ ಸ್ಮಾರ್ಟ್ ಕಾರ್ಡ್'ಗಳ ಪಡೆಯಬೇಕು. ಕಾರ್ಡ್‌ ನೀಡಲು ಶೀಘ್ರದಲ್ಲೇ ಅರ್ಜಿಗಳ ಸ್ವೀಕರಿಸಲಾಗುತ್ತದೆ ಎನ್ನಲಾಗಿದೆ.

ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಟಿಕೆಟ್ ಗಳ ನೀಡುವಂತೆ ಈಗಾಗಲೇ ಸರ್ಕಾರ ಸರ್ಕಾರಿ ಬಸ್ ಕಂಡಕ್ಟರ್ ಗಳಿಗೆ ನಿರ್ದೇಶನ ನೀಡಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ವಿದ್ಯಾರ್ಥಿಗಳು 2023-24 ರ ಪಾಸ್‌ಗಳನ್ನು ಖರೀದಿಸಿದ್ದರೆ ಅವರಿಗೆ ಆ ಮಾರ್ಗಗಳಲ್ಲಿ ಪ್ರಯಾಣಿಸಲು ಅನುಮತಿ ನೀಡುವಂತೆ ಮತ್ತು “ಶೂನ್ಯ” ಟಿಕೆಟ್‌ಗಳನ್ನು ನೀಡದಂತೆ ಕಂಡಕ್ಟರ್‌ಗಳಿಗೆ ನಿರ್ದೇಶಿಸಲಾಗಿದೆ.

ಪಾಸ್ ಗಳಿಗೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ಸಾರಿಗೆ ನಿಗಮದ ಮೂಲಗಳು ಮಾಹಿತಿ ನೀಡಿವೆ.

ಶಾಲಾ ಮತ್ತು ಕಾಲೇಜಿಗೆ ಹೋಗುವ ಹುಡುಕರು ಕಳೆದ ಶೈಕ್ಷಣಿಕ ವರ್ಷದಂತೆಯೇ ಜೂನ್ 30 ರವರೆಗೆ ನೀಡಲಾಗುವ ಬಸ್ ಪಾಸ್‌ಗಳನ್ನು ಖರೀದಿ ಮಾಡುವ ಮೂಲಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಎಂದು ತಿಳಿಸಲಾಗಿದೆ.

ಈ ವಿದ್ಯಾರ್ಥಿಗಳು ಜುಲೈ 1 ರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಹೊಸ ಪಾಸ್‌ಗಳನ್ನು ಪಡೆಯಬೇಕು ಎಂದು ತಿಳಿಸಿದೆ.

ಇನ್ನು ಶಕ್ತಿ ಯೋಜನೆ ಅಡಿಯಲ್ಲಿ ಜೂನ್ 20ರವರೆಗೂ 17.89 ಲಕ್ಷ ಮಹಿಳೆಯರು BMTC ಬಸ್‌ಗಳಲ್ಲಿ ಪ್ರಯಾಣಿಸಿದ್ದು, ಇದರ ವೆಚ್ಚ 2.27 ಕೋಟಿ ರೂ ಆಗಿದೆ ಎಂದು ತಿಳಿದುಬಂದಿದೆ.

KSRTC ಬಸ್ ಗಳಲ್ಲಿ 17.46 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇತರ ವೆಚ್ಚ 5.21 ಕೋಟಿ ರೂ ಆಗಿದೆ. NWKRTC ಬಸ್ ಗಳಲ್ಲಿ 14.47 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಇದರ ವೆಚ್ಚ 3.59 ಕೋಟಿ ರೂ. KKRTC 8.05 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರೆ,  ಇದರ ವೆಚ್ಚ 2.57 ಕೋಟಿ ರೂ ಆಗಿದೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com