ಕೆ ಆರ್ ಪುರಂ ರೈಲು ನಿಲ್ದಾಣದಲ್ಲಿ ಅಧಿಕಾರಿಯಿಂದ ಕಿರುಕುಳ: ಭೀಕರ ಅನುಭವ ಹಂಚಿಕೊಂಡ ಮಹಿಳೆ

ನಗರದ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಅಮಾನತುಗೊಂಡ ಉಪ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ (ಡಿವೈಸಿಟಿಐ) ವಿ ಸಂತೋಷ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪಿಂಕಿ ಚಟರ್ಜಿ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ನಿನ್ನೆ ಶುಕ್ರವಾರ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 
ಕೆ ಆರ್ ಪುರಂ ರೈಲು ನಿಲ್ದಾಣ
ಕೆ ಆರ್ ಪುರಂ ರೈಲು ನಿಲ್ದಾಣ

ಬೆಂಗಳೂರು:  ನಗರದ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಅಮಾನತುಗೊಂಡ ಉಪ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ (ಡಿವೈಸಿಟಿಐ) ವಿ ಸಂತೋಷ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪಿಂಕಿ ಚಟರ್ಜಿ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ನಿನ್ನೆ ಶುಕ್ರವಾರ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಪೊಲೀಸರು, ತಮ್ಮ ಎಫ್‌ಐಆರ್‌ನಲ್ಲಿ, ಸಂತೋಷ್ ವಿರುದ್ಧ ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ, ಇದು ಮಹಿಳೆಯ ವಿನಯ ಗುಣವನ್ನು ದುರುಪಯೋಗಪಡಿಸಿಕೊಂಡ ಕ್ರಿಮಿನಲ್ ಬಲದ ಕೃತ್ಯವಾಗಿದೆ. ಇದಕ್ಕೆ ಒಂದು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು. ತನ್ನ ಅನುಭವದಿಂದ ಇನ್ನೂ ಆಘಾತಕ್ಕೊಳಗಾಗಿರುವ ಚಟರ್ಜಿ, ತನ್ನನ್ನು ರಕ್ಷಿಸಲು ಬಂದ ಅಪರಿಚಿತರಿಗೆ ಧನ್ಯವಾದ ಹೇಳುತ್ತಾರೆ. 

ನಡೆದ ಘಟನೆಯೇನು?: ಕೋಲ್ಕತ್ತಾ ಮೂಲದ ಪಿಂಕಿ ಚಟರ್ಜಿ ಮೊನ್ನೆ ಮಾರ್ಚ್ 14 ರಂದು ಉನ್ನತ ಕಾಳಜಿ ವಿಭಾಗದ ಮ್ಯಾನೇಜರ್ ಹುದ್ದೆಯ ಸಂದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದರು.

ತಮ್ಮ ಸಂಕಷ್ಟವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ. ಪ್ರೀಮಿಯಂ ತತ್ಕಾಲ್ ಮೂಲಕ ಕಾಯ್ದಿರಿಸಲಾದ 3AC ಟಿಕೆಟ್‌ಗೆ  2,770 ರೂಪಾಯಿ ಪಾವತಿಸಿದ ಟಿಕೆಟ್ ತೋರಿಸಿದರು.

ಭುವನೇಶ್ವರದಲ್ಲಿ ಎಂಬಿಎ ಪ್ರವಾಸೋದ್ಯಮ ಪದವಿ, ಕೋಲ್ಕತ್ತಾದಿಂದ ಸಂಸ್ಕೃತದಲ್ಲಿ ಬಿಎ ಮಾಡಿದ್ದಾರೆ. 2016 ರಿಂದ ಐದು ವರ್ಷಗಳ ಕಾಲ ಬೆಂಗಳೂರಿನ ಉನ್ನತ ಟ್ರಾವೆಲ್ ಕಾಳಜಿ ವಿಭಾಗದಲ್ಲಿ ತಂಡದ ನಾಯಕಿಯಾಗಿ ಕೆಲಸ ಮಾಡಿದ್ದಾರೆ. ಕೋವಿಡ್ ನಂತರ, ಕೋಲ್ಕತ್ತಾಗೆ ಹೋಗಿ ಎರಡು ವರ್ಷಗಳ ಕಾಲ ತನ್ನ ಅನಾರೋಗ್ಯದ ತಂದೆಯ ಗಾರ್ಮೆಂಟ್ ವ್ಯಾಪಾರವನ್ನು ನಡೆಸುತ್ತಿದ್ದಳು, ನಂತರ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. 

ಮೊನ್ನೆ ಮಂಗಳವಾರ ಸಂಜೆ ನಡೆದ ಘಟನೆಯನ್ನು ಮೆಲುಕು ಹಾಕಿದ ಅವರು, ನಾನು ನನ್ನ ಕಂಪಾರ್ಟ್‌ಮೆಂಟ್‌ನಿಂದ ಹೊರಬಂದಾಗ, ರೈಲ್ವೆ ಐಡಿ ಹೊಂದಿರುವ ಈ ಅಧಿಕಾರಿ ದೂರದಿಂದ ನನ್ನನ್ನು ಗಮನಿಸಿ ನನ್ನ ಟಿಕೆಟ್‌ಗಾಗಿ ನನ್ನ ಬಳಿಗೆ ಧಾವಿಸಿದರು, ನನ್ನ ಬಳಿ ಲ್ಯಾಪ್‌ಟಾಪ್, ಟ್ರಾಲಿ ಬ್ಯಾಗ್ ಇದ್ದವು. ಮತ್ತೊಂದು ಬ್ಯಾಗ್ ಹಿಡಿದು ಇಳಿಯಬೇಕಾಗಿದ್ದರಿಂದ ಪ್ರಯಾಣಿಕರು ಕಿಕ್ಕಿರಿದು ಸೇರಿದ್ದರಿಂದ ಸ್ವಲ್ಪ ಹೊತ್ತು ಕಾಯಿರಿ, ಟಿಕೆಟ್ ತೋರಿಸುತ್ತೇನೆ ಎಂದು ಹೇಳಿ ಇಳಿದು ಟಿಕೆಟ್ ತೋರಿಸಿದೆ.

ಲಗ್ಗೇಜು ಹಿಡಿದು ನಾನು ನನ್ನ ಪಾಡಿಗೆ ಹೋಗುತ್ತಿರುವಾಗ  ನನ್ನ ಕೂದಲು ಮತ್ತು ಉಡುಗೆಯನ್ನು ಹಿಡಿದು ಆತ ಎಳೆದ. ಬೀಳುವಂತಾದೆ. ನಾನು ತಿರುಗಿ ಅದೇ ಟಿಕೆಟಿಂಗ್ ಅಧಿಕಾರಿ ನನ್ನನ್ನು ತಡೆದಿರುವುದನ್ನು ನೋಡಿ ಆಘಾತವಾಯಿತು. ಭಯವಾಗಿ  ತಕ್ಷಣ ತನ್ನ ಟಿಕೆಟ್ ತೋರಿಸಲು ತನ್ನ ಫೋನ್ ತೆಗೆದುಕೊಂಡು ಏಕೆ ಏನಾಯಿತು ಎಂದು ಕೇಳಿದೆ. ಅವಾಚ್ಯ ಶಬ್ದಗಳಿಂದ ನನ್ನನ್ನು ಬೈಯುತ್ತಾ ಪೊಲೀಸಪ್ಪನ ತಂದೆ ಕೂಡ ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದ ಆತ ವಿಪರೀತ ಕುಡಿದಿದ್ದಾನೆ ಎಂದು ನನಗೆ ಅರ್ಥವಾಯಿತು. ಅವನ ವರ್ತನೆಯಿಂದ ಭೀತಿಗೊಳಗಾದೆ. ಸ್ಥಳದಲ್ಲಿ ಜನ ಸೇರಿ ನನ್ನನ್ನು ರಕ್ಷಿಸಿದರು. ದೇವರ ದಯೆಯಿಂದ ನನ್ನ ಸಹಾಯಕ್ಕೆ ಇಷ್ಟೊಂದು ಜನರು ಬಂದರು. ಘಟನೆಯನ್ನು ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ ಎನ್ನುತ್ತಾರೆ.

ಪಿಂಕಿ ಚಟರ್ಜಿ ಅವರು ಬೆಂಗಳೂರು ಮತ್ತು ಕೋಲ್ಕತ್ತಾ ನಡುವೆ ಆಗಾಗ್ಗೆ ಪ್ರಯಾಣಿಸುತ್ತಿರುತ್ತಾರೆ. ಈ ಸಿಬ್ಬಂದಿ ಬಳಸಿದ ಭಾಷೆ, ಮಾತನಾಡಿದ ರೀತಿ ಪಿಂಕಿಯವರಿಗೆ ಭಯಪಡಿಸಿತ್ತು. ಆತನಿಗೆ ಅವನ ಕೆಲಸದ ಬಗ್ಗೆ ಗೌರವವಿಲ್ಲ, ಅವನಿಗೆ ರೈಲ್ವೆಯಲ್ಲಿ ಕೆಲಸ ಮಾಡಲು ಹೇಗೆ ಅನುಮತಿ ನೀಡುತ್ತಾರೆ. ಮಹಿಳೆಯರಿಗೆ ಸುರಕ್ಷತೆ ಏನಿದೆ, ಬೇರೆ ಬೇರೆ ರಾಜ್ಯಗಳಿಂದ ಹಲವು ಕಡೆಗಳಿಂದ ಮಹಿಳೆಯರು ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಬರುವವರ ಕಥೆಯೇನು ಎಂದು ಪಿಂಕಿ ಚಟರ್ಜಿ ಕೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com