ಕೆ.ಸಿ.ವೇಣುಗೋಪಾಲ್ ಮೇಲೆ ಸೈಬರ್ ವಂಚಕರ ಕಣ್ಣು: ಫೋನ್ ನಂಬರ್ ಬಳಸಿ, ಹಲವರಿಗೆ ಸೀಟು ನೀಡುವ ಆಮಿಷ!

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಸೈಬರ್ ವಂಚಕರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ.
ಕೆಸಿ ವೇಣುಗೋಪಾಲ್.
ಕೆಸಿ ವೇಣುಗೋಪಾಲ್.

ಕೊಚ್ಚಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಸೈಬರ್ ವಂಚಕರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ.

ವೇಣುಗೋಪಾಲ್ ಅವರ ಪೋನ್ ನಂಬರ್'ನ್ನು ಬಳಸಿಕೊಂಡು ಸೈಬರ್ ವಂಚಕರು ಹಲವು ನಾಯಕರ ಸಂಪರ್ಕಿಸಿದ್ದು, ಸೀಟು ನೀಡುವುದಾಗಿ ಆಮಿಷ ಒಡ್ಡಿದ್ದಾರೆ.

ಈ ವಿಚಾರ ತಿಳಿದ ವೇಣುಗೋಪಾಲ್ ಅವರ ಕಾರ್ಯದರ್ಶಿ ಶರತ್ ಚಂದ್ರನ್ ಕೆ ಅವರು, ಪೊಲೀಸರನ್ನು ಸಂಪರ್ಕಿಸಿದ್ದು, ದೂರು ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಮೇ 14 ರಂದು ಕೊಚ್ಚಿ ಸೈಬರ್ ಪೊಲೀಸ್ ಠಾಣೆಯಲ್ಲಿ ಶರತ್ ಅವರು, ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಏಪ್ರಿಲ್ 4 ರಂದು ವೇಣುಗೋಪಾಲ್ ಅವರ ಫೋನ್ ನಾಲ್ವರಿಗೆ ದೂರವಾಣಿ ಕರೆಗಳು ಹೋಗಿವೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ವಂಚಕರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸಮಯದಲ್ಲಿ, ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿತ್ತು. ಈ ಸಂದರ್ಭದಲ್ಲಿ ವೇಣುಗೋಪಾಲ್ ಅವರ ಫೋನ್ ನಂಬರ್ ಬಳಸಿಕೊಂಡಿರುವ ವಂಚಕರು, ಟಿಕೆಟ್'ಗೆ ಬದಲಾಗಿ ಹಣ ನೀಡುವಂತೆ ನಾಲ್ವರನ್ನು ಸಂಪರ್ಕಿಸಿದ್ದಾರೆ. ಈ ಟ್ರ್ಯಾಪ್ ನಲ್ಲಿ ಯಾರೂದರೂ ಹಣ ಕಳೆದುಕೊಂಡಿದ್ದಾರೆಂಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿಯೂ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಮೊಬೈಲ್ ಆ್ಯಪ್ ಬಳಸಿ ಈ ವಂಚನೆ ನಡೆಸಲಾಗಿದೆ ಎಂಬುದು ನಮಗೆ ತಿಳಿದು ಬಂದಿದೆ. ಈ ವಂಚನೆಯಲ್ಲಿ ರಾಜಸ್ಥಾನ ಮೂಲದ ಗ್ಯಾಂಗ್‌ನ ಕೈವಾಡವಿರುವ ಶಂಕೆಗಳಿವೆ. ವಂಚಕರು ಮಾಡಿದ ದೂರವಾಣಿ ಕರೆಯನ್ನು ಯೋಗೇಶ್ ಬಾಬು ಮತ್ತು ಮನಮೋಹನ್ ಎಂಬ ಇಬ್ಬರು ವ್ಯಕ್ತಿಗಳು ಸ್ವೀಕರಿಸಿರುವುದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಜನರಿಂದ ಹಣ ಲಪಟಾಯಿಸಲು ವಂಚಕರು ಇಂತಹ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆದರೆ, ವೇಣುಗೋಪಾರ್ ರಂತಹ ದೊಡ್ಡ ವ್ಯಕ್ತಿಯೊಬ್ಬರು ವಂಚಕರ ಗುರಿಯಾಗಿರುವುದು  ಇದೇ ಮೊದಲು. ಇದು ಸಂಘಟಿತ ಸೈಬರ್ ವಂಚಕರ ಕೃತ್ಯವೆಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.

ಸೈಬರ್ ಸೆಕ್ಯುರಿಟಿ ಸ್ಟಾರ್ಟ್‌ಅಪ್ ಟೆಕ್ನಿಸಾಂಕ್ಟ್‌ನ ಸಂಸ್ಥಾಪಕ ಮತ್ತು ಸಿಇಒ ನಂದಕಿಶೋರ್ ಹರಿಕುಮಾರ್ ಮಾತನಾಡಿ, ಇಂತಹ ವಂಚನಗಳಿಗೆ ಅಪ್ಲಿಕೇಶನ್‌ಗಳು ಲಭ್ಯವಿದೆ. ಇಂತಹ ವಂಚನೆಗಳನ್ನು ಸಾಮಾನ್ಯ ಕರೆಗಳಂತೆ ಕಾಣುವ ಇಂಟರ್ನೆಟ್ ಕರೆಗಳ ಮೂಲಕ ನಡೆಸಲಾಗುತ್ತದೆ. ಕಾಲರ್ ಐಡಿಗಳಿಂದಲೂ ಸಂಖ್ಯೆಯನ್ನು ಮರೆಮಾಚುವ ತಂತ್ರಗಳಿವೆ. ಕೆಲವು ವರ್ಷಗಳ ಹಿಂದೆ, ತಮ್ಮ ಮೇಲಿನ ಪ್ರಕರಣಗಳ ಮುಚ್ಚಿಹಾಕುವಂತೆ ಸರ್ಕಾರಿ ಕಚೇರಿಗಳ ಸಂಖ್ಯೆಗಳಿಂದ ದೂರವಾಣಿ ಕರೆಗಳ ಮಾಡಿರುವುದೂ ವರದಿಯಾಗಿತ್ತು. ಸಾಮಾನ್ಯವಾಗಿ ಇಂತಹ ಆ್ಯಪ್ ಗಳನ್ನು ಆಪ್ ಸ್ಟೋರ್ ಗಳಿಂದ ತೆಗೆದುಹಾಕಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com