ರಾಜ್ಯದಲ್ಲಿ H3N2 ಅಬ್ಬರ: ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ, ಫ್ಲೂ ಲಸಿಕೆ ಕಡ್ಡಾಯ, ಆರೋಗ್ಯ ಇಲಾಖೆ ಮಾರ್ಗಸೂಚಿ

ರಾಜ್ಯದ ಅನೇಕ ಭಾಗಗಳಲ್ಲಿ ಇನ್‌ಫ್ಲುಯೆಂಜಾ ಮಾದರಿಯ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ. ದೀರ್ಘಕಾಲದ ಅನಾರೋಗ್ಯ ಮತ್ತು ಬಿಟ್ಟೂಬಿಡದೆ ಕಾಡುವ ಕೆಮ್ಮಿ, ನೆಗಡಿ, ಜ್ವರದಿಂದ ಜನರು ನರಳುತ್ತಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಇನ್‌ಫ್ಲುಯೆಂಜಾ ಮಾದರಿಯ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ. ದೀರ್ಘಕಾಲದ ಅನಾರೋಗ್ಯ ಮತ್ತು ಬಿಟ್ಟೂಬಿಡದೆ ಕಾಡುವ ಕೆಮ್ಮಿ, ನೆಗಡಿ, ಜ್ವರದಿಂದ ಜನರು ನರಳುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ 2 ವರ್ಷಗಳ ಹೋರಾಟದ ಬಳಿಕ ಈಗಷ್ಟೇ ಚೇತರಿಸಿಕೊಂಡಿದ್ದ ಜನರಲ್ಲಿ ಇದೀಗ ಅನಾರೋಗ್ಯದ ಪ್ರಕರಣಗಳಲ್ಲಿನ ಹೆಚ್ಚಳ ಆತಂಕವನ್ನು ಹೆಚ್ಚಿಸಿದೆ.

ರಾಜ್ಯದಲ್ಲಿ ಜ್ವರ ಹಾಗೂ ಫ್ಲೂ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಕೋವಿಡ್ 19 ಸೋಂಕನ್ನೇ ಹೋಲುವ ಲಕ್ಷಣಗಳು ಜನರ ನಿದ್ದೆಗೆಡಿಸಿವೆ. ಇನ್‌ಫ್ಲೂಯೆಂಜಾ ಎ ಉಪವಿಧದ ಎಚ್‌3ಎನ್2 ವೈರಸ್ ಈ ಸಮಸ್ಯೆಗೆ ಕಾರಣ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್3ಎನ್2 ಇನ್ಫ್ಲುಯೆಂಜಾ ಹರಡುವುದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ರಾಜ್ಯ ಆರೋಗ್ಯ ಇಲಾಖೆಯು ಮಾರ್ಗಸೂಚಿಯೊಂದನ್ನು ಹೊರಡಿಸಿದೆ.

  • ILI/SARI ಕೇಸ್ ಗಳ ಮೇಲೆ ಸೂಕ್ತ ನಿಗಾವಹಿಸಬೇಕು, IDSP-IHIP ಪೋರ್ಟಲ್‌ನಲ್ಲಿ ಸಾರಿ ಕೇಸ್ ಗಳ ಬಗ್ಗೆ ಮಾದರಿ ಸಂಗ್ರಹಣೆಯ ಮಾಹಿತಿ ದಾಖಲು ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಅಧಇಕಾರಿಗಳಿಗೆ ಸೂಚನೆ ನೀಡಿದೆ.
  • ಅಗತ್ಯವಿರುವ ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸಿ ಇಟ್ಟಿಕೊಳ್ಳುವಂತೆ ಹಾಗೂ ILI/SARI ಕೇಸ್ ಗಳ ಚಿಕಿತ್ಸೆ ವೇಳೆ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಪಿಪಿಇ ಕಿಟ್ ಧರಿಸಬೇಕೆಂದು ಸೂಚಿಸಿದೆ.
  • ಐಸಿಯು ಮತ್ತು ಆಸ್ಪತ್ರೆಯ ಚಿಕಿತ್ಸಾ ವಾರ್ಡ್ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಫ್ಲೂ ಲಸಿಕೆ ಪಡೆಯಬೇಕು, ಹೆಲ್ತ್ ಕೇರ್ ಫೆಸಿಲಿಟಿಗಳಲ್ಲಿ ಎಲ್ಲಾ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು.
  •  ಸಾರಿ ಕೇಸ್ ಗಳಿಂದ ಮೃತಪಟ್ಟವರ ಸ್ವಾಬ್ ವರದಿಯನ್ನ ಹತ್ತಿರದ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯದ ಪ್ರಯೋಗಾಲಯದಲ್ಲಿ (VRDL) ಪರೀಕ್ಷೆಗೆ ಒಳಪಡಿಸಬೇಕು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಕಾಲೋಚಿತ ಜ್ವರದ ರೋಗಲಕ್ಷಣದ ನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸ್ವಯಂ-ಔಷಧಿ ಮತ್ತು ಪ್ರತಿಜೀವಕಗಳ ಅನಗತ್ಯ ಬಳಕೆಯನ್ನು ತಪ್ಪಿಸಬೇಕು.
  • ಜನರಲ್ಲಿ ಜಾಗೃತಿ ಮೂಡಿಸಲು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ಆಸ್ಪತ್ರೆಯ ಆವರಣದಲ್ಲಿ ಲಗತ್ತಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
  • ಜನರು ಸ್ವಯಂ ಔಷಧಿ ಮತ್ತು ಆಂಟಿಡೋಸ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com