ಬೆಂಗಳೂರು: ಆಟೋ ದರ ವಿಚಾರವಾಗಿ ಜಗಳ, ಮುಂಬೈ ಮೂಲದ ಡಿಸೈನರ್ ಮೇಲೆ ಆರು ಚಾಲಕರಿಂದ ಹಲ್ಲೆ

ನಿಗದಿತ ದರಕ್ಕಿಂತ ಹೆಚ್ಚಿನ ಹಣ ನೀಡಲು ನಿರಾಕರಿಸಿದ ಮುಂಬೈನ ಡಿಸೈನರ್ ಮೇಲೆ ಆರು ಆಟೋ ರಿಕ್ಷಾ ಚಾಲಕರ ತಂಡ ಹಲ್ಲೆ ನಡೆಸಿರುವ ಘಟನೆ ಮಾರತ್ತಹಳ್ಳಿಯಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿಗದಿತ ದರಕ್ಕಿಂತ ಹೆಚ್ಚಿನ ಹಣ ನೀಡಲು ನಿರಾಕರಿಸಿದ ಮುಂಬೈನ ಡಿಸೈನರ್ ಮೇಲೆ ಆರು ಆಟೋ ರಿಕ್ಷಾ ಚಾಲಕರ ತಂಡ ಹಲ್ಲೆ ನಡೆಸಿರುವ ಘಟನೆ ಮಾರತ್ತಹಳ್ಳಿಯಲ್ಲಿ ನಡೆದಿದೆ. ಫಿನ್‌ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಂಬೈನ 32 ವರ್ಷದ ಮುಂಬೈ ಮೂಲದ ಸರೋನ್ ಸಿಲ್ವಿಸ್ಟರ್ ವಿಲ್ಸನ್ ಮೋಸೆಸ್ ಹಲ್ಲೆಗೊಳಗಾದವರು. ಇವರು ಕಳೆದ ಎರಡು ವರ್ಷಗಳಿಂದ ಮಾರತ್ತಹಳ್ಳಿಯಲ್ಲಿ ನೆಲೆಸಿದ್ದಾರೆ.

ಮೋಸೆಸ್ ವರ್ತೂರಿನಿಂದ ಮಾರತ್ತಹಳ್ಳಿಗೆ ಆ್ಯಪ್ ಆಧಾರಿತ ಆಟೋವನ್ನು ಬುಕ್ ಮಾಡಿದ್ದರು. ಮಾರತ್ತಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿರುವ ಬಾಟಾ ಶೋರೂಂ ಎದುರು ಆಟೋ ನಿಲ್ಲಿಸಿದ ಚಾಲಕ ಧನಂಜಯ, 700 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ,  ಆ್ಯಪ್‌ನಲ್ಲಿ ತೋರಿಸಿದ ಮೊತ್ತ ಪಾವತಿಸಲು ಮಾತ್ರ ಮೋಸೆಸ್ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಹತಾಶನಾದ ಚಾಲಕ ಜಗಳ ಆರಂಭಿಸಿದ್ದು, ಆತನ ಜೊತೆಗೆ ಐವರು ಆಟೋ ಚಾಲಕರು ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಅವರೆಲ್ಲರೂ ಚೂಪಾದ ಆಯುಧದಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮೋಸೆಸ್ ತಲೆಗೆ 17 ಹೊಲಿಗೆ ಹಾಕಲಾಗಿದೆ.

ಆ್ಯಪ್ ಆಧಾರಿತ ಬುಕ್ಕಿಂಗ್ ಆಗಿರುವುದರಿಂದ ಆಟೋ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಾಖಲಾತಿ ವಿವರಗಳ ಆಧಾರದ ಮೇಲೆ ಪೊಲೀಸರು ಆರೋಪಿ ಆಟೋ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com