ಬೆಂಗಳೂರು: ಬಕ್ರೀದ್ ಹಬ್ಬ ಹತ್ತಿರಬರುತ್ತಿದ್ದು, ಈ ನಡುವಲ್ಲೇ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಬಿರುಸುಗೊಂಡಿದೆ.
ರಾಜ್ಯದಾ ನಾನಾ ಭಾಗಗಳಿಂದ ನೂರಾರು ಮಾರಾಟಗಾರರು ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ. ಜೂ. 29ಕ್ಕೆ ಹಬ್ಬವಿದ್ದು, ಗ್ರಾಹಕರು ಈಗಲೇ ಕುರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ.
ಬೆಳಗ್ಗೆಯಿಂದಲೇ ಮೈದಾನದಲ್ಲಿ ದೊಡ್ಡ ಮಟ್ಟದ ಜನ ಸೇರುತ್ತಿದ್ದು, ಸ್ಥಳದಲ್ಲಿ ನೂಕುನುಗ್ಗಲು ಎದುರಾಗುತ್ತಿದೆ. ಮೈದಾನದಲ್ಲಿ ಮಂಡ್ಯದ ಬಂಡೂರು (ಬನ್ನೂರು), ಕೊಪ್ಪಳದ ಗುಡ್ಡಗಾಡು ಪ್ರದೇಶದ ತೆಂಗುರಿ, ಉತ್ತರ ಕರ್ನಾಟಕದ ಡೆಕ್ಕನಿ, ರಾಜಸ್ಥಾನದ ಸಿರೋಹಿ ಮತ್ತು ಕೋಟಾ ಸೇರಿದಂತೆ ಸೇರಿದಂತೆ ತಳಿಗಳು ಇಲ್ಲಿ ಮಾರಾಟಕ್ಕಿಡಲಾಗಿದೆ.
ಇವುಗಳ ಬೆಲೆ ಸುಮಾರು 10,000 ರೂ.ಗಳಿಂದ ಪ್ರಾರಂಭವಾಗಿ ಒಂದು ಲಕ್ಷವರೆಗೂ ಮಾರಾಟವಾಗುತ್ತಿವೆ. ಸುಮಾರು 100 ತೂಕದ ಟಗರ (ಕೊಬ್ಬಿದ ಗಂಡು ಕುರಿನ್ನು ರೂ.1 ಲಕ್ಷ- ಅದಕ್ಕಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ.
“ಟಗರುಗಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಅವುಗಳಿಗೆ ಬಾದಾಮಿ, ಗೋಡಂಬಿ ಮತ್ತು ಹಾಲಿನಂತಹ ಒಣ ಹಣ್ಣುಗಳನ್ನು ನೀಡಲಾಗುತ್ತದೆ. ಅದರ ಆಹಾರದ ವೆಚ್ಚವೇ ದಿನಕ್ಕೆ 600 ರೂವರೆಗೂ ಆಗುತ್ತದೆ. ಒಂದು ಟಗರು 100 ಕೆಜಿ ತೂಕವಾಗುವುದಕ್ಕೆ ಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಆರೈಕೆ ಮಾಡಬೇಕಾಗುತ್ತದೆ ಎಂದು ಟಗರು ಮಾರಾಟಗಾರರೊಬ್ಬರು ಹೇಳಿದ್ದಾರೆ.
ಕಳೆದ ವರ್ಷದ ಬೆಲೆಗೆ ಹೋಲಿಸಿದರೆ ಈ ಬಾರಿ ದರ ಹೆಚ್ಚಾಗಿದೆ. ಕಳೆದ ವರ್ಷ ಬನ್ನೂರು ಕುರಿಯೊಂದರ ಬೆಲೆ 15 ಸಾವಿರ ರೂ ಇತ್ತು. ಆದರೆ, ಈ ವರ್ಷ 20 ಸಾವಿರ ರೂ.ಆಗಿದೆ ಎಂದು ಗ್ರಾಹಕರರು ಹೇಳಿದ್ದಾರೆ.
Advertisement