ಬೆಂಗಳೂರು: ಬೆಸ್ಕಾಂ ಬಿಲ್ ಬಳಸಿಕೊಂಡು ದಂಪತಿಗೆ 3.7 ಲಕ್ಷ ರೂ. ವಂಚನೆ!

ಬೆಸ್ಕಾಂನವರು ಎಂದು ಹೇಳಿಕೊಂಡು ಆನ್‌ಲೈನ್ ವಂಚಕರು ನಗರದ ರೆಸ್ಟೋರೆಂಟ್ ಮಾಲೀಕ ಮತ್ತು ಅವರ ಪತ್ನಿಗೆ ರೂ.  3.7 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಸ್ಕಾಂನವರು ಎಂದು ಹೇಳಿಕೊಂಡು ಆನ್‌ಲೈನ್ ವಂಚಕರು ನಗರದ ರೆಸ್ಟೋರೆಂಟ್ ಮಾಲೀಕ ಮತ್ತು ಅವರ ಪತ್ನಿಗೆ ರೂ.3.7 ಲಕ್ಷ ರೂಪಾಯಿ ವಂಚಿಸಿದ್ದಾರೆ. ವಂಚಕರು ಯೆಸ್ ಬ್ಯಾಂಕ್‌ನಲ್ಲಿರುವ ತಮ್ಮ ಜಂಟಿ ಖಾತೆಯಿಂದ ಹಣ ತೆಗೆದಿದ್ದಾರೆ. ಆಕ್ಸಿಸ್ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಲೂ ಪ್ರಯತ್ನಿಸಿ ವಿಫಲರಾಗಿದ್ದಾರೆ ಎಂದು ಬ್ಲೇಸ್ ಡಿಸೋಜಾ ಅವರ ಪತ್ನಿ ಡಯಾನಾ ಡಿಸೋಜಾ ಹೇಳಿದ್ದಾರೆ. 

ವಂಚಕರು ಫೆಬ್ರವರಿ 28 ರಂದು ಬೆಸ್ಕಾಂ ಬಿಲ್ ಪಾವತಿ ಅಪ್ ಡೇಟ್ ಆಗಿಲ್ಲ ಎಂಬ ಮೇಸೆಜ್ ಕಳುಹಿಸಿದ್ದಾರೆ. ಆತ್ಮೀಯ ಗ್ರಾಹಕರೇ, ಹಿಂದಿನ ತಿಂಗಳ ಬಿಲ್ ನವೀಕರಿಸದ ಕಾರಣ ಇಂದು ರಾತ್ರಿ 9.30 ಕ್ಕೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ" ಎಂದು ಸಂದೇಶ ಕಳುಹಿಸಲಾಗಿದೆ. ಆಗ ಡಯಾನಾಗೆ ಶರ್ಮಾ ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಕರೆ ಬಂದಿದ್ದು, ಬೆಸ್ಕಾಂ ಅಧಿಕಾರಿ ಎಂದು ಹೇಳಿಕೊಂಡು ಮೊದಲಿಗೆ ನಂಬರ್ ಕೇಳಿದ್ದಾರೆ. ಆತ ಬಿಲ್ ನ ಸರಿಯಾದ ಆರ್ ಆರ್ ಸಂಖ್ಯೆ ಮತ್ತು ಬ್ಯಾಂಕ್ ವಿವರ ನೀಡಿದ್ದಾರೆ. ನಂತರ ಆತ ಯೆಸ್ ಬ್ಯಾಂಕ್ ನಲ್ಲಿರುವ ಜಂಟಿ ಖಾತೆಯನ್ನು ಹ್ಯಾಕ್ ಮಾಡಿ ಹಣ ವಿತ್ ಡ್ರಾ ಮಾಡಿರುವುದಾಗಿ ಡಯಾನಾ ಹೇಳಿದರು. 

ಬ್ಲೇಸ್ ಅವರ ಆಕ್ಸಿಸ್ ಬ್ಯಾಂಕ್ ಖಾತೆ ಹ್ಯಾಕ್ ಮಾಡಲು ಪ್ರಯತ್ನಿಸಿದ್ದು, ರೂ.111 ವಿತ್ ಡ್ರಾ ಮಾಡಿದ್ದಾರೆ. ಬಳಿಕ ರೂ 20,000 ಮತ್ತು ರೂ 40,000 ವಿತ್ ಡ್ರಾ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಆಲರ್ಟ್ ಮ್ಯಾನೇಜರ್  ವಹಿವಾಟುಗಳನ್ನು ನಿರ್ಬಂಧಿಸಿದ್ದರಿಂದ ಹಣ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.

ಈ ಕುರಿತು ಸೈಬರ್ ಪೊಲೀಸರಿಗೆ ವರದಿ ಮಾಡಿದರೂ ವಂಚಕನ ಸಂಖ್ಯೆ  9046830414 ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ಡಯಾನಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, 8987904318 ಎಂಬ ಇನ್ನೊಂದು ಸಂಖ್ಯೆಯಿಂದ ಎರಡನೇ ಸಂದೇಶ ಬಂದಿದೆ ಎಂದು ಅವರು ಹೇಳಿದ್ದಾರೆ. ಬೆಸ್ಕಾಂ ಅಧಿಕಾರಿಗಳಂತೆ ಫೋಸ್ ನೀಡಿ ಜನರ ಅಕೌಂಟ್ ಹ್ಯಾಕ್ ಮಾಡುವುದು ಹೆಚ್ಚಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com