UPSC ಫಲಿತಾಂಶ: ಮೈಸೂರಿನ ಸೌರಭ್‌ಗೆ 260ನೇ ರ‍್ಯಾಂಕ್‌

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2022 ರ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರು ವಿಶ್ವ ವಿದ್ಯಾನಿಲಯದ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಕೆಂಪರಾಜು ಅವರ ಪುತ್ರ ಕೆ. ಸೌರಭ್ 260 ನೇ ರ‍್ಯಾಂಕ್‌ ಪಡೆದಿದ್ದಾರೆ.
ಸೌರಭ್.
ಸೌರಭ್.
Updated on

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2022 ರ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರು ವಿಶ್ವ ವಿದ್ಯಾನಿಲಯದ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಕೆಂಪರಾಜು ಅವರ ಪುತ್ರ ಕೆ. ಸೌರಭ್ 260 ನೇ ರ‍್ಯಾಂಕ್‌ ಪಡೆದಿದ್ದಾರೆ.

ಉತ್ತರಾಖಂಡದ ಡೆಹ್ರಾಡೂನ್'ನಲ್ಲಿ ನಡೆಯುತ್ತಿರುವ ತರಬೇತಿಯಲ್ಲಿ ಪಾಲ್ಗೊಂಡಿರುವ ಇವರು, ತಮ್ಮ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್​ ಮಾಡಿದ್ದಾರೆ. ಸೌರಭ್ ಎಂ.ಟೆಕ್ ಪದವೀಧರರಾಗಿದ್ದು, ಸಮಾಜಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಎದುರಿಸಿದ್ದರು. ಇವರ ತಾಯಿ ಡಾ.ಜಾನಕಿ ಪ್ರಾಧ್ಯಾಪಕರಾಗಿದ್ದಾರೆ.

ಸೆಪ್ಟೆಂಬರ್ 2022 ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಇನ್ನೊಬ್ಬ ಅಭ್ಯರ್ಥಿ ಪೂಜಾ ಮುಕುಂದ್ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್​ ಮಾಡಿದ್ದು, 390ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಇಂಜಿನಿಯರಿಂಗ್ ಪದವೀಧರಾಗಿದ್ದಾರೆ.

2019ರಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದೆ. 2020ರಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಪರೀಕ್ಷೆಗಾಗಿ ಯಾವುದೇ ಕೋಚಿಂಗ್ ಸೆಂಟರ್ ನಿಂದ ತರಬೇತಿ ಪಡೆಯಲಿಲ್ಲ ಎಂದು ಪೂಜಾ ಮುಕುಂದ್ ಹೇಳಿದ್ದಾರೆ.

ತಾಯಿ ಇಂಥದ್ದೊಂದು ಪರೀಕ್ಷೆ ಪಾಸ್ ಮಾಡಬೇಕೆಂಬ ಆಸೆ ಹೊಂದಿದ್ದರು. ಸಾಕಷ್ಟು ಪ್ರಯತ್ನ ನಡೆಸಿ ಅವರ ಆಸೆಯಂತೆ ಸಾಧನೆ ಮಾಡಿದ್ದೇನೆ. ನಾನು ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗಿ ತಯಾರಿ ಮಾಡಿಲ್ಲ. ಮನೆಯಲ್ಲೇ ಎಲ್ಲ ತಯಾರಿ ಮಾಡಿದ್ದೆ. ಕುಟುಂಬದ ಸಹಕಾರದಿಂದ ಸಾಧನೆ ಸಾಧ್ಯವಾಯಿತು" ಎಂದು ತಿಳಿಸಿದ್ದಾರೆ.
ಶ್ರದ್ಧೆ ಮತ್ತು ಪರಿಶ್ರಮವಿಲ್ಲದೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟ. ನನ್ನ ಹೆತ್ತವರಿಲ್ಲದೆ, ನಾನು ಯಶಸ್ವಿಯಾಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ತಾಯಿಯ ಕನಸನ್ನು ನನಸು ಮಾಡಿದ್ದೇನೆಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳಾದ ಐಎನ್ ಮೇಘನಾ ಮತ್ತು ಶ್ರುತಿ ಯರಗಟ್ಟಿ ಕ್ರಮವಾಗಿ 617 ಮತ್ತು 362 ನೇ ಸ್ಥಾನ ಪಡೆದಿದ್ದಾರೆ.

30 ವರ್ಷದ ಶ್ರುತಿ ಕೂಡ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. “ಈ ಸಮಯದಲ್ಲಿ ವಿಫಲತೆ ಮತ್ತು ಯಶಸ್ಸನ್ನು ಎದುರಿಸುವಾಗ ಯಾವಾಗಲೂ ನನ್ನ ಬೆಂಬಲಕ್ಕೆ ನಿಂತ ನನ್ನ ಹೆತ್ತವರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಶಾಲೆಯ ಶಿಕ್ಷಕರು ಪರೀಕ್ಷೆಗೆ ಹಾಜರಾಗುವಾಗ ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಸಿದರು. ನಾನು ಐಎಎಸ್ ಅಧಿಕಾರಿಯಾಗಿ ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಇಷ್ಟಪಡುತ್ತೇನೆ. ಆದರೆ, ನನಗೆ ಯಾವ ಕೇಡರ್ ಅನ್ನು ನಿಗದಿಪಡಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಶ್ರುತಿ ಹೇಳಿದ್ದಾರೆ.

ಅಕ್ಕನ ಹಾದಿಯಲ್ಲೇ ಇದೀಗ ಶ್ರುತಿ ಅವರ ಒಡಹುಟ್ಟಿದ ಅರುಣ್ ಮತ್ತು ವೀರೇಶ್ ಕೂಡ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com