ಮಂಗಳೂರು: ಬಿಜೆಪಿಗೆ ಭಾರಿ ಆಘಾತ, 32 ವರ್ಷಗಳ ಕಾಲ RSS ನಲ್ಲಿದ್ದ ಸತೀಶ್ ಪ್ರಭು ಕಾಂಗ್ರೆಸ್‌ ಸೇರ್ಪಡೆ

ಮಹತ್ವದ ಬೆಳವಣಿಗೆಯಲ್ಲಿ 32 ವರ್ಷಗಳ ಕಾಲ RSS ನಲ್ಲಿ ಸೇವೆ ಸಲ್ಲಿಸಿದ್ದ ಮಂಗಳೂರಿನ ಹಿರಿಯ ಮುಖಂಡ ಸತೀಶ್ ಪ್ರಭು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 
ಸತೀಶ್ ಪ್ರಭು ಕಾಂಗ್ರೆಸ್‌ ಸೇರ್ಪಡೆ
ಸತೀಶ್ ಪ್ರಭು ಕಾಂಗ್ರೆಸ್‌ ಸೇರ್ಪಡೆ

ಮಂಗಳೂರು: ಮಹತ್ವದ ಬೆಳವಣಿಗೆಯಲ್ಲಿ 32 ವರ್ಷಗಳ ಕಾಲ RSS ನಲ್ಲಿ ಸೇವೆ ಸಲ್ಲಿಸಿದ್ದ ಮಂಗಳೂರಿನ ಹಿರಿಯ ಮುಖಂಡ ಸತೀಶ್ ಪ್ರಭು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 

ಹೌದು.. ಬಿಜೆಪಿ, ಆರ್‌ಎಸ್‌ಎಸ್‌ನಲ್ಲಿ 32 ವರ್ಷಗಳಿಂದ ವಿವಿಧ ಜವಾಬ್ದಾರಿ ವಹಿಸಿಕೊಂಡಿದ್ದ ಸತೀಶ್ ಪ್ರಭು 2014ರಲ್ಲಿ ಮೋದಿ ಅವರನ್ನು ಮಂಗಳೂರಿಗೆ ಕರೆಸಿ ಪಕ್ಷ ಸಂಘಟಿಸಿದ್ದರು. ಈಗಿನ ಬಿಜೆಪಿಯಿಂದ ಜನಹಿತ ಸಾಧ್ಯವಿಲ್ಲ ಎಂದು ಹೇಳಿ ಸತೀಶ್ ಪ್ರಭು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಮಂಗಳೂರು ಶಾಸಕ ವೇದವ್ಯಾಸ ಕಾಮತ್ ವಿರುದ್ಧ ನಿಲುವು ಹೊಂದಿರುವ ಸತೀಶ್‌ ಪ್ರಭು, ಮಂಗಳೂರಿನ ವೆಂಕಟರಮಣ ದೇವಸ್ಥಾನದಲ್ಲಿ ಟ್ರಸ್ಟಿಯೂ ಆಗಿದ್ದಾರೆ. 

ಮಂಗಳೂರಿನಲ್ಲಿ ನಿರ್ಣಾಯಕ ಆಗಿರುವ ಜಿಎಸ್‌ಬಿ ಸಮುದಾಯಕ್ಕೆ ಸೇರಿದ ಸತೀಶ್ ಪ್ರಭು ಅವರು ನಾಲ್ವರು ಮಾಜಿ ಕಾರ್ಪೊರೇಟರ್‌ಗಳ ಜೊತೆ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಆಗಿದ್ದಾರೆ.  ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಕ್ಷದ ಧ್ವಜ ನೀಡಿ ಸತೀಶ್‌ ಪ್ರಭು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಮಂಗಳೂರು ಕಾಂಗ್ರೆಸ್ ಘಟಕಕ್ಕೆ ಮತ್ತಷ್ಟು ಬಲ: ಬಿಕೆ ಹರಿಪ್ರಸಾದ್
ಈ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿ ಹಾಗೂ ನಾನಾ ಸಂಘಟನೆಯಲ್ಲಿ ಸುಮಾರು 3 ದಶಕಗಳ ಕಾಲ ಸೇವೆ ಮಾಡಿದ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಬಿಜೆಪಿಯಲ್ಲಿ ಪಕ್ಷಾಂತರ ಸುನಾಮಿ ಆರಂಭವಾಗಿದ್ದು, ಈವರೆಗೆ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿದಂತೆ 47 ಮಂದಿ ಹಿರಿಯ ನಾಯಕರು ಹಾಗೂ 6 ಮಂದಿ ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇದರಿಂದ ಬಿಜೆಪಿ ಮುಳುಗುತ್ತಿರುವ ಹಡಗು ಆಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಈ ರಾಜ್ಯದಲ್ಲಿ ಆಡಳಿತ ನಡೆಸಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com