ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಲ್ಲಿ ಪರಿಶೀಲನೆಗೆ ಕಳುಹಿಸಿದ್ದು ಶೇ.5ಕ್ಕಿಂತ ಕಡಿಮೆ!

ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಇನ್ನೊಂದು ವಾರ ಬಾಕಿ. ರಾಜ್ಯದ ಪ್ರಮುಖ ಮೂರು ಪಕ್ಷಗಳ ನಾಯಕರ ಅಬ್ಬರದ ಪ್ರಚಾರ, ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಾಗುತ್ತಿದೆ. 15ನೇ ವಿಧಾನಸಭೆಯ ಕಾರ್ಯನಿರ್ವಹಣಾ ವರದಿಯನ್ನು ತ್ವರಿತವಾಗಿ ಅವಲೋಕಿಸಿದರೆ, ಬಿಜೆಪಿ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಚರ್ಚೆಯಿಲ್ಲದೆ ಹಲವಾರು ಮಸೂದೆಗಳನ್ನು ಅಂಗೀಕರಿಸಿದೆ. 
ವಿಧಾನಸಭೆ(ಸಂಗ್ರಹ ಚಿತ್ರ)
ವಿಧಾನಸಭೆ(ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಇನ್ನೊಂದು ವಾರ ಬಾಕಿ. ರಾಜ್ಯದ ಪ್ರಮುಖ ಮೂರು ಪಕ್ಷಗಳ ನಾಯಕರ ಅಬ್ಬರದ ಪ್ರಚಾರ, ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಾಗುತ್ತಿದೆ. 15ನೇ ವಿಧಾನಸಭೆಯ ಕಾರ್ಯನಿರ್ವಹಣಾ ವರದಿಯನ್ನು ತ್ವರಿತವಾಗಿ ಅವಲೋಕಿಸಿದರೆ, ಬಿಜೆಪಿ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಚರ್ಚೆಯಿಲ್ಲದೆ ಹಲವಾರು ಮಸೂದೆಗಳನ್ನು ಅಂಗೀಕರಿಸಿದೆ. 

ಪಿಆರ್ ಎಸ್ ಶಾಸಕಾಂಗ ಸಂಶೋಧನಾ ವರದಿ ಪ್ರಕಾರ, 2018 ರಿಂದ 2023 ರವರೆಗೆ ಒಟ್ಟು 176 ಮಸೂದೆಗಳನ್ನು ಪರಿಚಯಿಸಲಾಗಿದೆ. ಅವುಗಳಲ್ಲಿ 164 ನ್ನು ಉಭಯ ಸದನಗಳು ಅಂಗೀಕರಿಸಿದವು. ವರ್ಷಕ್ಕೆ ಸರಾಸರಿ 33 ಸಭೆಗಳೊಂದಿಗೆ 167 ಸಭೆಗಳು ನಡೆದರೂ, ಸದನ ಶೇಕಡಾ 86 ಮಸೂದೆಗಳನ್ನು ಅಂಗೀಕರಿಸಿದವು. ಹೆಚ್ಚಿನ ಮಸೂದೆಗಳನ್ನು ಮಂಡಿಸಿದ ಅಧಿವೇಶನದಲ್ಲಿ ಅಂಗೀಕರಿಸಲಾಯಿತು, ಪರಿಶೀಲನೆ ಅಥವಾ ಬದಲಾವಣೆಗಳಿಗೆ ಸಮಯವಿರಲಿಲ್ಲ. 

ಶೇಕಡಾ 5 ಕ್ಕಿಂತ ಕಡಿಮೆ ಮಸೂದೆಗಳನ್ನು ಸಮಿತಿಗಳಿಗೆ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ರಾಜಕೀಯ ವಿಶ್ಲೇಷಕ ಹಾಗೂ ಮೈಸೂರು ವಿಶ್ವವಿದ್ಯಾಲಯದ ಡೀನ್ ಮುಜಾಫರ್ ಅಸ್ಸಾದಿ, ಶಾಸಕಾಂಗ ಸಭೆಯಂತಹ ಸಂಸ್ಥೆಗಳ ಮಹತ್ವ ಕಡಿಮೆಯಾಗಿದೆ. ಹಲವು ವಿಧೇಯಕಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ. ಇದಕ್ಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷವನ್ನು ಸಮಾನ ಹೊಣೆಯಾಗುತ್ತದೆ. ಸದನದಲ್ಲಿ ಗಂಭೀರ ಚರ್ಚೆಗಳಲ್ಲಿ ಯಾರೂ ಆಸಕ್ತಿ ಹೊಂದಿಲ್ಲ ಎನ್ನುತ್ತಾರೆ. 

ಕಳೆದ 5 ವರ್ಷಗಳಲ್ಲಿ ಅಂಗೀಕರಿಸಿದ ಕೆಲವು ಪ್ರಮುಖ ಮಸೂದೆಗಳೆಂದರೆ ಕರ್ನಾಟಕ ಪ್ರಾಣಿ ವಧೆ ಮತ್ತು ಜಾನುವಾರು ಸಂರಕ್ಷಣೆ ಮಸೂದೆ 2020, ಧರ್ಮ ಸ್ವಾತಂತ್ರ್ಯದ ಕರ್ನಾಟಕ ರಕ್ಷಣೆ ಮಸೂದೆ, 2022, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ, 2022. ಮಸೂದೆಯ ಪರಿಶೀಲನೆಗೆ ಸಮಿತಿಯು ಸಾಮಾನ್ಯವಾಗಿ ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸಂಸದೀಯ ಸಮಿತಿಗೆ ಸೂಚಿಸಿದರೆ, ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com