ಸಿಬ್ಬಂದಿ ಕೊರತೆ: ಸೊರಗಿದ ಅರಣ್ಯ ಇಲಾಖೆ

ಪಶುವೈದ್ಯರ ತೀವ್ರ ಕೊರತೆಯಿಂದಾಗಿ ಮಾನವ-ಪ್ರಾಣಿ ಸಂಘರ್ಷದ ಪ್ರಕರಣಗಳನ್ನು ನಿಭಾಯಿಸುವುದು ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವಲ್ಲಿ ಅರಣ್ಯ ಇಲಾಖೆ ಸಂಕಷ್ಟವನ್ನು ಎದುರಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಪಶುವೈದ್ಯರ ತೀವ್ರ ಕೊರತೆಯಿಂದಾಗಿ ಮಾನವ-ಪ್ರಾಣಿ ಸಂಘರ್ಷದ ಪ್ರಕರಣಗಳನ್ನು ನಿಭಾಯಿಸುವುದು ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವಲ್ಲಿ ಅರಣ್ಯ ಇಲಾಖೆ ಸಂಕಷ್ಟವನ್ನು ಎದುರಿಸುತ್ತಿದೆ.

ಇಲಾಖೆಯಲ್ಲಿ ಮಂಜೂರಾದ 11 ಹುದ್ದೆಗಳ ಪೈಕಿ ಕೇವಲ ಮೂವರು ಪಶುವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮೂವರು ಪಶುವೈದ್ಯರು ಪ್ರಸ್ತುತ ಬಂಡೀಪುರ, ನಾಗರಹೊಳೆ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬನ್ನೇರುಘಟ್ಟ ವನ್ಯಜೀವಿ ರಕ್ಷಣಾ ಕೇಂದ್ರ ಹಾಗೂ ಶಿವಮೊಗ್ಗ ವೃತ್ತದಲ್ಲಿಯೂ ಪಶುವೈದ್ಯರ ನಿಯೋಜಿಸಲಾಗಿದೆ. ಈ ಹಿಂದೆ ರಕ್ಷಣಾ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಒಳಗಾಗಿದ್ದ ಡಾ.ವಿನಯ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದ್ದಾರೆ.

ಇಲಾಖೆ ಅನುಭವಿಸುತ್ತಿರುವ ಸಮಸ್ಯೆಯನ್ನು ಅಧಿಕಾರಿಯೊಬ್ಬರು ದೃಢಪಡಿಸಿದ್ದು, ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ಅರಣ್ಯ ವಲಯಗಳಿಗೆ ಪಶುವೈದ್ಯರ ಅಗತ್ಯವಿದೆ. ಹೀಗಾಗಿ ಕನಿಷ್ಠ 45 ಪಶುವೈದ್ಯರ ನೇಮಕಾತಿ ಅಗತ್ಯವಿದೆ ಎಂದು ಹೇಳಿದ್ದಾರೆ.

ಇಲಾಖೆಯು ಐದು ವರ್ಷಗಳ ಕಾಲ ಪಶು ಸಂಗೋಪನಾ ಇಲಾಖೆಯಿಂದ ಪಶುವೈದ್ಯರನ್ನು ನಿಯೋಜನೆಗೊಳಿಸುತ್ತಿದೆ. ನಂತರ ಅವರ ಕಾರ್ಯಕ್ಷಮತೆ ಮತ್ತು ಇಲಾಖೆಯ ಅವಶ್ಯಕತೆಗಳನ್ನು ಆಧರಿಸಿ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಗುತ್ತದೆ ಅಥವಾ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಲಾಖೆಗೆ ತಜ್ಞರ ಅಗತ್ಯವಿದೆ, ಆದರೆ, ನೇಮಕ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಖಾಲಿ ಹುದ್ದೆಗಳಿಗೆ ಅರ್ಜಿಗಳ ಆಹ್ವಾನಿಸಲಾಗುತ್ತಿದೆ. ಆದರೆ, ಕೆಲಸದ ಒತ್ತಡ ಹೆಚ್ಚಾಗಿರುವ ಕಾರಣ ಅರ್ಜಿ ಸಲ್ಲಿಸಲು ಯಾರೂ ಮುಂದೆ ಬರುತ್ತಿಲ್ಲ. ಪಶುವೈದ್ಯರು ದಿನಕ್ಕೆ 200 ಕಿ.ಮೀಗಿಂತ ಕಡಿಮೆಯಿಲ್ಲದೆ ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿರುತ್ತಾರೆ. ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಈ ಸಂಬಂಧ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನಿಯಮಿತವಾಗಿ ವರದಿಗಳನ್ನು ಕಳುಹಿಸುವುದು ಅತ್ಯಗತ್ಯವಾಗಿದೆ ಎಂದು ಪಶುವೈದ್ಯರೊಬ್ಬರು ತಿಳಿಸಿದ್ದಾರೆ.

ಸಿಬ್ಬಂದಿಗಳ ಕೊರತೆಯಿಂದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಎನ್‌ಟಿಸಿಎ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿಲ್ಲ. NTCA ಮಾರ್ಗಸೂಚಿಗಳ ಪ್ರಕಾರ, ಪ್ರತಿ ಅರಣ್ಯ ವ್ಯಾಪ್ತಿಯಲ್ಲಿ ಒಬ್ಬ ಪಶುವೈದ್ಯರಿರಬೇಕು. ಆದರೆ, ತುರ್ತು ಸಂದರ್ಭದಲ್ಲಿ ಪಶು ವೈದ್ಯರ ಸಹಾಯಕ್ಕೆ ಸಹಾಯಕರಿಲ್ಲಂತಾಗಿದೆ. ಇದರಿಂದಾಗಿ ಚಾಲಕರು ಮತ್ತು ಸಿಬ್ಬಂದಿಗಳ ಸಹಾಯವನ್ನು ಪಡೆಯುವ ಅನಿವಾರ್ಯತೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ಸಮಯದಲ್ಲಿ ತಮಿಳುನಾಡಿನ ಪಶುವೈದ್ಯರನ್ನು ಕರ್ನಾಟಕಕ್ಕೆ ಕರೆತಂದ ಉದಾಹರಣೆಗಳೂ ಇವೆ ಎಂದು ತಿಳಿಸಿದ್ದಾರೆ.

ವನ್ಯಜೀವಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ಮಾತನಾಡಿ, ಸಿಬ್ಬಂದಿ ಕೊರತೆಯ ನಡುವೆಯೂ ಇಲಾಖೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಅಗತ್ಯವಿದ್ದಾಗ ಸ್ಥಳೀಯ ಪಶುವೈದ್ಯರ ಸೇವೆಗಳನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com