ಮತದಾನದ ಪ್ರಮಾಣ ಮೊದಲೇ ಕಡಿಮೆ, ಅದರ ಜೊತೆಗೆ ನೋಟಾ ಚಲಾವಣೆ ಹೆಚ್ಚು: ಇದು ಬೆಂಗಳೂರಿನ ಚುನಾವಣೆ ಕಥೆ!

2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನೋಟಾ (ಮೇಲಿನ ಯಾವುದೂ ಇಲ್ಲ) ಗೆ ಅತಿ ಹೆಚ್ಚು ಮತಗಳನ್ನು ಪಡೆದ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.
ಮತದಾನದ ಪ್ರಮಾಣ ಮೊದಲೇ ಕಡಿಮೆ, ಅದರ ಜೊತೆಗೆ ನೋಟಾ ಚಲಾವಣೆ ಹೆಚ್ಚು: ಇದು ಬೆಂಗಳೂರಿನ ಚುನಾವಣೆ ಕಥೆ!
Updated on

ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನೋಟಾ (ಮೇಲಿನ ಯಾವುದೂ ಇಲ್ಲ) ಗೆ ಅತಿ ಹೆಚ್ಚು ಮತಗಳನ್ನು ಪಡೆದ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.

ಮಹದೇವಪುರ, ಬೆಂಗಳೂರು ದಕ್ಷಿಣ, ಕೆಆರ್ ಪುರಂ, ರಾಜರಾಜೇಶ್ವರಿ ನಗರ, ಯಶವಂತಪುರ, ಬೊಮ್ಮನಹಳ್ಳಿ, ಬ್ಯಾಟರಾಯನಪುರ ಮತ್ತು ಪದ್ಮನಾಭನಗರ ಕ್ಷೇತ್ರಗಳಲ್ಲಿ ನೋಟಾಕ್ಕೆ ಚಲಾವಣೆಯಾದ ಅತಿ ಹೆಚ್ಚು ಮತಗಳ ಪಟ್ಟಿಯಲ್ಲಿ ಮೊದಲ 10 ಸ್ಥಾನಗಳಲ್ಲಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು  3,91,54,967 ಮತಗಳು ಚಲಾವಣೆಯಾಗಿದ್ದು ಅದರಲ್ಲಿ2, 69,763 (0.69%) ಮತಗಳು ನೋಟಾಗೆ ಈ ಬಾರಿ ಹೋಗಿದೆ ಎಂದು ವರದಿ ತಿಳಿಸಿದೆ.

ನೋಟಾ ಚಲಾವಣೆಯನ್ನು  2013 ರಲ್ಲಿ ಪರಿಚಯಿಸಲಾಯಿತು, ಇದು ಪ್ರಜಾಪ್ರಭುತ್ವಕ್ಕೆ ಮುಖ್ಯವಾಗಿದೆ, ನೋಟಾ ಬಟನ್  ಪರಿಚಯಿಸುವುದರಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೆಚ್ಚಿಸಬಹುದು ಮತ್ತು ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆಗೆ ಸಮನಾಗಿರುತ್ತದೆ ಎಂಬುದು ಇದು ಉದ್ದೇಶವಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದಿರುವುದು ಹತಾಶೆ ಮತ್ತು ನಿರಾಸಕ್ತಿ ಉಂಟುಮಾಡುತ್ತದೆ, ಇದು ಭಾರತದಂತಹ ಬೆಳೆಯುತ್ತಿರುವ ಪ್ರಜಾಪ್ರಭುತ್ವದ ಆರೋಗ್ಯಕರ ಸಂಕೇತವಲ್ಲ ಎಂದು ಎಡಿಆರ್ ವರದಿ ಹೇಳಿದೆ.

ಬೆಂಗಳೂರಿನಲ್ಲಿ ಸತತವಾಗಿ ಅತಿ ಕಡಿಮೆ ಮತದಾನವಾಗಿದ್ದು, ನೋಟಾಗೆ ಹೆಚ್ಚಿನ ಸಂಖ್ಯೆಯ ಮತಗಳು ಬಂದಿರುವುದು ನಗರದ ಜನತೆಯ ಸಿನಿಕತನವನ್ನು ತೋರಿಸುತ್ತದೆ ಎಂದು ಲೋಕನೀತಿ ನೆಟ್‌ವರ್ಕ್‌ನ ರಾಷ್ಟ್ರೀಯ ಸಂಯೋಜಕ ಪ್ರೊಫೆಸರ್ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.

ರಾಜಕೀಯಕ್ಕೆ ಜನರ ದೃಷ್ಟಿಕೋನವು ತುಂಬಾ ವಿಭಿನ್ನವಾಗಿದೆ ಮತ್ತು ಎಲ್ಲಾ ರಾಜಕಾರಣಿಗಳು ಭ್ರಷ್ಟರು ಮತ್ತು ರಾಜಕೀಯದಲ್ಲಿ ಯಾವುದೇ ಭರವಸೆಯಿಲ್ಲ ಎಂದು ಅವರು ನಂಬುತ್ತಾರೆ, ಅದು ನಿಜವಾಗಿ ಸಮಾಜದ ಕನ್ನಡಿ ಎಂದು ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದು ಅವರು ಹೇಳಿದರು. ಯಾವ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೆ ತಮಗೇನು  ಎಂಬ ಮನಸ್ಥಿತಿಯಿಂದ ಸಂಬಳ ಪಡೆಯುವ ವರ್ಗವು ಚುನಾವಣೆಯಲ್ಲಿ ಪ್ರಭಾವಿತವಾಗುವುದಿಲ್ಲ ಎಂದು ಮತ್ತೊಬ್ಬ ರಾಜಕೀಯ ವಿಶ್ಲೇಷಕ ರಾಜೇಂದ್ರ ಚೆನ್ನಿಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com