ಮಾರ್ಚ್ 18 ರಿಂದ ಏಪ್ರಿಲ್ 9 ರವರೆಗೆ ಕೊಡವ ಕೌಟುಂಬಿಕ ಹಾಕಿ: ಸಿಎಂ ಬೊಮ್ಮಾಯಿ ಚಾಲನೆ

ಕೊಡವ ಕೌಟುಂಬಿಕ ಹಾಕಿ ಹಬ್ಬವು ಮಾರ್ಚ್ 18ರಿಂದ ಏಪ್ರಿಲ್ 9ರವರೆಗೆ ನಡೆಯಲಿದ್ದು, ಹಾಕಿ ಉತ್ಸವದ 23ನೇ ಆವೃತ್ತಿಗೆ ಮಾ.18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಲಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಕೊಡವ ಕೌಟುಂಬಿಕ ಹಾಕಿ ಹಬ್ಬವು ಮಾರ್ಚ್ 18ರಿಂದ ಏಪ್ರಿಲ್ 9ರವರೆಗೆ ನಡೆಯಲಿದ್ದು, ಹಾಕಿ ಉತ್ಸವದ 23ನೇ ಆವೃತ್ತಿಗೆ ಮಾ.18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಲಿದ್ದಾರೆ.

ನಾಲ್ಕು ವರ್ಷಗಳ ಅಂತರದ ನಂತರ ಈ ಪಂದ್ಯಾವಳಿ ನಡೆಯುತ್ತಿದ್ದು, 336 ತಂಡಗಳು ಭಾಗವಹಿಸುವ ಮೂಲಕ ವಿಶ್ವದ ಅತಿ ದೊಡ್ಡ ಹಾಕಿ ಉತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಈ ಬಾರಿ ಉತ್ಸವವನ್ನು ಆಯೋಜಿಸುತ್ತಿರುವ ಅಪ್ಪಚೆಟ್ಟೋಳಂಡ ಕುಟುಂಬದ ಸದಸ್ಯರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದರು.

ಪ್ರವಾಹ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಉತ್ಸವವು 1997 ರಲ್ಲಿ ಪ್ರಾರಂಭವಾಯಿತು, ಅಂದು 60 ತಂಡಗಳು ಭಾಗವಹಿಸಿದ್ದವು. ಈ ಬಾರಿ ದಾಖಲೆಯ 336 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, 24 ಪ್ರತಿಭಾವಂತ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಹಾಕಿ ಕೂರ್ಗ್ ಮತ್ತು ಕರ್ನಾಟಕದ ಸಹಯೋಗದಲ್ಲಿ ಇವರಿಗೆ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಪಂದ್ಯಾವಳಿಯಿಂದ ಸಂಗ್ರಹಿಸಿದ ಶೇಕಡಾ 4 ರಷ್ಟು ಹಣವನ್ನು ಕೊಡಗಿನ ಆರೈಕೆ ಕೇಂದ್ರಗಳು ಮತ್ತು ಅನಾಥಾಶ್ರಮಗಳಿಗೆ ನೀಡಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com