ಕರ್ನಾಟಕ ಚುನಾವಣೆಯ ನಿಖರ ಫಲಿತಾಂಶ ನುಡಿಯುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ: ಡಾ.ನರೇಂದ್ರ ನಾಯಕ್ ಸವಾಲು!

ಕರ್ನಾಟಕ ಚುನಾವಣೆಯ ನಿಖರ ಫಲಿತಾಂಶ ನುಡಿಯುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ ನೀಡಲಾಗುತ್ತದೆ ಎಂದು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ (ಎಫ್‌ಐಆರ್‌ಎ)ದ ಅಧ್ಯಕ್ಷ, ಮಂಗಳೂರಿನ ಡಾ.ನರೇಂದ್ರ ನಾಯಕ್‌ ಘೋಷಣೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉಡುಪಿ: ಕರ್ನಾಟಕ ಚುನಾವಣೆಯ ನಿಖರ ಫಲಿತಾಂಶ ನುಡಿಯುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ ನೀಡಲಾಗುತ್ತದೆ ಎಂದು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ (ಎಫ್‌ಐಆರ್‌ಎ)ದ ಅಧ್ಯಕ್ಷ, ಮಂಗಳೂರಿನ ಡಾ.ನರೇಂದ್ರ ನಾಯಕ್‌ ಘೋಷಣೆ ಮಾಡಿದ್ದಾರೆ.

ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ (ಎಫ್‌ಐಆರ್‌ಎ)ದ ಅಧ್ಯಕ್ಷ, ಮಂಗಳೂರಿನ ಡಾ.ನರೇಂದ್ರ ನಾಯಕ್‌ ಅವರು ಈ ಬಾರಿ ವಿಧಾನಸಭೆ ಚುನಾವಣಾ ಫಲಿತಾಂಶದ ವಿಚಾರದಲ್ಲಿ ಜ್ಯೋತಿಷಿಗಳಿಗೆ 10 ಲಕ್ಷ ರೂ. ಬಹುಮಾನದ ಸವಾಲು ಒಡ್ಡಿದ್ದು, ಸವಾಲಿನಲ್ಲಿ 20 ಪ್ರಶ್ನೆಗಳನ್ನು ನೀಡಿರುವ ಅವರು ಈ ಪ್ರಶ್ನೆಗಳಿಗೆ ನಿಖರ ಉತ್ತರ ಹೇಳುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಯಾವ ಪಕ್ಷ ಕರ್ನಾಟಕದಲ್ಲಿಸರಕಾರ ರಚಿಸುತ್ತದೆ? ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎಷ್ಟು ಸೀಟು ಗೆಲ್ಲುತ್ತವೆ? ಪಕ್ಷೇತರರು ಗೆಲ್ಲುವ ಸೀಟೆಷ್ಟು? ಮಹಿಳಾ ಶಾಸಕರೆಷ್ಟು ಮಂದಿ ಆಯ್ಕೆಯಾಗುತ್ತಾರೆ...ಹೀಗೆ 20 ಪ್ರಶ್ನೆಗಳಿಗೆ ಉತ್ತರಿಸಬೇಕು. ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದವರು ಬಹುಮಾನಕ್ಕೆ ಪಾತ್ರರಾಗುತ್ತಾರೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.

'ವಿಜ್ಞಾನವೆಂದು ಸಾಬೀತು ಮಾಡಿ'
ಜನರಲ್ಲಿ ಅದರಲ್ಲೂ ಮಕ್ಕಳು, ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ನನ್ನ ಗುರಿ. ಮುಕ್ತ ಮನಸ್ಸು ಹೊಂದಿದ್ದೇನೆ. ಜ್ಯೋತಿಷ್ಯವೂ ವಿಜ್ಞಾನವೆಂದು ಸಾಬೀತು ಮಾಡಿದರೆ ಒಪ್ಪಲು ತಯಾರಿದ್ದೇನೆ. ಜ್ಯೋತಿಷಿಗಳಿಂದ ಜನರು ವಂಚನೆಗೆ ಒಳಗಾಗಬಾರದು. ವೈಜ್ಞಾನಿಕ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು, ಭವಿಷ್ಯ ರೂಪಿಸಬೇಕು ಎಂದು ನರೇಂದ್ರ ನಾಯಕ್‌ ಹೇಳಿದ್ದಾರೆ.

ಈ ಹಿಂದೆಯೂ ಜ್ಯೋತಿಷಿಗಳಿಗೆ ಸವಾಲು ಹಾಕಿದ್ದ ನರೇಂದ್ರ ನಾಯಕ್
ಇನ್ನು ಡಾ.ನರೇಂದ್ರ ನಾಯಕ್ ಈ ಹಿಂದೆಯೂ ಕೂಡ ಅಂದರೆ 2009ರಿಂದಲೂ ಸವಾಲು ಹಾಕುತ್ತಾ ಬಂದಿದ್ದಾರೆ. ಈ ಹಿಂದೆ 25 ಪ್ರಶ್ನೆಗಳ ಸವಾಲನ್ನು ಆರಂಭಿಸಿದ್ದ ಅವರು ಇದೀಗ ತಮ್ಮ ಪ್ರಶ್ನೆಗಳ ಸಂಖ್ಯೆಯನ್ನು 20ಕ್ಕೆ ಇಳಿಸಿದ್ದು, ಮಾತ್ರವಲ್ಲದೇ ಬಹುಮಾನದ ಪ್ರಮಾಣವನ್ನು ಕೂಡ 1 ಲಕ್ಷ ರೂ. ನಿಂದ 10 ಲಕ್ಷ ರೂ.ಗಳಿಗೇರಿಸಿದ್ದಾರೆ.

ಯಾರು ಈ ನರೇಂದ್ರ ನಾಯಕ್
1976ರಲ್ಲಿದಕ್ಷಿಣ ಕನ್ನಡ ವಿಚಾರವಾದಿ ಸಂಘ ಸ್ಥಾಪಿಸಿದ್ದರು. ದೇಶಾದ್ಯಂತ ಸಂಚರಿಸಿ ಜನರಲ್ಲಿವೈಜ್ಞಾನಿಕ ಮನೋಭಾವ ಉತ್ತೇಜಿಸಲು ಕಾರ್ಯಾಗಾರ, 2,000 ಪ್ರದರ್ಶನ ನೀಡಿದ್ದಾರೆ. 9 ಭಾಷೆ ನಿರರ್ಗಳವಾಗಿ ಮಾತನಾಡಬಲ್ಲಬಹುಭಾಷಾ ಶಾಸ್ತ್ರಜ್ಞರಾಗಿದ್ದಾರೆ. ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನ ಜೀವ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ, ಸಹಾಯಕ ಪ್ರಾಧ್ಯಾಪಕರಾಗಿ ಸ್ವಯಂ ನಿವೃತ್ತಿ ಹೊಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com